ADVERTISEMENT

ಭಾಷೆ ಬಳಕೆಯಲ್ಲಿ ಸೌಜನ್ಯ ಬೆಳೆಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 6:51 IST
Last Updated 12 ಏಪ್ರಿಲ್ 2014, 6:51 IST

ಯಳಂದೂರು: ಭಾಷೆಯ ಬಳಕೆಯಲ್ಲಿ ನಾವು ಸೌಜನ್ಯ ಬೆಳೆಸಿಕೊಳ್ಳುವ ಅನಿವಾರ್ಯತೆ ಪ್ರಸಕ್ತ ದಿನಗಳಲ್ಲಿ ಹೆಚ್ಚಾಗಿದೆ ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಓಂಕಾರ ಪ್ರಿಯ ಬಾಗೇಪಲ್ಲಿ ಕೆ. ನಾಗರಾಜು ತಿಳಿಸಿದರು.ಪಟ್ಟಣದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಈಚೆಗೆ ಹಮ್ಮಿ ಕೊಂಡಿದ್ದ  ‘ಕನ್ನಡ ಪದ ಸಂಪತ್ತು’ ಉಪನ್ಯಾಸ ಕಮ್ಮಟದಲ್ಲಿ ಭಾಗವಹಿಸಿ ಮಾತನಾಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮದ್ದೂರು ದೊರೆಸ್ವಾಮಿ ಮಾತನಾಡಿ, ಮನುಷ್ಯ ಅನುಕರಣೆಯ ಜೀವಿಯಾಗಿದ್ದಾನೆ. ಭಾಷೆ ಭಾವನೆಗೆ ರೂಪ ಕೊಡುವ ಸಾಧನವಾಗಿದೆ. ಭಾಷೆ ಹಾಗೂ ತಾಯಿ ಎರಡೂ ಒಂದೇ ಆಗಿದ್ದು ಅದನ್ನು ಪ್ರೀತಿಸುವ ಪೋಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಯಾವ ಕಾರಣಕ್ಕೂ ಇದರಿಂದ ವಿಮುಖರಾಗುವ ಕೆಲಸವಾಗಬಾರದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಾಗಿದೆ ಎಂದರು. 

ಕಾಲೇಜಿನ ಪ್ರಾಂಶುಪಾಲ ಎಂ.ವಿ. ಪುಷ್ಪಕುಮಾರ್‌, ಕನ್ನಡ ಉಪನ್ಯಾಸಕರಾದ ಪದ್ಮ, ಡಾ.ಶಿವರುದ್ರಪ್ಪ, ಪ್ರಕಾಶ್‌ಮೂರ್ತಿ, ಕೃಷ್ಣಮೂರ್ತಿ, ಹೇಮಂತ್‌, ಗಣೇಶ್‌ಪ್ರಸಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.