ADVERTISEMENT

ಪ್ರತಿಭೆಗೆ ಅವಕಾಶ: ಕಡಿಮೆ ಶುಲ್ಕ

ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 9 ಕೋರ್ಸ್‌ಗಳು

ಚಂದ್ರಕಾಂತ ಮಸಾನಿ
Published 25 ಮೇ 2016, 11:19 IST
Last Updated 25 ಮೇ 2016, 11:19 IST

ಬೀದರ್: ಎಸ್ಸೆಸ್ಸೆಲ್ಸಿ ಪಾಸಾದ, ಆರ್ಥಿಕ ವಾಗಿ ಹಿಂದುಳಿದ ಕುಟುಂಬಗಳ ಅಭ್ಯ ರ್ಥಿಗಳಿಗೆ ತ್ವರಿತ ಉದ್ಯೋಗ ಕಲ್ಪಿಸುವ ದಿಸೆಯಲ್ಲಿ  ತಾಂತ್ರಿಕ ಶಿಕ್ಷಣ ಇಲಾಖೆಯು ಜಿಲ್ಲೆಯ ವಿವಿಧೆಡೆ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳನ್ನು ಆರಂಭ ಮಾಡಿದೆ.  ತಾಂತ್ರಿಕ ಕ್ಷೇತ್ರಕ್ಕೆ ಹೋಗ ಬಯಸುವವರಿಗೆ ವಿಪುಲ ಅವಕಾಶಗಳು ಇವೆ.

ಉದ್ಯಮ ಕ್ಷೇತ್ರ ಅಥವಾ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾ ಗುವಂಥ ಒಂದು ವರ್ಷ ಹಾಗೂ ಎರಡು ವರ್ಷದ ಕೋರ್ಸ್‌ಗಳು ಲಭ್ಯ ಇವೆ. ಐಟಿಐ, ಕಡಿಮೆ ಖರ್ಚಿನ ಹಾಗೂ ಕಡಿಮೆ ಅವಧಿಯ ಕೋರ್ಸ್‌ ಆಗಿದೆ.

ತರಬೇತಿ ಮುಗಿದ ತಕ್ಷಣ  ಕೈಗಾರಿ ಕೆಗಳಲ್ಲಿ ಕೆಲಸ ಮಾಡಬಹುದು ಹಾಗೂ ಸ್ವಂತ ಉದ್ಯೋಗವನ್ನೂ ಆರಂಭಿಸಬ ಹುದು. ನಗರದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ 1975ರಿಂದ ಕಾರ್ಯ ನಿರ್ವಹಿಸುತ್ತಿದೆ. ವರ್ಕಶಾಪ್‌, ವಾಚ ನಾಲಯ ಹಾಗೂ ತಾಂತ್ರಿಕ ಅನುಭ ವವುಳ್ಳ ಸಿಬ್ಬಂದಿ ವರ್ಗ ಇಲ್ಲಿದೆ. ಸಂಸ್ಥೆಯು ಪ್ರತಿ ವರ್ಷ ಶೇ 90 ಕ್ಕಿಂತ ಹೆಚ್ಚು ಫಲಿತಾಂಶ ಪಡೆಯುತ್ತಿದೆ.

ವರ್ಷಕ್ಕೆ ಕೇವಲ ₹ 1,200 ಪ್ರವೇಶ ಶುಲ್ಕ ಪಡೆಯಲಾಗುತ್ತದೆ. ಮೆರಿಟ್ ಹಾಗೂ ಸರ್ಕಾರದ ಮೀಸಲಾತಿ ಅನುಗುಣವಾಗಿ ಪಾರದರ್ಶಕತೆಯಿಂದ ಪ್ರವೇಶ ನೀಡಲಾಗುತ್ತಿದೆ.
ಒಂದು ವರ್ಷದ ಕೋರ್ಸ್‌ಗಳು: ಡ್ರೆಸ್ ಮೇಕಿಂಗ್ ಫ್ಯಾಶನ್ ಡಿಸೈನಿಂಗ್: ವಿವಿಧ ಉಡುಪು ತಯಾರಿಕೆ ವಿನ್ಯಾಸ ದಲ್ಲಿ  ಪರಿಣಿತಿ ಪಡೆದು ಸಿದ್ಧ ಉಡುಪು ಕಂಪೆನಿಗಳಲ್ಲಿ ಉದ್ಯೋಗವನ್ನು ಪಡೆದು ಕೊಳ್ಳುವ ಅವಕಾಶವಿದೆ. ಲಭ್ಯ ಸ್ಥಾನಗಳು – 42.

ಇಂಟೀರಿಯರ್ ಡೆಕೊರೇಟರ್ ಆ್ಯಂಡ್ ಡಿಸೈನಿಂಗ್ : ಕಟ್ಟಡದ ನೀಲಿ ನಕಾಶೆ ತಯಾರಿಸುವುದು, ಕಾರ್ಖಾನೆ, ಕಚೇರಿ, ಹೋಟೆಲ್ ಒಳಾಂಗಣ ಸೌಂದರ್ಯೀಕರಣ, ವಿವಿಧ ರೀತಿಯ ಕಟ್ಟಡದ ಯೋಜನೆಗಳನ್ನು ರಚಿಸಲು ಸಹ ತರಬೇತಿ ನೀಡಲಾಗುವುದು. ಲಭ್ಯ ಸ್ಥಾನಗಳು – 42

ಕೋಪಾ (ಕಂಪ್ಯೂಟರ್):  Windows, Linux, Ms-Office, C Language, VB. NET, PL/SQL, Internet ಗಳನ್ನು 1 ವರ್ಷದಲ್ಲಿ ಕಲಿಯಬಹುದು. ಕಂಪ್ಯೂಟರ್‌ ಸಂಸ್ಥೆ ಅಥವಾ ಇಂಟರ್‌ ನೆಟ್‌ ಬ್ರೌಸಿಂಗ್‌ ಸೆಂಟ ರ್‌ಗಳನ್ನು  ತೆರೆಯ ಬಹುದು. ಲಭ್ಯ ಸ್ಥಾನಗಳು – 26

ವೆಲ್ಡರ್ : ಈ ವೃತ್ತಿಯಲ್ಲಿ ಆರ್ಕ್‌ವೆಲ್ಡಿಂಗ್, ಗ್ಯಾಸ್ ವೆಲ್ಡಿಂಗ್, ಸಿಒ2 ವೆಲ್ಡಿಂಗ್ ತರಬೇತಿ ನೀಡಲಾ ಗುವುದು. ಫ್ಯಾಬ್ರಿಕೇಶನ್ ವರ್ಕ್ಸ್  , ಗ್ರಿಲ್ ತಯಾರಿಕೆ, ಬ್ರೇಜಿಂಗ್ ಮತ್ತು ಸಾಲ್ಡ ರಿಂಗ್ ತರಬೇತಿ ನೀಡಲಾ ಗುತ್ತಿದೆ.

ಲಭ್ಯ ಸ್ಥಾನಗಳು – 42
ಎರಡು ವರ್ಷದ ಕೋರ್ಸ್‌ ಗಳು: ಎಂಆರ್‌ಎಸಿ: ಕಾರ್ಖಾನೆ ಬೇಡಿಕೆಗಳಿಗೆ ಅನುಗುಣವಾಗಿ ತರಬೇತಿ ನೀಡಲಾ ಗುತ್ತಿದೆ. ಏಸಿ ಯಂತ್ರಗಳ ಬಿಡಿ ಭಾಗಗ ಳನ್ನು ಬಿಡಿಸಲು ಮತ್ತು ಒಂದುಗೂಡಿಸಿ ಅದರ ಕಾರ್ಯಕ್ಷಮತೆಯನ್ನು ಅಭಿವೃದ್ಧಿ ಗೊಳಿಸಲು, ವಾಟರ್‌ ಕೂಲರ್, ವಿಸಿ ಕೂಲರ್, ರೆಫ್ರಿಜಿರೇಟರ್‌್ ಗಳ ಸಮಸ್ಯೆಗ ಳನ್ನು ಹುಡುಕಿ, ದುರಸ್ತಿ ಮಾಡುವಲ್ಲಿ ಪರಿಣಿತಿ ಪಡೆಯಬಹುದಾಗಿದೆ. ಲಭ್ಯ ಸ್ಥಾನಗಳು – 26

ಫಿಟ್ಟರ್ : ಲೋಹಗಳ ಬಗೆಗೆ ತಾಂತ್ರಿಕ ಮಾಹಿತಿ, ಪ್ರತಿಯೊಂದು ಯಂತ್ರೋ ಪಕರಣದ ಬಿಡಿಭಾಗಗಳನ್ನು ಜೋಡಿಸುವುದು, ಸ್ಥಾಪಿಸುವುದು, ದುರಸ್ತಿ ಮಾಡುವುದು, ಬಿಡಿಭಾಗಗಳ ಬಗೆಗೆ ಮಾಹಿತಿ ನೀಡಲಾಗುತ್ತದೆ.

ಲಭ್ಯ ಸ್ಥಾನಗಳು – 21
ಎಲೆಕ್ಟ್ರಾನಿಕ್ ಮೆಕ್ಯಾನಿಕ್:  ಎಲೆಕ್ಟ್ರಾನಿಕ್ ಯಂತ್ರೋಪಕರಣಗಳ ಬಗೆಗೆ ಮಾಹಿತಿ ನೀಡಿ, ದುರಸ್ತಿ ಮಾಡುವುದು, ಜೊತೆಗೆ ಟಿ.ವಿ., ಟೇಪ್ ರಿಕಾರ್ಡ್ , ವಿಡಿಯೊ, ಡಿವಿಡಿ, ಎಲ್‌.ಸಿ.ಡಿ, ಮೊಬೈಲ್‌ ಟೆಲಿಫೋನ್, ಕಂಪ್ಯೂಟರ್ ದುರಸ್ತಿ ಬಗೆಗೆ ತಾಂತ್ರಿಕ ಮಾಹಿತಿ ನೀಡಲಾಗುವುದು.

ಲಭ್ಯ ಸ್ಥಾನಗಳು – 26.
ಎಲೆಕ್ಟ್ರಿಷಿಯನ್ : ಎಲೆಕ್ಟ್ರಿಕಲ್ ವೈರಿಂಗ್, ಮೋಟಾರ್ ರಿಪೇರಿ, ಎಲೆಕ್ಟ್ರಿಕಲ್ ಫಾಲ್ಟ್ಸ್ ಬಗ್ಗೆ ಮಾಹಿತಿ ನೀಡುವುದಲ್ಲದೆ, ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಸಂಪೂರ್ಣ ಪರಿಣಿತರನ್ನಾಗಿ ಮಾಡಿ, ಹಲವಾರು ಇಲಾಖೆಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಎಲೆಕ್ಟ್ರಿಷಿಯನ್ ಹುದ್ದೆ ಪಡೆಯಬಹುದು. ಲಭ್ಯ ಸ್ಥಾನಗಳು – 42.

ವಿಶೇಷತೆ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ‘ಉದ್ಯೋಗ ಕೋಶ’ ದಿಂದ ಕೈಗಾರಿಕೆಯ ಪ್ರಾಯೋಗಿಕ ಪಾಠದ ಕೌಶಲ ಅರಿಯಲು ಅಪ್ರಂಟಿಷಿಪ್ ತರ ಬೇತಿ ಗಾಗಿ ಮಾರ್ಗ ದರ್ಶನ ನೀಡಲಾಗುತ್ತಿದೆ.  ಟೊಯೊಟೊ, ಕಿರ್ಲೊಸ್ಕರ್, ಬಿಎಚ್‌್ಇಎಲ್, ಬಿಇಎಲ್, ಎಚ್‌ಎಎಲ್, ಬಿಇಎಂಎಲ್, ಇತ್ಯಾದಿ ಬೃಹತ್ ಕೈಗಾರಿಕೆಗಳಿಗೆ ನಿಯೋಜಿಸಲು ನೆರವು ನೀಡಲಾಗುತ್ತಿದೆ.

3 ತಿಂಗಳಿಗೊಂದು ಬಾರಿ ಕ್ಯಾಂಪಸ್ ಸಂದರ್ಶನ ಆಯೋಜಿಸಿ ಕೋರ್ಸ್‌ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ನೌಕರಿ ಒದಗಿಸಲಾಗುತ್ತಿದೆ. ಉಷಾ ಇಂಟರ್ ನ್ಯಾಶನಲ್, ಇಂಡೊಜರ್ಮನ್ ಟೂಲ್ ರೂಮ್, ಸಾಯಿ ಆರ್ಕೆಡ್, ಟಾಟಾ ಮಾರ್ಕೊಪೋಲಾ, ಜಿಂದಾಲ್ ಲಿಮಿಟೆಡ್, ಅಡ್ವಾನಿ ಓವರ ಲಿಕಾನ್, ವೀಲ್ ಇಂಡಿಯಾ, ಕ್ಯಾಪ್ಟ್ರೋನಿಕ್ಸ್ ವಿಡಿಯೊಕಾನ್, ಟೆಲ್ಕೊ, ಎಲ್ ಆ್ಯಂಡ್‌ ಟಿ, ಮೈಕೊ, ವೊಲ್ವೊ, ಐಟಿಸಿ, ಟೈಕೊ  ಕಂಪೆನಿಗಳಲ್ಲಿ ಸಂಸ್ಥೆಯವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶ ಕಲ್ಪಿಸಲಾ ಗುತ್ತಿದೆ ಎಂದು ಬೀದರ್‌ನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಶಿವಶಂಕರ ಟೋಕರೆ  ಹೇಳುತ್ತಾರೆ.

ಸರ್ಕಾರದ ಸೌಲಭ್ಯ: ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಮಾಸಿಕ ₹ 50 ಗೌರವಧನ ಕೊಡಲಾಗುತ್ತಿದೆ.  ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜತೆಗೆ ಟೂಲಕಿಟ್, ಟ್ಯಾಬ್, ಲೇಖನ ಸಾಮಗ್ರಿ, ಸೋಲಾರ್ ಖಂದಿಲು, ಸಮವಸ್ತ್ರ, ಬೂಟ್ ಮತ್ತು ಸಾಕ್ಸ್ ವಿತರಿಸಲಾಗುತ್ತದೆ.

ಎಸ್‌ಸಿ/ಎಸ್‌ಟಿ ತರಬೇತಿದಾರರಿಗೆ ಕೌಶಲ ಅಭಿವೃದ್ಧಿಗಾಗಿ ಕೆಜಿಟಿಟಿಐ ಹಾಗೂ ಶಾರದಾ ರೂಡ್ ಸೆಟ್ ಸಹಯೋಗದೊಂದಿಗೆ ಉಚಿತವಾಗಿ ಪ್ರಾಯೋಗಿಕ  ತರಬೇತಿ ನೀಡಲಾಗುತ್ತಿದೆ.

ಐಟಿಐ ಪ್ರವೇಶ ವಿವರ : ಜಿಲ್ಲೆಯಲ್ಲಿ ಬೀದರ್, ಬಸವಕಲ್ಯಾಣ, ಹುಮನಾ ಬಾದ್‌, ಔರಾದ್‌, ಭಾಲ್ಕಿ, ಕಮಲನಗರದಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳಿವೆ.
ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳು  ತಾಂತ್ರಿಕ ಇಲಾಖೆಯ ವೆಬ್‌ಸೈಟ್ www.emptrg. kar.nic. in,  www. detkarnataka.org.in ನಲ್ಲಿ ಮಾಹಿತಿ ಪಡೆಯಬಹುದು. ಐಟಿಐ ಕಚೇರಿ ಅಥವಾ ಇಂಟರ್‌ನೆಟ್‌ ಬ್ರೌಸಿಂಗ್‌ ಸೆಂಟರ್‌ಗಳಲ್ಲಿ ಜೂನ್‌ 4ರೊಳಗೆ ಮೊಬೈಲ್‌ ಸಂಖ್ಯೆ ಸಹಿತ ತಮ್ಮ ವಿವರಗಳನ್ನು ದಾಖಲಿಸಬೇಕು. ಆನ್‌ಲೈನ್‌  ಸ್ವೀಕೃತಿ ಪಡೆಯಬೇಕು. ಐಟಿಐ ಪ್ರವೇಶಕ್ಕೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜೂನ್‌ 4 ಕೊನೆಯ ದಿನವಾಗಿದೆ. ತಾತ್ಕಾಲಿಕ ಶ್ರೇಣಿ ಪಟ್ಟಿ ಜೂನ್‌ 9 ರಂದು ಪ್ರಕಟವಾಗಲಿದೆ ಎಂದರು.

ವಿದ್ಯಾರ್ಥಿಗಳು  ಪ್ರಮಾಣ ಪತ್ರ ಪರಿಶೀಲನೆಗಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಗೆ ಜೂನ್‌ 10ರಿಂದ 13ರ ಅವಧಿಯಲ್ಲಿ  ಪಾಲಕರೊಂದಿಗೆ ಹಾಜರಾಗಿ ಮೂಲ ದಾಖಲಾತಿಗಳನ್ನು ಪರಿಶೀಲಿಸಿಕೊಳ್ಳಬೇಕು. ₹ 50 ಅರ್ಜಿ ಶುಲ್ಕ ಪಾವತಿಸಿ ರಶೀದಿ ಪಡೆಯಬೇಕು. ಜೂನ್‌ 17ರಂದು ಅಂತಿಮ ಶ್ರೇಣಿ ಪಟ್ಟಿ ಹಾಗೂ ಮೊದಲನೇ ಸ್ಥಾನ ಹಂಚಿಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಜೂನ್ 18 ರಿಂದ 20 ರೊಳಗಾಗಿ ಅಭ್ಯರ್ಥಿಯು ತನ್ನ ಸ್ಥಾನ ಹಂಚಿಕೆ ಪರಿಶೀಲಿಸಿ ಸಂಬಂಧಪಟ್ಟ ಸಂಸ್ಥೆಗೆ ಎಲ್ಲ ಮೂಲ ದಾಖಲಾತಿಗಳೊಂದಿಗೆ ಬೋಧನಾ ಶುಲ್ಕ ಹಾಗೂ ಪರೀಕ್ಷಾ ಶುಲ್ಕ ಪಾವತಿಸಿ ಪ್ರವೇಶ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.