ADVERTISEMENT

ಶಾರದಾ ಮಠಕ್ಕೆ ಹರಿದು ಬಂತು ಹೊರೆಕಾಣಿಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:58 IST
Last Updated 31 ಜನವರಿ 2017, 6:58 IST
ಶಾರದಾ ಮಠಕ್ಕೆ ಹರಿದು ಬಂತು ಹೊರೆಕಾಣಿಕೆ
ಶಾರದಾ ಮಠಕ್ಕೆ ಹರಿದು ಬಂತು ಹೊರೆಕಾಣಿಕೆ   

ಶೃಂಗೇರಿ: ಶಾರದಾ ಮಠದಲ್ಲಿ ನಡೆ ಯುತ್ತಿರುವ ಶಾರದಾಲಯ ಸ್ವರ್ಣಶಿಖರ ಕುಂಭಾಭಿಷೇಕದ ಪ್ರಯುಕ್ತ ಕ್ಷೇತ್ರದ ಭಕ್ತರು ಮಠಕ್ಕೆ ಹೊರೆಕಾಣಿಕೆಗಳನ್ನು ಸಲ್ಲಿಸಿದರು.

ಪಟ್ಟಣದ  ಶಂಕರಾಚಾರ್ಯ ವೃತ್ತ ದಿಂದ ಪ್ರಾರಂಭಗೊಂಡ ಹೊರೆಕಾಣಿಕೆ ಸಮರ್ಪಣೆಯ ಕಾರ್ಯಕ್ರಮಕ್ಕೆ ಶಾರದ ಮಠದ ಆಡಳಿತಾಧಿಕಾರಿ ಡಾ.ವಿ.ಆರ್. ಗೌರೀಶಂಕರ್ ಚಾಲನೆ ನೀಡಿದರು. ಶಾಸಕ ಡಿ.ಎನ್.ಜೀವರಾಜ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಮಾ ಸೋಮಶೇಖರ್, ತಾಲ್ಲೂಕು ಪಂಚಾ ಯಿತಿ, ಪಟ್ಟಣ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು ಮೆರವ ಣಿಗೆಯಲ್ಲಿ ಪಾಲ್ಗೊಂಡರು.

ಗೀರ್ವಾಣಿ ಮಹಿಳಾ ಸಂಘದ ಪೂರ್ಣಕುಂಭ, ಶಾರದ ಮಠದ ಆನೆ ಗಳು, ವಾದ್ಯವೃಂದದವರು, ರಕ್ತೇಶ್ವರಿ ಎಂಜಿನಿಯರ್ ವರ್ಕ್ಸ್, ಕೋಟೆಕಾರಿನ  ಸುಬ್ರಮಣ್ಯ ಸ್ಥಾನಿಕ ಸಮಾಜ ಸಂಘ, ದ್ಯೆವಜ್ಞ ಬ್ರಾಹ್ಮಣ ಸಮಾಜ, ರಕ್ಷಾ ಚಾರಿಟಬಲ್ ಟ್ರಸ್ಟ್, ಬ್ರಹ್ಮಶ್ರೀ ನಾರಾ ಯಣಗುರು ಬಿಲ್ಲವ ಸಮಾಜ ಸೇವಾ ಸಂಘ, ಭಟ್ಕಳದ ಕೊಂಕಣಿ ಖಾರ್ವಿ ಸಮಾಜ, ಮೊಗವೀರ ಮತ್ತು ಹರಿಕಾಂತ ಸಮಾಜ, ದೇವಾಡಿಗ ಸಂಘ, ಪಟ್ಟಣ ಪಂಚಾಯಿತಿ.ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಮೆರ ವಣಿಗೆಯಲ್ಲಿ ಬಂದು ಮಠಕ್ಕೆ ಭಕ್ತಿ ಪೂರ್ವಕವಾಗಿ ಹೊರೆಕಾಣಿಕೆ ಸಮರ್ಪಿಸಿದರು.

ರಸ್ತೆಗಳ ಇಕ್ಕೆಲೆಗಳನ್ನು ಮಾವಿನ ತೋರಣ, ಬಾಳೆಗಿಡಗಳ ಶೃಂ ಗಾರ, ವಿದ್ಯುತ್‌್ ದೀಪಗಳಿಂದ ಅಲಂ ಕಾರ ಮಾಡಲಾಗಿತ್ತು. ಬೀದಿಯಲ್ಲಿ ಬಿಡಿಸಿದ ರಂಗವಲ್ಲಿ ಚಿತ್ತಾರಗಳು ಕಣ್ಮನ ಸೆಳೆಯಿತು. ವಿಧುಶೇಖರ ಸ್ವಾಮೀಜಿ ಹೊರೆಕಾಣಿಕೆ ಸಲ್ಲಿಸಿದ ಶಿಷ್ಯವೃಂದ ದವರನ್ನು ಆರ್ಶೀವದಿಸಿದರು. ದಕ್ಷಿಣಕನ್ನಡ, ಭಟ್ಕಳ, ಮಂಗ ಳೂರು, ಉತ್ತರಕನ್ನಡ, ಕುಂದಾಪುರದಿಂದ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.