ADVERTISEMENT

ಚಿಕ್ಕಗ್ರಹಾರ :ಗ್ರಾಮಗಳಲ್ಲಿ ಹೆಚ್ಚಿದ ಆನೆ ಹಾವಳಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 9:33 IST
Last Updated 15 ಸೆಪ್ಟೆಂಬರ್ 2017, 9:33 IST

ನರಸಿಂಹರಾಜಪುರ: ತಾಲ್ಲೂಕಿನ ಬಾಳೆ ಹಾಗೂ ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಆನೆಗಳ ಹಾವಳಿ ಹೆಚ್ಚಾಗಿದ್ದು ಫಸಲಿಗೆ ಬಂದಿದ್ದ ಅಡಿಕೆ ತೋಟಗಳಿಗೆ ನುಗ್ಗಿ ಮರಗಳನ್ನು ಧರೆಗೆ ಉರುಳಿಸಿವೆ.

ತಾಲ್ಲೂಕಿನ ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರಿನ ಕಟ್ಟೆಗೌಡರ ಅಡಿಕೆ ತೋಟಕ್ಕೆ ಬುಧವಾರ ರಾತ್ರಿ ದಾಳಿ ಮಾಡಿದ 9 ಆನೆಗಳ ಹಿಂಡು 20 ವರ್ಷದ ಸುಮಾರು 150ಕ್ಕೂ ಅಧಿಕ ಅಡಿಕೆಮರಗಳನ್ನು ಮುರಿದು ಧರೆಗೆ ಉರುಳಿಸಿವೆ.

ಕಳೆದ ಕೆಲವು ದಿನಗಳ ಹಿಂದೆ ಹೆನ್ನಂಗಿ ಗ್ರಾಮದ ಗೋವಿಂದೇಗೌಡ ಎಂಬುವರ ಅಡಿಕೆ ತೋಟಕ್ಕೆ ದಾಳಿ ನಡೆಸಿದ ಆನೆಗಳ ಹಿಂಡು 350ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಮುರಿದುಹಾಕಿವೆ. ಇದೇ ಗ್ರಾಮದ ವ್ಯಾಪ್ತಿಯ ಜಗದೀಶ, ವಿಜಯ ಎಂಬುವರ ಅಡಿಕೆ ತೋಟಕ್ಕೂ ನುಗ್ಗಿ ಹಾನಿ ಮಾಡಿದ್ದು ರೈತರಿಗೆ ಲಕ್ಷಂತಾರೂಪಾಯಿ ನಷ್ಟವುಂಟಾಗಿದೆ.
ಅರಣ್ಯ ಇಲಾಖೆಯವರು ಆನೆಗಳ ದಾಳಿಯಿಂದ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸ ಬೇಕು ಹಾಗೂ ಆನೆಗಳ ಹಾವಳಿಯನ್ನು ತಪ್ಪಿಸ ಬೇಕೆಂದು ಕಟ್ಟೆಗೌಡರು ಆಗ್ರಹಿಸಿದ್ದಾರೆ.

ADVERTISEMENT

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಅಡಿಕೆ ಬೆಳೆಗಾರರಿಗೆ ಭಾರಿ ನಷ್ಟವುಂಟಾಗಿದೆ. ಇತ್ತೀಚೆಗೆ ಹುಲಿಗಳ ಹಾವಳಿಯು ಸಹ ಹೆಚ್ಚಾಗಿದ್ದು ರೈತರು ಸಾಕಾಣಿಕೆ ಮಾಡಿದ ಹಸುಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತಿವೆ. ಅರಣ್ಯ ಇಲಾಖೆಯವರು ಕಾಡು ಪ್ರಾಣಿಗಳ ಹಾವಳಿಯಿಂದ ಜನ, ಜಾನುವಾರುಗಳಿಗೆ ರಕ್ಷಣೆ ನೀಡಬೇಕೆಂದು ಹೊಸೂರು ಸುರೇಶ್ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.