ADVERTISEMENT

ಮಳೆ ಗಾಳಿಗೆ ಛಾವಣಿ ಹಾರಿ ಧಾನ್ಯ ಹಾನಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 6:37 IST
Last Updated 7 ಜೂನ್ 2018, 6:37 IST

ಚೇಳೂರು: ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಇಲ್ಲಿ ಸಮೀಪದ ಹೊಸಹುಡ್ಯ ಗ್ರಾಮದ ಚೌಡಮ್ಮ ಅವರ ಮನೆ ಚಾವಣಿ ಹಾರಿ ಹೋಗಿ ಸುಮಾರು ₹ 1.5 ಲಕ್ಷ ಮೌಲ್ಯದ ಸಾಮಗ್ರಿಗಳು ಹಾಳಾಗಿವೆ.

ಗ್ರಾಮದ ಚೌಡಮ್ಮ ಅವರ ಮನೆಯ ಚಾವಣಿ ಹಾರಿವೆ. ಮನೆಯಲ್ಲಿದ್ದ ದವಸ ಧಾನ್ಯ, ವಸ್ತ್ರ ಹಾಗೂ ಇನ್ನಿತರ ಸಾಮಗ್ರಿಗಳು ಹಾಳಾಗಿವೆ. ಕಂದಾಯ ಅಧಿಕಾರಿ ಜಯಪ್ರಕಾಶ್, ವೈ.ವೆಂಕಟೇಶ್, ಗ್ರಾಮ ಪಂಚಾಯ್ತಿ ಅಧಿಕಾರಿ ಹರೀಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆ ಹಾನಿಯಿಂದ ನಷ್ಟ ಅನುಭವಿಸುತ್ತಿರುವ ಸಂತ್ರಸ್ತೆ ಚೌಡಮ್ಮ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮದ ಹಿರಿಯರಾದ ಎಚ್.ವಿ.ನಾರಾಯಣಸ್ವಾಮಿ, ಪಿ.ವಿ.ಮದ್ದಿರೆಡ್ಡಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.