ADVERTISEMENT

ಮುಖ್ಯವಾಹಿನಿಗೆ ಬರಲು ಸಲಹೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:20 IST
Last Updated 7 ನವೆಂಬರ್ 2017, 6:20 IST

ಮೊಳಕಾಲ್ಮುರು: ‘ಅನಾದಿ ಕಾಲದಿಂದಲೂ ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಕುರುಬ ಜನಾಂಗ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಶಾಸಕ ಎಸ್‌. ತಿಪ್ಪೇಸ್ವಾಮಿ ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಕನಕ ಜಯಂತಿ ಉದ್ಘಾಟಿಸಿದ ಅವರು, ‘ಕನಕದಾಸರು ಕನ್ನಡನಾಡು ಕಂಡ ಮಹಾನ್‌ ದಾಸ ಪರಂಪರೆ ಸಾಹಿತಿ. ಸಮಾಜದ ಅಂಕು–ಡೊಂಕುಗಳನ್ನು ತಿದ್ದಲು ಅವರ ಸಾಹಿತ್ಯ ಪೂರಕವಾಗಿದ್ದು, ಯುವ ಸಮೂಹ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಕೊಟ್ರೇಶ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ. ಪ್ರಕಾಶ್‌, ಕಾಮಸಮುದ್ರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್‌.ಟಿ. ಚಂದ್ರಣ್ಣ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ದಡಗೂರು ಮಂಜುನಾಥ್‌, ಸದಸ್ಯರಾದ ರೇಷ್ಮೆ ವೀರೇಶ್‌, ನರೇಂದ್ರಬಾಬು, ಇಒ ಸಿ.ಎನ್‌. ಚಂದ್ರಶೇಖರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಪಟೇಲ್‌ ಪಾಪನಾಯಕ, ಮಾರನಾಯಕ, ಜಗಳೂರಯ್ಯ, ಕುರುಬ ಸಮಾಜ ತಾಲ್ಲೂಕು ಅಧ್ಯಕ್ಷ ತಿಮ್ಮಲಾಪುರ ಮೂರ್ತಿ, ಹಾಲುಮತ ಅಧ್ಯಕ್ಷ ಜಗದೀಶ್‌, ಮುಖಂಡರಾದ ಸಣ್ಣಪೋತಪ್ಪ, ಭೂಮಿಕಾ ಅಂಜಿನಪ್ಪ, ನಾಗರಾಜ ಕಟ್ಟೆ ಉಪಸ್ಥಿತರಿದ್ದರು. ಶಿಕ್ಷಕ ದಯಾನಂದ್‌ ಸ್ವಾಗತಿಸಿದರು. ಮುಜಾಮಿಲ್‌ ನಿರೂಪಿಸಿದರು. ರಫೀ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.