ADVERTISEMENT

ಸ್ಪರ್ಧಾ ಮನೋಭಾವ ಅಗತ್ಯ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:30 IST
Last Updated 12 ಜನವರಿ 2017, 9:30 IST

ಹುಮನಾಬಾದ್: ಸ್ಪರ್ಧಾ ಮನೋಭಾವನೆಯಿಂದ ಅಸಾಧ್ಯವಾದದ್ದನ್ನು ಸಾಧಿಸಬಹುದು ಎಂದು ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ.ವೀರಣ್ಣ ತುಪ್ಪದ್‌ ಹೇಳಿದರು.
ಇಲ್ಲಿನ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಮುನ್ನಾದಿನ ಬುಧವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ವಸ್ತುಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಕಳೆದ 4 ದಶಕಗಳಿಂದ ಹಿಂದುಳಿದ ಈ ಭಾಗದ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕಾರ್ಯ ನಿಜಕ್ಕೂ ಪ್ರಶಂಸನೀಯ. ಹಿರಿಯ ಜೀವಿ ಮಾಣಿಕಪ್ಪ ಗಾದಾ ಅವರ ನೇತೃತ್ವದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಡಳಿತ ಮಂಡಳಿ ಕಾರ್ಯ ಸ್ಮರಣೀಯ. ಕಳೆದ 6 ವರ್ಷಗಳಿಂದ ಸಂಸ್ಥೆ ಎಸ್ಸೆಸ್ಸೆಲ್ಸಿ ಫಲಿತಾಂಶ ಶೆ 100 ಬರುತ್ತಿರುವುದೇ ಮಹಾವಿದ್ಯಾಲಯ ಸಿಬ್ಬಂದಿ ಶ್ರಮಕ್ಕೆ ಹಿಡಿದ ಕನ್ನಡಿ ಎಂದು ಬಣ್ಣಿಸಿದರು.

ವಸ್ತು ಪ್ರದರ್ಶನ ಉದ್ಘಾಟಿಸಿ, ಮಾತನಾಡಿದ ಪುರಸಭೆ ಉಪಾಧ್ಯಕ್ಷೆ ಪಾರ್ವತಿ ಶೇರಿಕಾರ ದೊಡ್ಡ ಪರಿವಾರದಲ್ಲಿ ಜನ್ಮ ಪಡೆದಿರುವ ನಮಗೆ ಕಳೆದ 6 ದಶಕ ಹಿಂದೆ ನಿರೀಕ್ಷೆಯಂತೆ ಶಿಕ್ಷಣ ಪಡೆಯಲು ಅವಕಾಶ ಸಿಗಲಿಲ್ಲ. ಈಗ ಏನೆಲ್ಲ ಸ್ಥಾನಮಾನ ಇದ್ದರೂ ಕೂಡ ಶಿಕ್ಷಣ ದೃಷ್ಟಿಯಿಂದ ನಮ್ಮ ಸಾಧನೆ ಶೂನ್ಯ. ಈಗ ನಿಮಗೆ ಅವಕಾಶ ಸಿಕ್ಕ ಅವಕಾಶದ ಸದ್ಬಳಕೆ ಮಾಡಿಕೊಂಡು ಉನ್ನತ ಸ್ಥಾನಮಾನದ ಜೊತೆಗೆ ಹುದ್ದೆ ಪಡೆದು ಸ್ವಾಭಿಮಾನ ಹಾಗೂ ಸ್ವಾವಲಂಬಿ ಜೀವನ ಸಾಧಿಸುವ ಮೂಲಕ ಸಂಸ್ಥೆ ಕೀರ್ತಿ ಹೆಚ್ಚಿಸಬೇಕು ಎಂದರು.

ಪುರಸಭೆಯ ಸದಸ್ಯ ಮಹೇಶ ಅಗಡಿ ಮಕ್ಕಳು ಕೇವಲ ಪುಸ್ತಕದ ಹುಳುಗಳಾಗದೇ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸ್ಪರ್ಧಾತ್ಮಕ ಪರೀಕ್ಷೆ ಒಳಗೊಂಡಂತೆ ಪ್ರತಿಯೊಂದು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಸೂರ್ಯಕಾಂತರಾವ ಹಿಪ್ಪಳಗಾಂವಕರ್‌ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ಸಿದ್ದಯ್ಯ ಆಧುನಿಕ ಒಡೆಯರ್‌ ಸಾನಿಧ್ಯ ವಹಿಸಿದ್ದರು.  ಮಕ್ಕಳ ವೈವಿಧ್ಯಮಯ ವಸ್ತುಪ್ರದರ್ಶನ ಅತಿಥಿ ಗಣ್ಯರ ಗಮನ ಸೆಳೆದವು.

ಚೀಫ್‌ ಟ್ರಸ್ಟಿ ರಮೇಶ ಗಾದಾ, ಪುರಸಭೆಯ ಸದಸ್ಯೆ ಸುರೇಖಾ ಗುರುದತ್ತ ಒಡೆಯರ್‌, ಸಂಸ್ಥೆ ಕೋಶಾಧ್ಯಕ್ಷ ನಾರಾಯಣರಾವ ಎಸ್‌. ಜಾಜಿ, ಸದಸ್ಯ ಮಾಣಿಕಪ್ಪ ಜಾಜಿ, ವೆಂಕಟೇಶ ಜಾಜಿ, ಸುರೇಖಾ ಜಾಜಿ, ಅರವಿಂದ ಸಿ.ನಿರ್ಣಾ, ಆಡಳಿತಾಧಿಕಾರಿ ಭೀಮರಾವ ಕುಲಕರ್ಣಿ, ಪ್ರಾಚಾರ್ಯರಾದ ಡಾ.ಗಿರೀಶ ಕಠ್ಠಳ್ಳಿ, ಮಲ್ಲಿನಾಥ ಚಿಂಚೋಳಿ, ರಾಠೋಡ್, ಸುಧಾಕರ ನಾಯಕ, ಮೀನಾಕ್ಷಿ ಜಾಧವ್ ಇದ್ದರು.

ಬಿ.ವಾಣಿ, ಜಿ.ಮಧುರಾ ಪ್ರಾರ್ಥಿಸಿದರು. ನಿರ್ಮಲಾ ಷಟಗಾರ್ ಪ್ರಾಸ್ತಾವಿಕ ಮಾತನಾಡಿದರು. ಸಂಗೀತಾ ನಿರೂಪಿಸಿ, ಕಾಶಿಬಾಯಿ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.