ADVERTISEMENT

ಅತಿ ಮಳೆ: ರೊಬಸ್ಟಾ ಕಾಫಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 8:16 IST
Last Updated 31 ಜುಲೈ 2014, 8:16 IST
ಅತಿ ಮಳೆ: ರೊಬಸ್ಟಾ ಕಾಫಿಗೆ ಹಾನಿ
ಅತಿ ಮಳೆ: ರೊಬಸ್ಟಾ ಕಾಫಿಗೆ ಹಾನಿ   

ಚಿಕ್ಕಮಗಳೂರು: ಸಿರವಾಸೆ ಸುತ್ತ ಮುತ್ತಲ ಪ್ರದೇಶದಲ್ಲಿ ಮಳೆ ಅತಿಯಾಗಿ ರೊಬಸ್ಟಾ ಕಾಫಿ ಉದುರಲಾರಂಭಿಸಿದೆ. ಮಲ್ಲಂದೂರು ಕಾಫಿ ಮಂಡಳಿ ವ್ಯಾಪ್ತಿಯ ಸಿರವಾಸೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ  ಸ್ಪಿಂಕ್ಲರ್ ಮೂಲಕ ನೀರು ಹಾಯಿಸಿದ್ದರಿಂದ ಗಿಡದಲ್ಲಿ ಈ ವರ್ಷ ಫಸಲು ಉತ್ತಮ ವಾಗಿತ್ತು.

ಆದರೆ, ಈಗ ಕಾಫಿ ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತಿದೆ ಎಂದು ಬೆಳೆಗಾರ ಬಿ.ನಂದೀಶ್ ತಿಳಿಸಿದ್ದಾರೆ. ಕಳೆದ 20 ದಿನಗಳಿಂದ ಮಳೆ ಸುರಿಯು ತ್ತಿರುವುದರಿಂದ ಶೀತ ವಾತಾವರಣ ಹೆಚ್ಚುತ್ತಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ಕಾಫಿ ಮತ್ತು ಮೆಣಸಿನ ಫಸಲು ಕಡಿಮೆಯಾಗಿದ್ದರಿಂದ ಈ ವರ್ಷ ತೋಟದ ನಿರ್ವಹಣೆ ಕಷ್ಟಕರವಾಗಿತ್ತು ಎಂದು ತಿಳಿಸಿದ್ದಾರೆ.

ಇದೇ ಪರಿಸ್ಥಿತಿ ಮುರುಕಳಿಸಿದರೆ ಜಮೀನನ್ನು ಮಾರಾಟ ಮಾಡಿ ಕೃಷಿ ಚಟುವಟಿಕೆಗಳಿಂದ ದೂರ ಉಳಿದು ನಗರ ಪ್ರದೇಶಗಳಿಗೆ ವಲಸೆ ಹೋಗುವ ದಿನಗಳು ದೂರ ಉಳಿದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬೆಳೆಗಾರರ ಪರಿಸ್ಥಿತಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಸಂಘಟ ನೆಗಳು, ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
ಮತ್ತೆ ಚುರುಕುಗೊಂಡ ಮಳೆ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ, ಬುಧವಾರ ಮುಂಜಾನೆಯಿಂದಲೇ ಚುರುಕುಗೊಂಡಿದ್ದು, ಹಗ ಲಿಡೀ ಸುರಿದ ಪರಿಣಾಮ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಮಂಗಳವಾರ ಮುಂಜಾನೆ ಸುಮಾರು ಎರಡು ಗಂಟೆ ಸುರಿದ ಮಳೆ, ಹಗಲಿಡೀ ಬಿಡುವು ನೀಡಿತ್ತು. ಅದೇ ಲೆಕ್ಕಾಚಾರ ದಲ್ಲಿ ರೈತಾಪಿ ವರ್ಗ ಕೃಷಿ ಚಟುವಟಿಕೆಗೆ ಸಿದ್ಧತೆ ಮಾಡಿಕೊಂಡು, ಹಲವು ರೈತರು ಮಂಗಳವಾರವೇ ಗದ್ದೆ ನಾಟಿಗಾಗಿ ಸಸಿ ಕಿತ್ತಿಟ್ಟಿದ್ದರು. ಆದರೆ ಬುಧವಾರ ಎಡಬಿಡದೇ ಸುರಿದ ಮಳೆಯಿಂದ ಕಾರ್ಮಿಕರು ಗದ್ದೆಗಿಳಿ ಯದ ಪರಿಣಾಮ, ಕಿತ್ತ ಸಸಿಯನ್ನು ನೆಡಲಾಗದೇ ಪರಿತಪಿಸುವಂತಾಯಿತು.

ಮೂರು ದಿನಗಳು ಮಳೆ ಬಿಡುವು ನೀಡಿದ್ದರಿಂದ ಹರಿಯುವ ಮಟ್ಟದಲ್ಲಿ ಇಳಿಕೆ ಕಂಡಿದ್ದ ಹೇಮಾವತಿ, ಜಪಾವತಿ, ಚಿಕ್ಕಳ್ಳ, ಊರುಬಗೆಹಳ್ಳಗಳಲ್ಲಿ ಬುಧವಾರ ಪುನಃ ನೀರಿನ ಹರಿಯುವ ಮಟ್ಟದಲ್ಲಿ ಏರಿಕೆಯಾಗಿದ್ದು, ಕೃಷಿ ಚಟುವಟಿಕೆಯಲ್ಲಿ ಜಾಗೃತರಾಗುವಂತೆ ತಾಲ್ಲೂಕು ಆಡಳಿತ ತಿಳಿಸಿದೆ.

ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ಸರಾಸರಿ ಸುಮಾರು 40 ಇಂಚು ಮಳೆಯಾಗಿದ್ದು, ಕಾಫಿ ಬೆಳೆಗೆ ಶೀತ ಹೆಚ್ಚಳವಾಗಿ ಈಗಾಗಲೇ ರೋಬ ಸ್ಟಾ ಮತ್ತು ಅರೇಬಿಕಾ ಕಾಫಿ ಉದುರ ತೊಡಗಿದ್ದು, ಮಳೆ ಮುಂದುವರೆದಲ್ಲಿ ಇನ್ನಷ್ಟು ಹಾನಿಯಾಗುವ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT