ADVERTISEMENT

ಯೋಜನೆಗಳ ಸದುಪಯೋಗ ಪಡೆಯಿರಿ

ಸತ್ತೇಗಾಲ; ಸಿ.ಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 5 ಮೇ 2017, 8:33 IST
Last Updated 5 ಮೇ 2017, 8:33 IST

ಕೊಳ್ಳೇಗಾಲ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಸದ್ಬಳಕೆಗೆ ಜನತೆ ಮುಂದಾಗಬೇಕು’ ಎಂದು ಶಾಸಕ ಆರ್‌.ನರೇಂದ್ರ ತಿಳಿಸಿದರು. 

ತಾಲ್ಲೂಕಿನ ಸತ್ತೇಗಾಲ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ  ನೀರಾ ವರಿ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹನೂರು ಕ್ಷೇತ್ರ ವ್ಯಾಪ್ತಿಯ ಮಧು ವನಹಳ್ಳಿ, ಕಾಮಗೆರೆ, ಅಜ್ಜೀಪುರ ಸೇರಿ ದಂತೆ ಇತರೆ ಗ್ರಾಮಗಳ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ ರೈತರಿಗೆ ಕಬಿನಿ ಇಲಾಖೆ ವತಿಯಿಂದ ಕೃಷಿ ಚಟು ವಟಿಕೆಗೆ ಬೋರ್‌ವೆಲ್‌ ಕೊರೆಸಲಾಗು ತ್ತಿದೆ. ರೈತರು ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಕೊಳವೆ ಬಾವಿ ಕೊರೆಸುವ ಸಲುವಾಗಿ ₹ 8 ಕೋಟಿ ಹಣ ಬಿಡುಗಡೆಯಾಗಿದ್ದು ರೈತರು ಈ ಯೋಜನೆ ಸದ್ಬಳಕೆಗೆ ಮುಂದಾಗಿದ್ದಾರೆ. ಎಸ್‌.ಇ.ಪಿ ಯೋಜನೆಯಡಿ ಹನೂರು ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಬಡಾವಣೆಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ₹ 2.10ಕೋಟಿ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ನಂಜುಂಡ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಂತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಅರುಣ್‌ಕುಮಾರ್‌, ಗ್ರಾ.ಪಂ. ಸದಸ್ಯ ನಂಜುಂಡಸ್ವಾಮಿ, ಸಿದ್ದಪ್ಪಾಜಿ, ಕಾಳಯ್ಯ, ಮುಖಂಡರಾದ ಸೋಮಣ್ಣ, ಕಾಂತರಾಜು, ಮಹದೇವ ಯಡ ಕುರಿಯ, ಶಿವಣ್ಣ, ಶಿವಶಂಕರ್‌ ಇತರರು ಇದ್ದರು.

ಪಾಳ್ಯ: ತಾಲ್ಲೂಕಿನ ಪಾಳ್ಯ ಗ್ರಾಮದ ನಾಯಕ ಬಡಾವಣೆಯಲ್ಲಿ 30 ಲಕ್ಷ ಅಂದಾಜು ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಆದಿಜಾಂಬವರ ಬೀದಿಯಲ್ಲಿ ₹ 10 ಲಕ್ಷ ಅಂದಾಜು ವೆಚ್ಚದ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಆರ್‌.ನರೇಂದ್ರ ಗುರುವಾರ ಭೂಮಿ ಪೂಜೆ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನೀಲಮ್ಮ, ಉಪಾಧ್ಯಕ್ಷ ಬಿ.ರವಿ, ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ಪಂಗಡ ವಿಭಾಗ ಜಿಲ್ಲಾಧ್ಯಕ್ಷ ಕೃಷ್ಣಪಾಳ್ಯ, ಅರಗು ಮತ್ತು ಬಣ್ಣ ಕಾರ್ಖಾನೆ ನಿರ್ದೇಶಕ ಸೀಗನಾಯಕ, ಮುಖಂಡರುಗಳಾದ ಮಲ್ಲ ನಾಯ್ಕ, ಲೋಕೇಶ್‌, ಪಕಾಳಿ ನಾಯಕ, ಚಿಕ್ಕಣ್ಣ, ಗುತ್ತಿಗೆದಾರರಾದ ಸಿದ್ದರಾಜು ಹಾಗೂ ಪಾಷ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.