ADVERTISEMENT

ನೀರು ಪೂರೈಕೆ, ವಾಹನ ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:45 IST
Last Updated 21 ಏಪ್ರಿಲ್ 2017, 6:45 IST

ಅಜ್ಜಂಪುರ: ‘ನೀರು ಪೂರೈಕೆಗಾಗಿ ಗ್ರಾಮ ಪಂಚಾಯಿತಿಯಿಂದ ನಡೆಯು ತ್ತಿರುವ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯನ್ನು ಶೀಘ್ರವೇ ಪೂರ್ಣ ಗೊಳಿಸಬೇಕು’ ಎಂದು ಬನಶಂಕರಿ ರಸ್ತೆ ನಿವಾಸಿಗಳು ಆಗ್ರಹಿಸಿದ್ದಾರೆ.‘ನಳದಲ್ಲಿ ನೀರು ಪೂರೈಕೆಗಾಗಿ ಹೊಸ ಪೈಪ್‌ಲೈನ್‌ ಅಳವಡಿಕೆ ಕಾಮ ಗಾರಿ ಆರಂಭಗೊಂಡು ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ಒಂದೆರಡು ದಿನಗಳಲ್ಲಿ ಮುಗಿಸಬಹುದಾದ ಕಾಮ ಗಾರಿಯನ್ನು ಹಲವು ದಿನಗಳಾ ದರೂ ಮುಗಿಸಿಲ್ಲ. ಇದರಿಂದ ನಾವು ನೀರಿಲ್ಲದೇ ಪರದಾಡುವಂತಾಗಿದ್ದು, ರಸ್ತೆ ಅಗೆದಿರು ವುದರಿಂದ ಮಕ್ಕಳು ಹಾಗೂ ವಾಹನ ಸಂಚಾರಕ್ಕೂ ತೊಂದರೆಯಾಗಿದೆ’ ಎನ್ನುತ್ತಾರೆ ನಿವಾಸಿಗಳು.

‘ಕಿರಾಳಮ್ಮ ದೇವಿ ರಥೋತ್ಸವ ಸಂದರ್ಭದಲ್ಲೂ ಪಂಚಾಯಿತಿ ಕಾಮಗಾರಿ ನೆಪ ಮಾಡಿ ನಳದ ಮೂಲಕ ನೀರು ನೀಡಲಿಲ್ಲ. ಇಂದಿಗೂ ನಾವು ₹ 200 ಪಾವತಿಸಿ, ಖಾಸಗಿಯವರಿಂದ ಸಿಂಟೆಕ್ಸ್ ನೀರು ಕೊಳ್ಳುತ್ತಿದ್ದೇವೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ, ಅನುಕೂಲ ಮಾಡಿಕೊಡುವಂತೆ ಪಿಡಿಒ ಮತ್ತು ಜಿಲ್ಲಾ ಪಂಚಾಯಿತಿ ದೂರು ನೀಡಲು ಇರುವ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ತೋಡಿಕೊಂಡರೂ ಪ್ರಯೋಜನವಾಗಿಲ್ಲ. ಸಂಬಂದಪಟ್ಟ ವರು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗೆ ಸೂಚಿಸಬೇಕು’ ಎಂದು ನಿವಾಸಿ ಮೂರ್ತಿ ಒತ್ತಾಯಿಸಿದ್ದಾರೆ.

‘ಬನಶಂಕರಿ ರಸ್ತೆಯಲ್ಲಿ 13ನೇ ಹಣಕಾಸು ಯೋಜನೆಯಡಿ ₹80 ಸಾವಿರ ವೆಚ್ಚದಲ್ಲಿ ನಡೆಸಲಾಗುತ್ತಿರುವ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು,  ಮೇಲ್ಮಖವಾಗಿ ಪೈಪ್ ಅಳವಡಿಸುವಿಕೆ ಮಾತ್ರ ಬಾಕಿಯಿದೆ. ಒಂದೆರಡು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ರಸ್ತೆ ನಿವಾಸಿಗಳ ಮನೆ ನಳಗಳಿಗೆ ನೀರು ನೀಡಲಾಗುವುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರ್ಷವರ್ಧನ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.