ADVERTISEMENT

ಅಮೃತ ಮಹಲ್ ನಿರ್ವಹಣೆಗೆ ಪ್ರಾಧಿಕಾರ ರಚನೆ

ಅಜ್ಜಂಪುರ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರಕ್ಕೆ ಸಚಿವ ಮಂಜು ಭೇಟಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 8:32 IST
Last Updated 16 ಫೆಬ್ರುವರಿ 2017, 8:32 IST
ಬೀರೂರು: ದೇಸಿ ತಳಿಯ ಅತ್ಯುತ್ತಮ ಮಾದರಿ ಎನಿಸಿರುವ ಅಮೃತಮಹಲ್ ತಳಿ ರಾಸುಗಳು ಮತ್ತು ಕಾವಲುಗಳ ನಿರ್ವಹಣೆಗೆ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ಚಿಂತಿಸಿದ್ದು ಇದರಿಂದ ನಿರ್ವಹಣೆ ಸುಲಭವಾಗಲಿದೆ ಎಂದು ಪಶು ಸಂಗೋಪನಾ ಸಚಿವ ಎ.ಮಂಜು ತಿಳಿಸಿದರು.
 
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂ ಪುರ ಮತ್ತಿತರ ಅಮೃತಮಹಲ್ ಕಾವ ಲುಗಳಲ್ಲಿ ರಾಸುಗಳ ಮರಣ ಮತ್ತಿತರ ಸಮಸ್ಯೆಗಳ ನಿರ್ವಹಣೆಯ ಲೋಪಗಳ ಕುರಿತ ದೂರಿನ ಅನ್ವಯ ಬುಧವಾರ ಅಜ್ಜಂಪುರ ಕೇಂದ್ರದ ಬಳಿಕ ಬೀರೂರು ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪತ್ರಕರ್ತರೊಂದಿಗೆ ಮಾತನಾಡಿದರು.
 
 ಈ ಹಂತದಲ್ಲಿ ಸಚಿವರ ಗಮನ ಸೆಳೆದ ಮಾಜಿ ಶಾಸಕ ಕೆ.ಬಿ.ಮಲ್ಲಿ ಕಾರ್ಜುನ, ರಾಷ್ಟ್ರೀಯ ಹೆದ್ದಾರಿ ಬದಿಯ ಲ್ಲಿರುವ ಬೀರೂರು ಅಮೃತಮಹಲ್ ತಳಿಸಂವರ್ಧನಾ ಕೇಂದವ್ರು 861 ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಈ ಕೇಂದ್ರವನ್ನು ಹಲವು ರೀತಿಯಲ್ಲಿ ಬಳಸಿ ಕೊಳ್ಳಬಹುದಾಗಿದೆ.  ಉತ್ತಮ ಸಂಚಾರ ಸೌಲಭ್ಯ ಮತ್ತು ಪರಿಸರದಲ್ಲಿರುವ ಈ ವಿಶಾಲ ಜಾಗದಲ್ಲಿ ಹೈನುಗಾರಿಕೆ ಡಿಪ್ಲೊಮೊ ಕಾಲೇಜು ಸ್ಥಾಪನೆ, ಪಶು ಆಹಾರ ಘಟಕ, ಸಂಶೋಧನಾ ಕೇಂದ್ರ  ಸೇರಿದಂತೆ ಹಲವು ರೀತಿಯ ಘಟಕಗ ಳನ್ನು ಸ್ಥಾಪಿಸುವ  ಅವಕಾಶಗಳಿದ್ದು ಈ ಜಾಗವನ್ನು ನಿರ್ಲಕ್ಷಿಸದಂತೆ ಇಲಾಖೆಗೆ ಸೂಚಿಸಬೇಕು ಎಂದು ಕೋರಿದರು.
 
 ಪ್ರತಿಕ್ರಿಯಿಸಿದ ಸಚಿವರು ಮಾಜಿ ಶಾಸಕರು ನೀಡಿರುವ ಸಲಹೆಯನ್ನು ಪರಿಗಣಿಸಿದ್ದು, ಇದೇ 18ರಂದು ಅರಸೀ ಕೆರೆಯಲ್ಲಿ ನಡೆಯಲಿರುವ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತಂತೆ  ಚರ್ಚಿಸಲಾಗು ವುದು ಎಂದು ಭರವಸೆ ನೀಡಿದರು.
 
ಬೀರೂರಿನಲ್ಲಿ ಇರುವ ಉತ್ತಮ ಅವಕಾಶಗಳನ್ನು ಇಲಾಖೆ ಬಳಸಿ ಕೊಳ್ಳದೇ ನಿರ್ಲಕ್ಷವಹಿಸಿದೆ ಬೀರೂರಿ ನಿಂದ ಕೇವಲ 15ಕಿಮಿ ಅಂತರ ದಲ್ಲಿರುವ ಅಜ್ಜಂಪುರದ ಕೇಂದ್ರಕ್ಕೆ ಬೇಕಾದ ಮೇವು ಹಾಗೂ ಇನ್ನಿತರ ಸೌಲ ಭ್ಯಗಳನ್ನು ಇಲ್ಲಿಂದಲೇ ನೀಡುವ ಅವಕಾಶಗಳಿದ್ದರೂ, ಅಜ್ಜಂಪುರ ಕೇಂದ್ರದ ಪರಿಸ್ಥಿತಿ ಹದಗೆಟ್ಟಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹಿಸಲಾಗದು, ಪ್ರಾಧಿ ಕಾರ ರಚನೆಯಾದಲ್ಲಿ ವ್ಯವಸ್ಥೆ ಸುಧಾರಣೆ ಯಾಗುವ ಭರವಸೆ ವ್ಯಕ್ತಪಡಿಸಿದರು. 
 
ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ್ ಮಾತನಾಡಿದರು. ಸಚಿವರ ಭೇಟಿ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಆನಂದ್, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಜಿ.ಶ್ರೀನಿ ವಾಸಮೂರ್ತಿ, ಮೆಸ್ಕಾಂ ನಿರ್ದೇಶಕ ವಿ.ಜೈರಾಮ್. ತಾಲ್ಲೂಕು ಪಂಚಾಯಿತಿ ಸದಸ್ಯ ಪಂಚನಹಳ್ಳಿ ಪ್ರಸನ್ನ, ಬಾಸೂರು  ಚಂದ್ರಮೌಳಿ, ಮಹಮದ್ ಆರಿಫ್, ಅಮೃತಮಹಲ್ ಬೀರೂರು ಕೇಂದ್ರದ ಸಹಾಯಕ ನಿರ್ದೇಶಕ ಡಾ.ನವೀನ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.