ADVERTISEMENT

ಪ.ಪಂ. ಕಟ್ಟಡ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 10:19 IST
Last Updated 18 ಜೂನ್ 2018, 10:19 IST
ಔರಾದ್ ಪಟ್ಟಣ ಪಂಚಾಯಿತಿ ಹಳೆ ಕಟ್ಟಡದ ಒಂದು ಭಾಗದ ಗೋಡೆ ಕುಸಿದು ಬಿದ್ದಿರುವುದು
ಔರಾದ್ ಪಟ್ಟಣ ಪಂಚಾಯಿತಿ ಹಳೆ ಕಟ್ಟಡದ ಒಂದು ಭಾಗದ ಗೋಡೆ ಕುಸಿದು ಬಿದ್ದಿರುವುದು   

ಔರಾದ್:  ಪಟ್ಟಣದ ಅಗಸಿ ಬಳಿ ಇರುವ ಪಟ್ಟಣ ಪಂಚಾಯಿತಿ ಹಳೆ ಕಟ್ಟಡ ಶಿಥಿಲಗೊಂಡು ಅಪಾಯದ ಅಂಚಿನಲ್ಲಿದೆ. ಕಳೆದ ವಾರ ಸುರಿದ ಮಳೆಯಿಂದಾಗಿ ಕಟ್ಟಡದ ಒಂದು ಗೋಡೆ ಕುಸಿದು ಬಿದ್ದಿದೆ. ಆದರೆ ಯಾವುದೇ ಅನಾಹುತವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

'ಎರಡು ದಶಕದ ಹಿಂದೆ ಪಟ್ಟಣದಲ್ಲಿ ಕರ ವಸೂಲಿ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳು ಇಲ್ಲಿಯೇ ನಡೆಯುತ್ತಿದ್ದವು. ಸರ್ಕಾರಿ ಆಸ್ಪತ್ರೆ ಬಳಿ ಹೊಸ ಕಟ್ಟಡ ಆದ ನಂತರ ಈ ಹಳೆ ಕಟ್ಟಡದ ಕಡೆ ನಿರ್ಲಕ್ಷ್ಯ ವಹಿಸಲಾಯಿತು. ಕಟ್ಟಡದ ಬಹುಭಾಗ ಶಿಥಿಲಗೊಂಡಿದೆ. ಯಾವಾಗಾದರೂ ಕುಸಿಯುವ ಭೀತಿ ಇದೆ. ಇದರಿಂದಾಗಿ ಅಕ್ಕ-ಪಕ್ಕದ ಮನೆಯವರು ಆತಂಕಗೊಂಡಿದ್ದಾರೆ' ಅಲ್ಲಿಯ ನಿವಾಸಿ ಸಿದ್ದು ರಾಗಾ ಹೇಳಿದ್ದಾರೆ.

‘ಹಳೆ ಕಟ್ಟಡ ತೆಗೆದು ಆ ಜಾಗ ಬೇರೆ ಕೆಲಸಕ್ಕೆ ಬಳಸಿಕೊಳ್ಳುವಂತೆ ಸಾಕಷ್ಟು ಸಲ ಸಂಬಂಧಿತರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ.

ADVERTISEMENT

'ಹಳೆ ಕಟ್ಟಡ ತೆರವುಗೊಳಿಸಿ ಅಲ್ಲಿ ಹೊಸ ಕಟ್ಟಡ ಕಟ್ಟಲು ಉದ್ದೇಶಿಸಲಾಗಿದೆ. ಆದರೆ ಅದಕ್ಕೆ ಸಮಯಾವಕಾಶ ಬೇಕು' ಎಂದು ಪಟ್ಟಣ
ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಿಳಿಸಿದ್ದಾರೆ.

ಹಳೆ ಕಟ್ಟಡ ಸಿಥಿಲವಾಗಿರುವುದು ತಮ್ಮ ಗಮನಕ್ಕೂ ಬಂದಿದೆ. ಅಲ್ಲಿಗೆ ಭೇಟಿ ನೀಡಿ ಅಪಾಯವೇನಾದರೂ ಕಂಡು ಬಂದರೆ ತಕ್ಷಣವೇ ಅದನ್ನು ನೆಲಸಮ ಮಾಡಲಾಗುವುದು
ಸವಿತಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಔರಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.