ADVERTISEMENT

ಸೋಲಾರ್ ಆಧಾರಿತ ಕೊಳವೆಬಾವಿ

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಸ್.ಸುರೇಶ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:55 IST
Last Updated 18 ಏಪ್ರಿಲ್ 2017, 6:55 IST
ಚಿಕ್ಕಮಗಳೂರು: ‘ವನ್ಯಜೀವಿ ಪ್ರದೇ ಶಗಳನ್ನು ಕೇಂದ್ರೀಕರಿಸಿ ಸೋಲಾರ್ ಆಧಾರಿತ ಬೋರ್‌ವೆಲ್ ಕೊರೆಯಲು ಸರ್ಕಾರ ನಿರ್ದೇಶನ ನೀಡಿದೆ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಆರ್.ಎಸ್.ಸುರೇಶ್ ತಿಳಿಸಿದರು.
 
ಕಡೂರು ತಾಲ್ಲೂಕಿನ ಅಯ್ಯನ ಕೆರೆಯಲ್ಲಿ ಸೋಮವಾರ ವನ ಮಹೋ ತ್ಸವಕ್ಕೆ ಚಾಲನೆ ನೀಡಿ ಅವರು ಮಾತ ನಾಡಿ, ‘ಸೋಲಾರ್ ಪಂಪ್, ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ಸ್ವಯಂ ಚಾಲನೆ ನೀರಿನ ವ್ಯವಸ್ಥೆ ಮಾಡಲಿದ್ದು, ಈಗಾಗಲೇ ನಾಗರಹೊಳೆ, ಬಂಡೀಪುರ ದಲ್ಲಿ ಈ ಕಾರ್ಯ ಯಶಸ್ವಿಯಾಗಿದೆ. ರಾಜ್ಯದಾದ್ಯಂತ ಈ ಯೋಜನಯೆನ್ನು ಅಳವಡಿಸಲು ಚಿಂತಸಿಲಾಗಿದೆ’ ಎಂದರು.
 
‘ಈ ಬಾರಿ ಕಾಳ್ಗಿಚ್ಚಿನಿಂದಾಗಿ ರಾಜ್ಯದಲ್ಲಿ  ದೊಡ್ಡ ವೃಕ್ಷಗಳಿರುವ 300 ಹೆಕ್ಟೇರ್‌ನಷ್ಟು ದಟ್ಟಾರಣ್ಯ ಪ್ರದೇಶ ನಾಶವಾಗಿದ್ದು, ಉಳಿದಂತೆ ಗಿಡ ಗಂಟಿಗಳು ಹೆಚ್ಚಾಗಿರುವ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ಕಪ್ಪತ ಗುಡ್ಡ ದಲ್ಲಿ ಸುಮಾರು 30 ಹೆಕ್ಟೇರ್‌, ಪಣಜೂರು ಅರಣ್ಯದಲ್ಲಿ 8 ಚದರ ಕಿಮೀ ಅರಣ್ಯ ಬೆಂಕಿಗೆ ಆಹುತಿಯಾಗಿದ್ದು, ನಾಗರಹೊಳೆ ಭಾಗದಲ್ಲಿ ಅಲ್ಪ ಪ್ರಮಾ ಣದ ಅರಣ್ಯ ನಾಶವಾಗಿದೆ’ ಎಂದರು.
 
ಮುಂದಿನವಾರ ನಡೆಯಲಿರುವ ಕಾಳ್ಗಿಚ್ಚು ನಿಯಂತ್ರಣ ಕುರಿತ ಸಭೆಯಲ್ಲಿ ಒಟ್ಟು ಹಾನಿಯ ಬಗ್ಗೆ ಪ್ರಸ್ತಾಪ ಮಾಡ ಲಿದ್ದು, ಇದನ್ನು ತಡೆಯುವ ಬಗ್ಗೆ ಇಲಾಖೆ ಇನ್ನಷ್ಟು ಬಿಗಿ ಕ್ರಮ ಅನುಸರಿಸುವ ಬಗ್ಗೆ ಚರ್ಚಿಸಲಾಗುತ್ತಿದೆ’ ಎಂದರು. 
 
ಕಾಳ್ಗಿಚ್ಚು ತಡೆಗೆ ಇಲಾಖೆಯಿಂದಲೇ ಅಗ್ನಿಶಾಮಕ ವಾಹನ ಬಳಸಲು ಯೋಜನೆ ರೂಪಿಸಿದ್ದು,  ಸುಟ್ಟು ಹೋಗಿರುವ ಅರಣ್ಯ ಪ್ರದೇಶ ಮತ್ತೆ ಮಳೆ ಬಂದರೆ ಚಿಗುರೊಡೆದು ಹಸಿರಿನ ಸ್ಥಿತಿಗೆ ಬರಲಿದೆ’ ಎಂದರು. ಬಂಡಿಪುರದ ಮಾರಿಗುಡಿ ವಲಯ ದಲ್ಲಿ ಬೆಂಕಿಗೆ ಸಿಲುಕಿ ಮೃತಪಟ್ಟ ವಲಯ ಅರಣ್ಯಾಧಿಕಾರಿ ಕುಟುಂಬಕ್ಕೆ ₹25ಲಕ್ಷ ಪರಿಹಾರ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.