ADVERTISEMENT

‘ಬಡತನ ನಿರ್ಮೂಲನೆಗೆ ಶಿಕ್ಷಣವೇ ನಾಂದಿ’

ಬೆಂಗಳೂರಿನಲ್ಲಿ ‘ಸ್ಟಾಪ್ ಹಂಗರ್ ನೌ’ ಘಟಕ ಆರಂಭ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2015, 20:09 IST
Last Updated 4 ಮಾರ್ಚ್ 2015, 20:09 IST
ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ‘ಸ್ಟಾಪ್ ಹಂಗರ್ ನೌ’ ಬೆಂಗಳೂರು ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಆಹಾರ ಪೊಟ್ಟಣ ಸಾಗಿಸುವ ವಾಹನಕ್ಕೆ ಚಾಲನೆ ನೀಡಲಾಯಿತು. ಬ್ರಾಡ್‌ಕಾಂ ಫೌಂಡೇಶನ್‌ ಅಧ್ಯಕ್ಷ ಪೌಲಾ ಗೋಲ್ಡನ್‌, ನಿರ್ದೇಶಕ ರಾಜೀವ್‌ ಕಪೂರ್‌, ಸ್ಟಾಪ್ ಹಂಗರ್ ನೌ ಕಾರ್ಯ ನಿರ್ವಾಹಕ ನಿರ್ದೇಶಕ ಡೋಲಾ ಮೊಹಪಾತ್ರ ಚಿತ್ರದಲ್ಲಿದ್ದಾರೆ

ವೈಟ್‌ಫೀಲ್ಡ್‌: ದೇಶದಲ್ಲಿ ಹುಟ್ಟುವ ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ನೀಡುವ ಮೂಲಕ ಬಡತನ ನಿರ್ಮೂಲನೆ ಮಾಡಲು ಸಾಧ್ಯ ಎಂದು ‘ಸ್ಟಾಪ್ ಹಂಗರ್ ನೌ’ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡೋಲಾ ಮೊಹಪಾತ್ರ  ಹೇಳಿದರು.

ಬುಧವಾರ ಇಲ್ಲಿಗೆ ಸಮೀಪದ ಬೆಳ್ಳಂ­ದೂರು ಎಕೋಸ್ಪೇಸ್‌ ನಲ್ಲಿ ಬ್ರಾಡ್‌ಕಾಂ ಫೌಂಡೇಶನ್‌ ಮತ್ತು ಸ್ಯಾನ್‌ ಡಿಸ್ಕ್‌ ಸಹ­ಯೋಗದೊಂದಿಗೆ ಅಂತರ­ರಾಷ್ಟ್ರೀಯ ‘ಸ್ಟಾಪ್ ಹಂಗರ್ ನೌ’ ಬೆಂಗಳೂರು ಘಟಕ ಉದ್ಘಾಟಿಸಿ ಮಾತನಾಡಿದರು.

ಬಡ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಒದಗಿಸುವ ಅಗತ್ಯ ಇದ್ದು, ಇದಕ್ಕಾಗಿ ತಮ್ಮ ಸಂಸ್ಥೆ ಕಳೆದ 15 ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆ ಒದಗಿಸುತ್ತಿದೆ. ಭಾರತ ದೇಶದ ಬಡ ಶಾಲಾ ಮಕ್ಕಳ ಉತ್ತೇಜನಕ್ಕೆ  ಸೇವಾ ಸಂಸ್ಥೆ ಆರಂಭಿಸಲಾಗಿದೆ ಎಂದರು.
ಬ್ರಾಡ್‌ಕಾಂ ಫೌಂಡೇಶನ್‌ ಅಧ್ಯಕ್ಷ ಪೌಲಾ ಗೋಲ್ಡನ್‌, ಕಳೆದ 7  ವರ್ಷಗಳಿಂದ ಸ್ಟಾಪ್ ಹಂಗರ್ ನೌ ಬಡ ಮಕ್ಕಳು, ನಾಗರಿಕರಿಗೆ ಸಹಕಾರಿ ಆಗಿದೆ. 4 ಸರ್ಕಾರಿ ಶಾಲೆಗಳ ದತ್ತು ಪಡೆದು ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.