ADVERTISEMENT

ಬಾಲಕನ ಅಂಗಾಂಗಗಳಿಂದ ಮೂವರಿಗೆ ಜೀವದಾನ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 15:54 IST
Last Updated 23 ಆಗಸ್ಟ್ 2018, 15:54 IST
ಶಂಕರ್‌ ಬಡಿಗೇರ್‌
ಶಂಕರ್‌ ಬಡಿಗೇರ್‌   

ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನ ಅಂಗಾಂಗಳಿಂದ ಮೂವರಿಗೆ ಜೀವದಾನ ಸಿಕ್ಕಿದೆ.

ತೀವ್ರ ಅಸ್ವಸ್ಥಗೊಂಡ ಬಾಲಕ ಶಂಕರ್‌ ಬಡಿಗೇರ್‌ನನ್ನು ಜುಲೈ 19ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ಬಾಲಕನ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದರು. ಪೋಷಕರ ಅನುಮತಿ ಪಡೆದುಕೊಂಡ ಬಿಜಿಎಸ್‌ ಗ್ಲೆನೇಗ್ಲೆಸ್‌ ಗ್ಲೋಬಲ್‌ ಆಸ್ಪತ್ರೆಯ ವೈದ್ಯರು ಮೂರು ರೋಗಿಗಳಿಗೆ ಅಂಗಾಂಗ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೃದಯವನ್ನು 13 ವರ್ಷದ ಬಾಲಕಿಗೆ ಕಸಿ ಮಾಡಲಾಯಿತು. ಆರು ತಿಂಗಳ ಹಿಂದೆ ಈ ಬಾಲಕಿಗೆ ಹೃದಯಾಘಾತವಾಗಿತ್ತು. ಒಂದು ಮೂತ್ರಪಿಂಡವನ್ನು 42 ವರ್ಷದ ಪುರುಷನಿಗೆ ಹಾಗೂ ಇನ್ನೊಂದು ಮೂತ್ರಪಿಂಡವನ್ನು 44 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ.

ಡಾ. ಬಿ.ಟಿ.ಅನಿಲ್‌ಕುಮಾರ್‌ ಅವರನ್ನು ಒಳಗೊಂಡ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.