ADVERTISEMENT

ರಸ್ತೆ ನಿರ್ಮಿಸದ ಶಾಸಕರು: ಆರೋಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 6:42 IST
Last Updated 24 ನವೆಂಬರ್ 2017, 6:42 IST

ಚಿಂತಾಮಣಿ: ‘ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ’ ಎಂದು ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಡಾಬಾ ನಾಗರಾಜ್‌ ತಿಳಿಸಿದರು.

ತಾಲ್ಲೂಕಿನ ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಟ್ಟಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ₹ 18 ಲಕ್ಷ ವೆಚ್ಚದ ಚರಂಡಿ, ಅಂಗನವಾಡಿಗೆ ಕಾಂಪೌಂಡ್‌, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹುಲುಗುಮ್ಮನಹಳ್ಳಿಯ ಕೋಲಾರಮ್ಮ ದೇವಸ್ಥಾನ ರಾಜ್ಯದಲ್ಲಿ ಪ್ರಸಿದ್ಧವಾಗಿದೆ. ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ನೂರಾರು ಭಕ್ತರು ಹೊರಗಡೆಯಿಂದ ಬರುತ್ತಾರೆ. ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ 1.5 ಕಿ.ಮೀ ರಸ್ತೆಯನ್ನು ಮಾಡಿಸಲು
ಶಾಸಕರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯೆ ಪವಿತ್ರಾಚಂದ್ರಶೇಖರ್‌, ಎಪಿಎಂಸಿ ಸದಸ್ಯ ವೆಂಕಟಾಚಲಪತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥರೆಡ್ಡಿ, ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಮ್ಮ, ಸದಸ್ಯ ಮುನಿನಾರಾಯಣಪ್ಪ, ಎಂ.ಎ.ನಾರಾಯಣಸ್ವಾಮಿ, ಪರಮೇಶ್‌, ದೇವರಾಜ್‌, ಮುಖಂಡರಾದ ಎನ್‌.ಚಿನ್ನಪ್ಪ, ಬಿ.ಎಲ್‌.ನಂಜುಂಡಗೌಡ, ಗುಡಿಸಲು ನಾರಾಯಣಸ್ವಾಮಿ, ತಳಗವಾರ ಪುಟ್ಟಣ್ಣ, ಸೊಣ್ಣೇಗೌಡ, ಅಂಬರೀಶ್‌, ಎಲೆ ನಾಗರಾಜ್‌, ಮುಸ್ತಾಫಾ, ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.