ADVERTISEMENT

‘ಸ್ತ್ರೀವಾದಿ ಚಳವಳಿ ಪ್ರತಿಪಾದಕಿ ಅಕ್ಕಮಹಾದೇವಿ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:16 IST
Last Updated 19 ಜನವರಿ 2017, 6:16 IST
‘ಸ್ತ್ರೀವಾದಿ ಚಳವಳಿ ಪ್ರತಿಪಾದಕಿ ಅಕ್ಕಮಹಾದೇವಿ’
‘ಸ್ತ್ರೀವಾದಿ ಚಳವಳಿ ಪ್ರತಿಪಾದಕಿ ಅಕ್ಕಮಹಾದೇವಿ’   

ಚಿಕ್ಕಮಗಳೂರು: ‘ಅಕ್ಕಮಹಾದೇವಿ ಸ್ತ್ರೀ ವಾದಿ ಚಳವಳಿ ಪ್ರತಿಪಾದಕಿ. ಕನ್ನಡದ ಮೊದಲ ಕವಯತ್ರಿ. ಮಹಿಳೆಯರು ಸ್ವಾಭಿಮಾನದ ಪ್ರತೀಕ’ಎಂದು ಸಕಲೇಶ ಪುರ ವುಮೆನ್ಸ್ ಕಾಫಿ ಪ್ರಮೋಷನ್ ಕೌನ್ಸಿಲ್‌ನ ಸಹ ಕಾರ್ಯದರ್ಶಿ ನಂದಿತಾ ಧರ್ಮ ರಾಜ್ ತಿಳಿಸಿದರು.

ನಗರದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘ, ಶರಣೆ ಕೇತಲಾ ದೇವಿ, ಜಗದ್ಗುರು ರೇಣುಕಾಚಾರ್ಯ ಸಮು ದಾಯ ಭವನದಲ್ಲಿ ಇತ್ತೀಚೆಗೆ ಆಯೋ ಜಿಸಿದ್ದ ಬನದ ಹುಣ್ಣಿಮೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಕ್ಕಮಹಾದೇವಿ ಹೆಸರಲ್ಲಿ ಒಂದು ರೀತಿ ‘ಕಂಪನ’ವಿದೆ. ಆಕೆಯ ವಿಚಾರ ಧಾರೆ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿ. ಮಹಾನ್ ಸಾಧಕಿಯ ಹೆಸರಲ್ಲಿ ಪ್ರತಿ ತಿಂಗಳೂ ನೂರಾರು ಮಹಿಳೆಯರಿಂದ ಆಕೆಯ ವಿಚಾರ ವಿನಿಮಯ ಮಾಡಿ ಕೊಳ್ಳುತ್ತಿರುವುದು ಗಮನಾರ್ಹ. ಹೊಸ ಪರಿಚಯ, ಹೊಸ ವಿಷಯಗಳು, ಹೊಸ ಜ್ಞಾನ ಹೊಮ್ಮಿ ಮಹಿಳೆಯರಲ್ಲಿ ಆತ್ಮವಿ ಶ್ವಾಸ ಹೆಚ್ಚಿಸುತ್ತದೆ. ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಬೆಳವಣಿಗೆಗೆ ಉತ್ತಮ ವೇದಿಕೆ ಎಂದರು. 

ಮಲೆನಾಡು ಕಾಫಿ ತವರು. ಇಲ್ಲಿಯ ಕಾಫಿ ವಿಶೇಷ ಹಾಗೂ ಉತ್ಕೃಷ್ಟ ಸ್ಥಾನ ವಿದೆ. ಮಹಿಳೆಯರು ಕಾಫಿ ಬೆಳವಣಿಗೆಯ ಭಾಗ. ಕಾಫಿ ಕಂಪನ್ನು ಪಸರಿಸಿ ಕಾಫಿ ಬಳಕೆ ಪ್ರಮಾಣ ಹೆಚ್ಚಿಸಿ ಜನಪ್ರಿಯ ಗೊಳಿಸಿ ಮಲೆನಾಡಿಗರ ಬದುಕನ್ನು ಹಸನುಗೊಳಿಸಬಹುದು ಎಂದರು.
 
ಸಕಲೇಶಪುರದಲ್ಲಿ ಸಮಾನ ಮನಸ್ಕ ಮಹಿಳೆಯರು ಸೇರಿ ಕಾಫಿ ಪ್ರಮೋಷನ್‌ ಕೌನ್ಸಿಲ್ ಪ್ರಾರಂಭಿಸಲಾಗಿದೆ. ಸುಮಾರು 15 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಕಾಫಿ ಬಳಕೆ ಪ್ರಯೋಜನ ಪ್ರಚುರಪಡಿಸುವ ಜತೆಗೆ ಕಾಫಿ ತಯಾರಿಕೆ ವಿಧಾನಗಳ ಪ್ರಾತ್ಯಕ್ಷಿತೆ ಬಗ್ಗೆ ಅರಿವು ಮೂಡಿಸ ಲಾಗುತ್ತಿದೆ ಎಂದರು.
 
ಇತ್ತೀಚಿನ ದಿನಗಳಲ್ಲಿ ‘ಗ್ರೀನ್‌ ಕಾಫಿ’ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಇದು ಬೊಜ್ಜು ಹಾಗೂ ಸಕ್ಕರೆ ಕಾಯಿಲೆ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಆರೋಗ್ಯಕ್ಕೆ ಪೂರಕ ಹಲವು ಅಂಶಗಳನ್ನು ಹೊಂದಿದೆ.   ‘ಕಾಫಿ ಕುಡಿಯಿರಿ, ನಿಸರ್ಗ ರಕ್ಷಿಸಿ’ ಎಂಬುದು ನಮ್ಮ ಧ್ಯೇಯ ವಾಕ್ಯ ವಾಗಿ ಪ್ರಚಾರ ಮಾಡಬೇಕಿದೆ  ಎಂದರು. 

ಅಕ್ಕಮಹಾದೇವಿ ಮಹಿಳಾ ಸಂಘದ ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್ ಮಾತನಾಡಿ, ಸಮಾಜದ ಋಣ ತೀರಿ ಸಲು ಸಂಘ -ಸಂಸ್ಥೆಗಳ ಮೂಲಕ ಕೈಲಾದ ಸೇವಾ ಕಾರ್ಯ ನಿರ್ವಹಿಸಬ ಹುದು. ಒಗ್ಗಟ್ಟಿನಲ್ಲಿ ಬಲವಿದೆ. ಮಹಿಳೆ ಯರು ಸಂಘಟಿತರಾದರೆ ಏನನ್ನೂ ಸಾಧಿಸಬಹುದು ಎಂದರು. 
ಶರಣೆ ಕೇತಲಾದೇವಿ ತಂಡದ ಮುಖ್ಯಸ್ಥೆ ಭವಾನಿ ವಿಜಯಾನಂದ ಮಾತನಾಡಿದರು. 

ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಸೋಮಶೇಖರ್, ನಾಗರತ್ನ ಚಂದ್ರಶೇಖರ್, ಮಂಜುಳಾ ಮಹೇಶ್, ಸ್ವಪ್ನಾ ಬಸವರಾಜ್, ಶೈಲಾ ಬಸವರಾಜ, ಪದಾಧಿಕಾರಿಗಳಾದ ಯಮುನಾ ಸಿ.ಶೆಟ್ಟಿ, ಹೇಮಲತಾ, ಭಾರತಿ ಶಿವರುದ್ರಪ್ಪ, ರೇಖಾ ಉಮಾಶಂಕರ್, ಅಂಬಿಕಮ್ಮ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.