ADVERTISEMENT

4ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2016, 20:02 IST
Last Updated 9 ಫೆಬ್ರುವರಿ 2016, 20:02 IST

ಬೆಂಗಳೂರು: ಗಾಂಧಿನಗರದ ‘ರಾಜಶ್ರೀ ಗೆಸ್ಟ್‌ಹೌಸ್’ ವಸತಿ ಗೃಹದ 3ನೇ ಮಹಡಿಯಿಂದ ಬಿದ್ದು ರಾಜು ಭಾರದ್ವಾಜ್ (19) ಎಂಬ ಸಪ್ಲೈಯರ್  ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.

ಛತ್ತೀಸಗಡ ಮೂಲದ ರಾಜು, 9ನೇ ತರಗತಿಗೆ ವ್ಯಾಸಂಗ ನಿಲ್ಲಿಸಿ ನಾಲ್ಕು ವರ್ಷಗಳ ಹಿಂದೆಯೇ ಮನೆ ಬಿಟ್ಟು ಬಂದಿ ದ್ದರು. ಆರು ತಿಂಗಳಿನಿಂದ ಈ ವಸತಿಗೃಹದಲ್ಲಿ ಕೆಲಸ ಮಾಡು ತ್ತಿದ್ದರು. ಸೋದರ ಕಾಣೆಯಾ ಗಿರುವ ಬಗ್ಗೆ ಅವರ ಅಣ್ಣ ಸಂಜಯ್ ಅವರು ಛತ್ತೀಸಗಡ ಪೊಲೀಸರಿಗೆ ದೂರು ಕೊಟ್ಟಿದ್ದರು.

ತಮ್ಮ ಸೋದರ ಬೆಂಗಳೂರಿನ ವಸತಿ ಗೃಹವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿರುವ ವಿಷಯವನ್ನು ಇತ್ತೀಚೆಗೆ ತಿಳಿದುಕೊಂಡ ಸಂಜಯ್, ಅವರನ್ನು ಕರೆದು ಕೊಂಡು ಹೋಗಲು ಸೋಮ ವಾರ ಸಂಜೆ ನಗರಕ್ಕೆ ಬಂದಿದ್ದರು. ರೈಲು ನಿಲ್ದಾಣಕ್ಕೆ ಬಂದಿಳಿದ ನಂತರ ತಮ್ಮನಿಗೆ ಕರೆ ಮಾಡಿ, ‘ಮತ್ತೆ ರಾಜ್ಯಕ್ಕೆ ಕರೆದುಕೊಂಡು ಹೋಗುತ್ತೇನೆ. 9ನೇ ತರಗತಿಯಿಂದ ಪುನಃ ಶಿಕ್ಷಣ ಮುಂದುವರಿಸು’ ಎಂದಿದ್ದರು.

ಊರಿಗೆ ಹೋಗಲು ಇಷ್ಟವಿಲ್ಲದ ಬಗ್ಗೆ ವಸತಿಗೃಹದ ಇತರೆ ನೌಕರರ ಬಳಿ ಹೇಳಿ ಕೊಂಡಿದ್ದ ರಾಜು,  3ನೇ ಮಹಡಿಗೆ ತೆರಳಿ ಕೆಳಗೆ ಹಾರಿ ದ್ದಾರೆ. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.