ADVERTISEMENT

ಹೊಸ ಮೆಟ್ರೊ ಬೋಗಿಗಳ ಖರೀದಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 20:04 IST
Last Updated 27 ಮಾರ್ಚ್ 2017, 20:04 IST
ಹೊಸ ಮೆಟ್ರೊ ಬೋಗಿಗಳ ಖರೀದಿ
ಹೊಸ ಮೆಟ್ರೊ ಬೋಗಿಗಳ ಖರೀದಿ   

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) 150 ಹೊಸ ಬೋಗಿಗಳನ್ನು ಪೂರೈಸುವ ಗುತ್ತಿಗೆಯನ್ನು ಬಿಎಂಇಎಲ್‌ಗೆ ನೀಡಲಾಗಿದೆ ಎಂದು  ನಿಗಮದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಸಿಂಗ್ ಖರೋಲ ತಿಳಿಸಿದರು.

ನಿಗಮವು 2016ರ ಅಕ್ಟೋಬರ್‌ನಲ್ಲಿ ಹೊಸ ಬೋಗಿಗಳ ಖರೀದಿಗೆ ಟೆಂಡರ್‌ ಆಹ್ವಾನಿಸಿತ್ತು. ಗುತ್ತಿಗೆ ಪಡೆಯುವ ಸಂಸ್ಥೆಯು 150 ಬೋಗಿಗಳನ್ನು ನಿರ್ಮಿಸಿ ಪೂರೈಸಬೇಕು. ಕಾಲಕಾಲಕ್ಕೆ ಅವುಗಳ  ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು ಎಂದು ಷರತ್ತು ವಿಧಿಸಲಾಗಿದೆ.

2018ರ ಜೂನ್‌ ತಿಂಗಳಲ್ಲಿ ಅವುಗಳನ್ನು ಪೂರೈಸಲು ಆರಂಭಿಸಲಿದೆ. 2018ರ ಡಿಸೆಂಬರ್‌ ಒಳಗೆ 150 ಬೋಗಿಗಳನ್ನು ಬಿಎಂಇಎಲ್‌ ಪೂರೈಸಬೇಕಿದೆ.

ADVERTISEMENT

ಸದ್ಯಕ್ಕೆ ನಮ್ಮ ಮೆಟ್ರೊ ರೈಲುಗಳು ಮೂರು ಬೋಗಿಗಳನ್ನು ಮಾತ್ರ ಹೊಂದಿವೆ. ದಟ್ಟಣೆ ಅವಧಿಯಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಂದು ರೈಲು ಸಂಚಾರ ನಡೆಸಿದರೂ ಪ್ರಯಾಣಿಕರು ಕಿಕ್ಕಿರಿದು ತುಂಬಿರುತ್ತಾರೆ.

ಹೆಚ್ಚುವರಿ ಬೋಗಿಗಳು ಲಭ್ಯವಾದ ಬಳಿಕ ಪ್ರತಿ ರೈಲಿನ ಬೋಗಿಗಳ ಸಂಖ್ಯೆಯಲ್ಲಿ ಹೆಚ್ಚಿಸಲು ನಿಗಮವು ಸಿದ್ಧತೆ ನಡೆಸಿದೆ.  

ಬಿಎಂಇಎಲ್‌ 2002ರಿಂದಲೂ ಹೈಟೆಕ್‌ ಮೆಟ್ರೊ ಬೋಗಿಗಳನ್ನು ತಯಾರಿಸುತ್ತಿದೆ. ದೆಹಲಿ, ಬೆಂಗಳೂರು ಹಾಗೂ ಜೈಪುರ ಮೆಟ್ರೊ ನಿಗಮಗಳಿಗೆ ಸಂಸ್ಥೆಯು ಒಟ್ಟು 1 ಸಾವಿರಕ್ಕೂ ಅಧಿಕ ಬೋಗಿಗಳನ್ನು ಪೂರೈಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.