ADVERTISEMENT

ನಗರೋತ್ಥಾನ 3ನೇ ಹಂತದ ಅನುದಾನ ಸದ್ಬಳಕೆ

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 5:59 IST
Last Updated 22 ಏಪ್ರಿಲ್ 2017, 5:59 IST
ಚಿಕ್ಕಮಗಳೂರು: ‘ಜಿಲ್ಲೆಯ ನಗರಸಭೆ–ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಗಳಿಗೆ ನಗರೋತ್ಥಾನ ಯೋಜನೆ 3ನೇ ಹಂತದ ಅನುದಾನದ ಸಮರ್ಪಕ ಬಳಕೆ ಜತೆಗೆ, ಅಗತ್ಯ ಮೂಲಸೌಕರ್ಯ ಅಭಿ ವೃದ್ಧಿ ಕಾರ್ಯ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದರು.
 
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ನಗರ ಸಳ್ಥಿಯ ಸಂಸ್ಥೆಗಳಿಗೆ ಮಂಜೂ ರಾಗಿರುವ ಅನುದಾನಕ್ಕೆ ತಯಾರಿಸಿರುವ ಕ್ರಿಯಾಯೋಜನೆಗಳ ಅನುಮೋದನೆ ನೀಡುವ ಕುರಿತು ಪರಿಶೀಲನೆ ಸಭೆಯಲ್ಲಿ  ಅವರು ಮಾತನಾಡಿದರು.
 
‘ನಗರದ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ಜಿಲ್ಲೆಯ ನಗರಸಭೆಗೆ ₹35 ಕೋಟಿ, ಪುರಸ ಭೆಗಳಿಗೆ ₹7.5 ಕೋಟಿ ಹಾಗೂ ಪಟ್ಟಣ ಪಂಚಾಯಿತಿಗೆ ತಲಾ ₹2 ಕೋಟಿಯಂತೆ ಒಟ್ಟು ₹55.5 ಕೋಟಿ ಅನುದಾನ ನೀಡಲಾಗಿದೆ.
 
ಸರ್ಕಾರದ ಮಾರ್ಗಸೂಚಿ ಅನ್ವಯ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಮಟ್ಟದಲ್ಲಿ ಅನುಮೋದನೆ ಪಡೆದು ಸರ್ಕಾರದ ಮಂಜೂರಾತಿಗೆ ಕಳುಹಿಸಬೇಕು’ ಎಂದರು.
 
‘ಮೂರನೇ ಹಂತದ ನಗರೋತ್ಥಾನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ಕುಡಿಯುವ ನೀರಿನ ಯೋಜನೆಗೆ ಪ್ರಥಮ ಆದ್ಯತೆ ನೀಡಬೇಕು. ಉಳಿದ ಮೊತ್ತದಲ್ಲಿ ಶೇ 70 ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ, ಶೇ10 ಮಳೆ ನೀರಿನ ಕಾಮಗಾರಿಗಳಿಗೆ ಹಾಗೂ ಉಳಿದ ಶೇ 20 ಅನುದಾನದಲ್ಲಿ ಸಮು ದಾಯ ಮತ್ತು ಸಾರ್ವಜನಿಕ ಶೌಚಾ ಲಯ, ಆಧುನಿಕ ಬಸ್ ನಿಲ್ದಾಣ, ಮಾರು ಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು’ ಎಂದರು.
 
‘ಕಾಮಕಾರಿಗಳನ್ನು ಕೈಗೊಳ್ಳುವಾಗ ನಗರ ಸಳ್ಥೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾಮಾಜಿಕವಾಗಿ ಹಾಗೂ ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಶೇ 24.10 ಮೊತ್ತದ ಕಾಮಕಾರಿ ಕಡ್ಡಾ ಯವಾಗಿ ಕೈಗೊಳ್ಳಬೇಕು’ ಎಂದರು.
 
‘ನಗರಸಭೆ ವ್ಯಾಪ್ತಿಯ ಅಮೃತ್ ಯೋಜನೆಯ ಕಾಮಗಾರಿಗೆ ನಗರಸಭೆ ಪಾಲಿನ ವಂತಿಕೆ ಕಾಯ್ದಿರಿಸಬೇಕು. ಸರ್ಕಾ ರದ ಮಾರ್ಗಸೂಚಿಯಂತೆ ಕ್ರಿಯಾ ಯೋಜನೆ ಆದಷ್ಟು ಶೀಘ್ರದಲ್ಲಿ ತಯಾ ರಿಸಿ, ನಗರ ಅಭಿವೃದ್ಧಿ ಕೋಶ ಪರಿಶೀ ಲಿಸಿದ ನಂತರ ಜಿಲ್ಲಾಮಟ್ಟದ ಸಮಿತಿ ಯಿಂದ ಅನುಮೋದನೆ ಪಡೆದು ಸರ್ಕಾರದ ಅನುಮತಿಗೆ ಕಳುಹಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.
 
‘ಕ್ರಿಯಾಯೋಜನೆ ಸಿದ್ಧಪಡಿಸುವಾಗ ಸಳ್ಥೀಯ ಸಂಸ್ಥೆಯ ವ್ಯಾಪ್ತಿಯ ಪ್ರತಿ ಯೊಂದು ವಾರ್ಡ್‌ಗಳಲ್ಲಿಯೂ ಕಾಮ ಗಾರಿ ಕೈಗೊಳ್ಳುವಂತೆ ಸಿದ್ಧಪಡಿಸಲು ಸಲಹೆ ನೀಡಿದರು. ಕಾಮಗಾರಿಗಳು ಗುಣಮಟ್ಟ ಖಚಿತಪಡಿಸಿಕೊಳ್ಳುವುದು ಯೋಜನಾ ಅನುಷ್ಠಾನ ಸಮಾ ಲೋಚಕರ ಕರ್ತವ್ಯ. ಇದನ್ನು ಚಾಚೂ ತಪ್ಪದೇ ಪಾಲಿಸಬೇಕು’ ಎಂದರು
 
ಶಾಸಕರಾದ ಸಿ.ಟಿ.ರವಿ, ಡಿ.ಎನ್.ಜೀವರಾಜ್, ಜಿ.ಎಚ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಸಳ್ಥೀಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.