ADVERTISEMENT

‘ಅಸಮಾನತೆ ನಿರ್ಮೂಲನೆ ಅಂಬೇಡ್ಕರ್‌ ಧ್ಯೇಯ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 19:30 IST
Last Updated 16 ಸೆಪ್ಟೆಂಬರ್ 2014, 19:30 IST
ಯಲಹಂಕದ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ‘ಅಂಬೇಡ್ಕರ್‌ ವಿಶೇಷ ಉಪನ್ಯಾಸಮಾಲೆ’ ಕಾರ್ಯಕ್ರಮವನ್ನು ಬೆಂ.ವಿ.ವಿ.ಬಾಬಾಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಉದ್ಘಾಟಿಸಿದರು. ಲೇಖಕ ಮಂಗಳೂರು ವಿಜಯ, ಪ್ರಾಂಶುಪಾಲ ಡಾ. ಎಸ್‌.ಎನ್‌.ವೆಂಕಟೇಶ್‌ ಇತರರು ಇದ್ದಾರೆ
ಯಲಹಂಕದ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ‘ಅಂಬೇಡ್ಕರ್‌ ವಿಶೇಷ ಉಪನ್ಯಾಸಮಾಲೆ’ ಕಾರ್ಯಕ್ರಮವನ್ನು ಬೆಂ.ವಿ.ವಿ.ಬಾಬಾಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಉದ್ಘಾಟಿಸಿದರು. ಲೇಖಕ ಮಂಗಳೂರು ವಿಜಯ, ಪ್ರಾಂಶುಪಾಲ ಡಾ. ಎಸ್‌.ಎನ್‌.ವೆಂಕಟೇಶ್‌ ಇತರರು ಇದ್ದಾರೆ   

ಯಲಹಂಕ: ಸಮಾಜದಲ್ಲಿ ಅನ್ಯಾಯ ಮತ್ತು ಅಸಮಾನತೆ ತೊಲಗಿ, ಅವಕಾಶಗಳಿಂದ ವಂಚಿತರಾದವರಿಗೆ ಸಮಾನ ಹಾಗೂ ವಂಚನೆಗೊಳಗಾ­ದವರಿಗೆ ವಿಶೇಷವಾದ ಅವಕಾಶಗಳು ಸಿಗಬೇಕು ಎಂಬುದು ಅಂಬೇಡ್ಕರ್‌ ಅವರ ಮೂಲ ಉದ್ದೇಶ ಮತ್ತು ಧ್ಯೇಯವಾಗಿತ್ತು ಎಂದು ಲೇಖಕ ಮಂಗಳೂರು ವಿಜಯ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯ, ಬಾಬಾ­ಸಾಹೇಬ್‌ ಡಾ.ಬಿ.ಆರ್‌.­ಅಂಬೇ­ಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ  ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯ­ದಲ್ಲಿ ಆಯೋಜಿಸಿದ್ದ ‘ಅಂಬೇಡ್ಕರ್‌ ವಿಶೇಷ ಉಪನ್ಯಾಸಮಾಲೆ’ ಕಾರ್ಯ­ಕ್ರಮ­ದಲ್ಲಿ ಮಾತನಾಡಿದರು.

ಅಂಬೇಡ್ಕರ್‌ ಅವರು ಸಂವಿಧಾನ­ದಲ್ಲಿ ಮಹಿಳೆಯರಿಗಾಗಿ ಒದಗಿಸಿರುವ ಹಕ್ಕುಗಳು ಮತ್ತು ಅಧಿಕಾರಗಳು ಎಷ್ಟರಮಟ್ಟಿಗೆ ದೊರಕಿವೆ. ದೊರಕದಿರು­ವುದಕ್ಕೆ ಕಾರಣಗಳು, ಅವುಗಳ ನಿವಾ­ರ­ಣೆಗೆ ಪರಿಹಾರಗಳೇನು ಎಂಬುದರ ಕುರಿತು ಗಂಭೀರವಾದ ಚರ್ಚೆಗಳು ನಡೆ­ಯ­­ಬೇಕಾಗಿದೆ.  ಆ ಮೂಲಕ ಪರಿಹಾರ­ಗಳನ್ನು ಕಂಡು­ಕೊಂಡರೆ, ಸಮಾನತೆಯ ಸಮಾಜವನ್ನು ನಿರ್ಮಾಣಮಾಡಲು ಸಾಧ್ಯವಿದೆ ಎಂದರು.

ಬೆಂ.ವಿ.ವಿ. ಬಾಬಾಸಾಹೇಬ್‌ ಡಾ.ಬಿ.ಆರ್‌.­ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಮಾತ ನಾಡಿ, ಇತ್ತೀಚೆಗೆ ಮಹಿಳೆಯರ ಮೇಲೆ  ನಿರಂತರ ಅತ್ಯಾಚಾರಗಳು ಹಾಗೂ ದೌರ್ಜನ್ಯಗಳು ನಡೆಯುತ್ತಿರುವುದು ದುರದೃಷ್ಟಕರ. ಇದನ್ನು ಕೇವಲ ಮಹಿಳೆಯರಷ್ಟೇ ಅಲ್ಲದೆ, ಪುರುಷರೂ ವಿರೋಧಿಸುವ ಮೂಲಕ ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆ ವಿಧಿಸಬೇಕು ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.