ADVERTISEMENT

‘ಹಾಪ್‌ಕಾಮ್ಸ್‌’ ಪಟ್ಟಿ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2015, 19:52 IST
Last Updated 17 ಏಪ್ರಿಲ್ 2015, 19:52 IST
ನೂತನ ಬಸ್‌ ತಂಗು ದಾಣದಲ್ಲಿ...  ಕಾಳಿಂಗರಾವ್ ರಸ್ತೆಯಲ್ಲಿ ಬಸ್‌ ನಿಲ್ದಾಣ ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ ತಂಗುದಾಣದಲ್ಲಿ ಕುಳಿತು ಸೌಲಭ್ಯ ವೀಕ್ಷಿಸಿದರು. ಉಪಮೇಯರ್‌ ಕೆ.ರಂಗಣ್ಣ, ಮೇಯರ್‌ ಎನ್‌.ಶಾಂತಕುಮಾರಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್‌, ಬಿಬಿಎಂಪಿ ಸದಸ್ಯರಾದ ಬಿ.ಎಸ್‌. ಸತ್ಯನಾರಾಯಣ, ಬಿ.ಎನ್‌. ಮಂಜುನಾಥ್‌ ರೆಡ್ಡಿ ಚಿತ್ರದಲ್ಲಿದ್ದಾರೆ   ಪ್ರಜಾವಾಣಿ ಚಿತ್ರ
ನೂತನ ಬಸ್‌ ತಂಗು ದಾಣದಲ್ಲಿ... ಕಾಳಿಂಗರಾವ್ ರಸ್ತೆಯಲ್ಲಿ ಬಸ್‌ ನಿಲ್ದಾಣ ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ ತಂಗುದಾಣದಲ್ಲಿ ಕುಳಿತು ಸೌಲಭ್ಯ ವೀಕ್ಷಿಸಿದರು. ಉಪಮೇಯರ್‌ ಕೆ.ರಂಗಣ್ಣ, ಮೇಯರ್‌ ಎನ್‌.ಶಾಂತಕುಮಾರಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್‌, ಬಿಬಿಎಂಪಿ ಸದಸ್ಯರಾದ ಬಿ.ಎಸ್‌. ಸತ್ಯನಾರಾಯಣ, ಬಿ.ಎನ್‌. ಮಂಜುನಾಥ್‌ ರೆಡ್ಡಿ ಚಿತ್ರದಲ್ಲಿದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು:  ಐವತ್ತು ವರ್ಷಗಳ ನಂತರ ಹಾಪ್‌ಕಾಮ್ಸ್ ಸಂಸ್ಥೆ ತನ್ನ ಸದಸ್ಯ ರೈತರ ಪಟ್ಟಿ ಪರಿಷ್ಕರಣೆ ಹಾಗೂ ಸದಸ್ಯ ರೈತರಿಗೆ ಗಣಕೀಕೃತ ಸ್ಮಾರ್ಟ್ ಕಾರ್ಡ್ ವಿತರಣೆ ನೀಡಲು ಮುಂದಾಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಾಪ್‌ಕಾಮ್ಸ್ ಆಡಳಿತ ಮಂಡಳಿ ಅಧಿಕಾರಿ ಪಿ.ಆರ್‌.ಪಳಂಗಪ್ಪ,  ‘ಸಂಘದಲ್ಲಿ ಸದ್ಯ  18 ಸಾವಿರಕ್ಕೂ ಹೆಚ್ಚು ಸದಸ್ಯ ರೈತರಿದ್ದಾರೆ. ಆದರೆ, ಇತ್ತೀಚೆಗೆ ಹೈಕೋರ್ಟ್ ನೀಡಿದ ನಿದೇರ್ಶನದಂತೆ ಸಂಸ್ಥೆಯಲ್ಲಿನ ಎಲ್ಲಾ ರೈತ ಸದಸ್ಯರು ಗಳಿಂದ ಜಮೀನು ಹೊಂದಿರುವ ಮತ್ತು ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ಬಗ್ಗೆ, ಜೀವಂತ ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳುವ ಸಲುವಾಗಿ ಅವಶ್ಯಕ ದಾಖಲೆಗಳನ್ನು ಪಡೆದು ನೈಜ ರೈತ ಸದಸ್ಯರುಗಳನ್ನು ಗುರುತಿಸಿ ಪರಿಷ್ಕೃತ ಪಟ್ಟಿ ತಯಾರಿಸಿ, ಸದಸ್ಯ ರೈತರಿಗೆ ಗಣಕೀಕೃತ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸ ಲಾಗುತ್ತದೆ’ ಎಂದರು.

‘ಈ ಬಗ್ಗೆ ರೈತರಿಗೆ ಈಗಾಗಲೇ ಸೂಚನಾ ಪತ್ರಗಳ ಮೂಲಕ ತಿಳಿಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಅನುದಾನ ಪಡೆದ ಕಿಯೋನಿಕ್ಸ್ ಸಂಸ್ಥೆಯನ್ನು ಏಜೆನ್ಸಿಯಾಗಿ ನೇಮಿಸಲಾಗಿದೆ’ ಎಂದು ತಿಳಿಸಲಾಗಿದೆ.

‘ಹಾಲಿ  ಸದಸ್ಯರು ಇತ್ತೀಚಿನ ಮೂರು ಭಾವ ಚಿತ್ರಗಳು, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಪ್ರತಿ, ಮೊಬೈಲ್ ಅಥವಾ ದೂರವಾಣಿ ಸಂಖ್ಯೆ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ನೀಡಬೇಕು’ ಎಂದು ಅವರು ತಿಳಿಸಿದರು.

‘ಮೇಲಿನ ದಾಖಲಾತಿಗಳೊಂದಿಗೆ ಜನವರಿ 1ರ ನಂತರ ಕಂದಾಯ ಇಲಾಖೆಯಿಂದ ಪಡೆದಿರುವ ಸದಸ್ಯ ರೈತರ ಹೆಸರಿನಲ್ಲಿರುವ ಪಹಣಿಯಲ್ಲಿ ತೋಟಗಾರಿಕೆ ಬೆಳೆ ನಮೂದಿಸಿರುವ ಪ್ರತಿ. ಪಹಣಿಯಲ್ಲಿ ಬೆಳೆ ನಮೂದಿಸ ದಿದ್ದಲ್ಲಿ ತೋಟಗಾರಿಕೆ ಬೆಳೆ ಬೆಳೆಯು ತ್ತಿರುವ ಬಗ್ಗೆ ಸ್ವಯಂ ಘೋಷಿತ ಪ್ರಮಾಣ ಪತ್ರ ಕೊಡಬೇಕು’ ಎಂದು ಅವರು ತಿಳಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದವರು ಎಲ್ಲಾ ದಾಖಲಾತಿ ಗಳೊಂದಿಗೆ ಗಣಕೀಕೃತ ಜಾತಿ ದೃಢೀ ಕರಣ ಪತ್ರ ನೀಡಬೇಕು. ಹಿಂದುಳಿದ ವರ್ಗಗಳ ಎ ಮತ್ತು ಬಿ ಗೆ  ಸೇರಿದವರು ಸ್ವಯಂ ಘೋಷಿತ ಪತ್ರ ನೀಡಬೇಕು.

₨ 250ಕ್ಕಿಂತ ಕಡಿಮೆ ಷೇರು ಮೊತ್ತ ಪಾವತಿಸಿರುವವರು ಪೂರ್ಣ ಷೇರು ರೂ. 250 ಪಾವತಿಸಿ ಮೇಲಿನ ಎಲ್ಲಾ  ದಾಖಲೆಗಳನ್ನು ನಿಗದಿಪಡಿಸಿದ ದಿನಾಂಕ ದೊಳಗಾಗಿ ನೀಡಿದರೆ ಸದಸ್ಯತ್ವ ಹಾಗೂ ಮತದಾನಕ್ಕೆ ಅರ್ಹತೆಯನ್ನು ನೀಡಲಾಗು ವುದು’ ಎಂದರು.

‘ಈಗ  ಬೆಂಗಳೂರಿನ ಲಾಲ್‌ಬಾಗ್‌ನ ಪ್ರಧಾನ ಕಚೇರಿ, ಆನೇಕಲ್‌, ಹೊಸ ಕೋಟೆ, ಕೋಲಾರ, ಚಿಕ್ಕ ಬಳ್ಳಾಪುರ ಹಾಗೂ ರಾಮನಗರ ಕೇಂದ್ರಗಳಲ್ಲಿ ದಾಖಲೆಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.