ADVERTISEMENT

ಭರ್ತಿಯಾಗುತ್ತಿವೆ ಬಂಡೀಪುರದ ಕೆರೆಗಳು

ಭರವಸೆ ಮೂಡಿಸಿದ ಮಳೆ: ಮಾಯವಾಗಿದ್ದ ಹಸಿರು ಮತ್ತೆ ಚಿಗುರೊಡೆಯುತ್ತಿದೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 6:22 IST
Last Updated 22 ಮೇ 2017, 6:22 IST
ಬಂಡೀಪುರದ ಕೆರೆಗಳಲ್ಲಿ ಮಳೆಯಿಂದ ನೀರು ಸಂಗ್ರಹವಾಗಿದೆ
ಬಂಡೀಪುರದ ಕೆರೆಗಳಲ್ಲಿ ಮಳೆಯಿಂದ ನೀರು ಸಂಗ್ರಹವಾಗಿದೆ   

ಗುಂಡ್ಲುಪೇಟೆ: ಬಂಡೀಪುರ ಅರಣ್ಯ ಪ್ರದೇಶದ ಭಾಗಗಳಲ್ಲಿ ಮೂರು ದಿನ ಗಳಿಂದ ಸತತ ಮಳೆಯಾಗುತ್ತಿರುವ ಪರಿಣಾಮ ಬಂಡೀಪುರ ಕಾಡಿನಲ್ಲಿರುವ ಬಹುತೇಕ ಕೆರೆಗಳು ತುಂಬಿವೆ. ಪ್ರಾಣಿ ಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ಕಾಡಿನಲ್ಲಿ ಹಸಿರು ತುಂಬಿಕೊಂಡಿದೆ.

ಮೂರು ವರ್ಷಗಳಿಂದ ಸರಿಯಾದ ಪ್ರಮಾಣದಲ್ಲಿ ಮಳೆಯಾಗದೆ ಇದ್ದುದ ರಿಂದ ತೀವ್ರ ಬರ ಕಾಡಿತ್ತು. ತುಂಬಿದ ಕೆರೆಗಳೆಲ್ಲ ಬರಿದಾಗಿ ಪ್ರಾಣಿಗಳೆಲ್ಲ ನೀರು ಇರುವ ಮದುಮಲೈ ಅರಣ್ಯ ಪ್ರದೇಶ ದತ್ತ ವಲಸೆ ಹೋಗುತ್ತಿದ್ದವು.

ಇದನ್ನು ಮನಗಂಡ ಅರಣ್ಯ ಇಲಾಖೆ ಕಾಡಿನಲ್ಲಿ ರುವ ಕೆರೆಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಿ ಪ್ರಾಣಿಗಳ ದಾಹವನ್ನು ಇಂಗಿಸಿತ್ತು. ಖಾಸಗಿಯವರ ಸಹಯೋಗದಲ್ಲಿ ಸೋಲಾರ್ ಪಂಪ್‌ಗಳನ್ನು ಅಳವಡಿಸಿ ಪ್ರಾಣಿಗಳಿಗೆ ಕಾಡಿನಲ್ಲೇ ನೀರು ಲಭ್ಯವಾಗುವಂತೆ ಮಾಡಲಾಗಿತ್ತು.

ಮಳೆಯ ಅಭಾವದ ಜೊತೆಗೆ ಕಲ್ಕೆರೆ ವಲಯ ಗೋಪಾಲಸ್ವಾಮಿಬೆಟ್ಟ, ಮೊಳೆ ಯೂರು ವಲಯಗಳಲ್ಲಿ ಬೆಂಕಿ ಬಿದ್ದ ಸಂಧರ್ಭದಲ್ಲಿ ಬೆಂಕಿ ಆರಿಸಲು ಬಂದಿದ್ದ ಸಿಬ್ಬಂದಿಗೆ ಕುಡಿಯಲು ಮತ್ತು ಬೆಂಕಿ ಆರಿಸಲು ನೀರಿನ ಸಮಸ್ಯೆ ಭೀಕರವಾಗಿತ್ತು. ಬೆಂಕಿಯಿಂದ ಕಾಡಿನ ಹಲವು ಭಾಗ ಬೆಂದು ಹಸಿರು ಮಾಯವಾಗಿತ್ತು.
ಇದೀಗ ಬಂಡೀಪುರ ಅರಣ್ಯ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕಾಡಿನ ಸಣ್ಣಪುಟ್ಟ ಗುಂಡಿಗಳು ಕೆರೆಕಟ್ಟೆಗಳು ತುಂಬಿಕೊಂಡಿವೆ.

ಭಾಗಶಃ ಕೆರೆಗಳು ಭರ್ತಿ: ಬಂಡೀಪುರದ ವಲಯದ 55 ಕೆರೆಗಳಲ್ಲಿ ಸುಮಾರು 20 ಕೆರೆಗಳು ತುಂಬಿವೆ. ಕೊಳಮಲ್ಲಿಕಟ್ಟೆ, ಸುಬ್ಬರಾಯನಕಟ್ಟೆ, ವೆಂಕಟಪ್ಪನಪಾಲ, ಗೋಪಾಲಸ್ವಾಮಿ ಬೆಟ್ಟದಲ್ಲಿರುವ 30 ಕೆರೆಗಳ ಪೈಕಿ 15 ಕೆರೆಗಳು ಭರ್ತಿಯಾಗಿವೆ.

ಕುಂದಕೆರೆ ಭಾಗದಲ್ಲಿರುವ 11 ಕೆರೆ ಗಳು ತುಂಬಿವೆ. ಮೂಲೆಹೊಳೆ ವಲಯ ದಲ್ಲಿ 30 ಕೆರೆಗಳಲ್ಲಿ 15 ಕೆರೆಗಳು ಭರ್ತಿ ಯಾಗಿವೆ. ವಲಯದ ನವಿಲು ಕೆರೆ, ಮಡ ಕೆರೆ, ಮೊಳೆಯೂರು ವಲ ಯದ 13 ಕೆರೆಗಳಲ್ಲಿ 9 ಕೆರೆಗಳು ಭರ್ತಿಯಾಗಿವೆ.

*
ಮೂರು ದಿನದಿಂದ ಸತತವಾಗಿ ಉತ್ತಮ ಮಳೆ ಸುರಿಯುತ್ತಿದೆ. ಕಾಡು ಹಸಿರಾಗುತ್ತಿದೆ. ವಲಸೆ ಹೋಗಿದ್ದ ಪ್ರಾಣಿಗಳು ಮತ್ತೆ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿವೆ.
-ಹೀರಾಲಾಲ್,
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ, ಹುಲಿ ಯೋಜನೆ ನಿದೇರ್ಶಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.