ADVERTISEMENT

ಗಾಂಧೀಜಿ ಉದ್ಯಾನ ಅಭಿವೃದ್ಧಿಪಡಿಸಿ

ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 7:06 IST
Last Updated 3 ಫೆಬ್ರುವರಿ 2017, 7:06 IST
ಗಾಂಧೀಜಿ ಉದ್ಯಾನ ಅಭಿವೃದ್ಧಿಪಡಿಸಿ
ಗಾಂಧೀಜಿ ಉದ್ಯಾನ ಅಭಿವೃದ್ಧಿಪಡಿಸಿ   

ಚಿಕ್ಕಮಗಳೂರು: ‘ಆಧುನಿಕ ರೀತಿಯಲ್ಲಿ ನಗರದ ಮಹಾತ್ಮಗಾಂಧಿ ಉದ್ಯಾನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳ ಲಾಗುವುದು’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಅವರು ಮಾತನಾಡಿ,  ಮಹಾತ್ಮ ಗಾಂಧಿ ಉದ್ಯಾನ ಮುಳ್ಳಯ್ಯನಗಿರಿ ರಸ್ತೆಯ ಲ್ಲಿದ್ದು, ಅದನ್ನು ಅಭಿವೃದ್ಧಿಪಡಿಸಿದರೆ ಪ್ರವಾಸಿ ಕೇಂದ್ರ ವಾಗುತ್ತದೆ. ಈ ಕುರಿತು ಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರ 2015–20ರ ಪ್ರವಾಸೋ ದ್ಯಮ ನೀತಿ ಪ್ರಕಟಿಸಿದ್ದು, ಇದರಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆ ಯಾಗಿದೆ. ಅನುಕೂಲಕರ ಹಾಗೂ ಪಾರ ದರ್ಶಕವಾಗಿದ್ದು, ಉದ್ಯಮಿಗಳಿಗೆ ಪ್ರವಾ ಸೋದ್ಯಮ ನೀತಿ ಪ್ರೋತ್ಸಾಹದಾಯ ಕವಾಗಿದೆ. ಪ್ರವಾಸೋ ದ್ಯಮ ಅಭಿವೃದ್ಧಿ ಕಾರ್ಯ ಗಳನ್ನು ಬಂಡವಾಳ ಹೂಡು ವವರಿಗೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಾಗ ಪರವಾನಗಿ ಹಾಗೂ ಪ್ರಮಾಣ ಪತ್ರ ಪಡೆಯಲು ಸರಳಗೊಳಿ ಸಲಾಗಿದೆ. ವಿಭಾಗೀಯ ವರ್ಗ ಆಧಾ ರದಿಂದ ಪ್ರವಾಸೋದ್ಯಮ ಯೋಜನೆ ಗಳು ಹಾಗೂ ಚಟುವಟಿಕೆಗಳಿಗೆ ಹೂಡಿಕೆ ಮೇಲೆ ರಿಯಾಯಿತಿ ಹಾಗೂ ಸಹಾಯ ಧನ ನೀಡಲಾಗುವುದು ಎಂದರು. 

ಜಿಲ್ಲೆಯನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿ ಸುವ  ನಿಟ್ಟಿನಲ್ಲಿ ‘ಕಾಫಿ ಟೇಬಲ್ ಪುಸ್ತಕ’ ಹೊರತರಲಾಗುತ್ತಿದೆ. ಜಿಲ್ಲೆಯ ಪ್ರೇಕ್ಷ ಣೀಯ ಸ್ಥಳ ಮಾಹಿತಿ ನೀಡಲು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ‘ಪ್ರವಾಸಿ ನಕ್ಷೆ’ ಸಿದ್ಧಪಡಿಸುವುದಾಗಿ ತಿಳಿಸಿದರು.ಆನ್‌ಲೈನ್‌ನಲ್ಲಿ 230 ಹೋಂ ಸ್ಟೇಗಳು ನೋಂದಣಿಯಾಗಿದ್ದು, ಪ್ರವಾ ಸೋದ್ಯಮ ಅಭಿವೃದ್ಧಿಗೆ ಇಲಾಖೆಯಿಂದ ಕೈಗೊಂಡಿರುವ, ಪೂರ್ಣಗೊಂಡಿರುವ ಕಾಮಗಾರಿಗಳ ಮಾಹಿತಿ ನೀಡಿದರು.

ಶಾಸಕ ಸಿ.ಟಿ ರವಿ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಗಳಿಗೆ ಪ್ರವಾಸಿ ಟ್ಯಾಕ್ಸಿ ನೀಡಲಿದ್ದು, ಟ್ಯಾಕ್ಸಿಗಳಿಗೆ ಸಲ್ಲಿಸಿರುವ ಅರ್ಜಿಗಳಲ್ಲಿ ಸ್ವಯಂ ದೃಢೀಕರಣ ಮಾಡದ ಅರ್ಜಿ ತಿರಸ್ಕರಿಸಲಾಗಿದೆ. ಅವುಗಳನ್ನು ಸಂಬಂಧಪಟ್ಟ ಅರ್ಜಿದಾರರಿಂದ ಸ್ವಯಂ ದೃಢೀಕರಣ ಮಾಡಿಸುವಂತೆ ತಿಳಿಸಿದರು.

ಶಾಸಕ ಜಿ.ಎಚ್‌.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಎಂ.ಕೆ.ಪ್ರಾಣೇಶ್‌, ಅರಣ್ಯ, ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್‌, ಜಿಲ್ಲಾ ಉಪ ಅರಣ್ಯ ಸಂರಕ್ಷಣ ಅಧಿಕಾರಿ ಎ.ಚಂದ್ರಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.