ADVERTISEMENT

‘ಶಿವ ದೀಕ್ಷೆ ಪಡೆಯಲು ಜಾತಿ, ಧರ್ಮದ ಹಂಗಿಲ್ಲ’

ಕೋಟೆ ಮಾರಿಕಾಂಬ ದೇವಮಂದಿರದಲ್ಲಿ ನಡೆದ ವರ್ಧಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 7:23 IST
Last Updated 25 ಮಾರ್ಚ್ 2017, 7:23 IST

ನರಸಿಂಹರಾಜಪುರ: ಶಿವ ದೀಕ್ಷೆ ಪಡೆ ಯಲು ಜಾತಿ,ಮತ,ಧರ್ಮ,ಆಹಾರದ ಹಂಗಿಲ್ಲ ಎಂದು ಹರಿಹರಪುರ ಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ಪತಿ ಸ್ವಾಮೀಜಿ ನುಡಿದರು.

ಇಲ್ಲಿನ ಪ್ರವಾಸಿ ಮಂದಿರದ ಸಮೀಪವಿರುವ ಕೋಟೆ ಮಾರಿಕಾಂಬ ದೇವಮಂದಿರದ ಪ್ರಥಮ ವಾರ್ಷಿಕ ವರ್ಧಂತ್ಯುತ್ಸವದ ಅಂಗವಾಗಿ ನಡೆದ ಆಶೀರ್ವಚನ ಮತ್ತು ಶಿವದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯನ ಹೃದಯ ಶುದ್ಧಿಯಾದರೆ ಮನುಷ್ಯನಲ್ಲಿರುವ ಪಶುತ್ವ ದೂರವಾಗಿ ಮಾನವತ್ವವಿಕಾಸಗೊಳ್ಳುತ್ತದೆ. ಪ್ರತಿಯೊ ಬ್ಬರು ಒಳ್ಳೆಯ ಮಾತು, ಚಿಂತನೆ ಮಾಡಿ ದರೆ ಅಮ್ಮನವರ ಅನುಗ್ರಹ ಪ್ರಾಪ್ತ ವಾಗುತ್ತದೆ ಎಂದರು.

ನೂತನವಾಗಿ ಅಸ್ತಿತ್ವಕ್ಕೆ ಬಂದ ಮಾರಿಕಾಂಬಾ ಮಹಿಳಾ ಸ್ತ್ರೀ ಶಕ್ತಿ ಸೇವಾ ಸಂಘ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್, ಹಿಂದೆ ನರಸಿಂಹರಾ ಜಪುರ ಪಟ್ಟಣಕ್ಕೆ ಶೃಂಗೇರಿ ಶ್ರೀಗಳ ಶಾಪವಿತ್ತು ಎನ್ನಲಾಗಿತ್ತು.

ನಂತರದ ದಿನಗಳಲ್ಲಿ ಶ್ರೀಗಳು ಪಟ್ಟಣಕ್ಕೆ ಭೇಟಿ ನೀಡಿದ ತರುವಾಯ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಹರಿಹರಪುರದ ಶ್ರೀಗಳು ಉತ್ತಮ ಚಿಂತನೆಯಿಂದ ಆಹಾರ ಪದ್ಧತಿ ಬೇರೆಯಾದರೂ ಎಲ್ಲರಿಗೂ ಶಿವದೀಕ್ಷೆ ನೀಡಿ ಸಮಾಜದಲ್ಲಿ ಉತ್ತಮ ಪದ್ದತಿ ಹಾಕಿಕೊಟ್ಟಿದ್ದಾರೆ. ಹಿಂದೆ ಇಲ್ಲಿ ಮಾರಿಕಾಂಬ ಗದ್ದುಗೆ ಮಾತ್ರ ಇತ್ತು. ಪ್ರಸ್ತುತ ದೇವಮಂದಿರವಾಗಿ ಬೆಳವಣಿಗೆ ಹೊಂದಿದೆ ಎಂದರು.

ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ಹರಿಹರಪುರ ಮಠದ ಸ್ವಾಮೀಜಿ ಅವರು ಆಧುನಿಕ ಬಸವಣ್ಣರಿದ್ದಂತೆ. ಇವರಿಂದ ಮಠ ದಲ್ಲಿ ಹಲವು ಬದಲಾವಣೆಗಳಾಗುತ್ತಿವೆ .ಶ್ರೀಗಳ ಪರಿಶ್ರಮದಿಂದ ಲಕ್ಷ್ಮೀ ನರಸಿಂಹ ದೇವಸ್ಥಾನ ಕಟ್ಟಲಾಗುತ್ತಿದೆ.108 ಸಾಲಿ ಗ್ರಾಮಕ್ಕೆ  ಪೂಜೆ ಮಾಡಲಾಗುತ್ತಿದೆ ಎಂದರು.

ಕೋಟೆ ಮಾರಿಕಾಂಬ ದೇವ ಮಂದಿರ ಸಮಿತಿ ಅಧ್ಯಕ್ಷ ಕೆ.ವಿ.ವಸಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ರಾಜಶೇಖರ್,ಮಾಜಿ ಅಧ್ಯಕ್ಷೆ ಲೇಖಾವಸಂತ್,ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಕೆ.ಪಿ.ಸುರೇಶ್‌ ಕುಮಾರ್ ಇದ್ದರು.

ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ಷೇತ್ರದ ನಿರ್ದೇಶಕ ದಿನೇಶ್, ಬಸವ ಕೇಂದ್ರದ ಶಾಂತರಾಜ್ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.