ADVERTISEMENT

ಬಿರುಸಿನ ಮಳೆಗೆ ಕೊಚ್ಚಿಹೋದ ಎಚ್.ರೊಪ್ಪ ರಸ್ತೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 9:07 IST
Last Updated 12 ಸೆಪ್ಟೆಂಬರ್ 2017, 9:07 IST
ಹೊಸದುರ್ಗ ತಾಲ್ಲೂಕು ಎಚ್‌.ರೊಪ್ಪಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಶನಿವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ಕೊಚ್ಚಿಹೋಗಿರುವುದು.
ಹೊಸದುರ್ಗ ತಾಲ್ಲೂಕು ಎಚ್‌.ರೊಪ್ಪಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಶನಿವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ಕೊಚ್ಚಿಹೋಗಿರುವುದು.   

ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಹೋಬಳಿ ದೊಡ್ಡಘಟ್ಟದಿಂದ ಎಚ್‌.ರೊಪ್ಪಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಿರುಸಿನ ಮಳೆಗೆ ಕೊಚ್ಚಿಹೋಗಿದೆ. ರಸ್ತೆ ಬದಿಯಲ್ಲಿ ಇರುವ ಜಮೀನಿನಲ್ಲಿ ನಡೆದಿರುವ ಅಕ್ರಮ ಮರಳುಗಾರಿಕೆ ಇದಕ್ಕೆ ಕಾರಣವಾಗಿದ್ದು, ಸಂಪರ್ಕಕ್ಕೆ ತೀವ್ರತೊಂದರೆ ಆಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮನೆಗೆ ಹಾನಿ: ಶನಿವಾರ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಶ್ರೀರಾಂಪುರ ಹೋಬಳಿ ಅರೇನಹಳ್ಳಿಯ ತಿಮ್ಮಪ್ಪ ಅವರ ಮನೆಗೆ ಭಾಗಶಃ ಹಾನಿಯಾಗಿದೆ ಎಂದು ಕಂದಾಯ ಅಧಿಕಾರಿ ಪಾಲಾಕ್ಷಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT