ADVERTISEMENT

ರಂಗದಾಸೋಹ ನಾಳೆಯಿಂದ

ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ನಾಲ್ಕು ನಾಟಕಗಳ ಉತ್ಸವ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 5:35 IST
Last Updated 11 ಜನವರಿ 2017, 5:35 IST

ಹೊಳಲ್ಕೆರೆ: ತಾಲ್ಲೂಕಿನ ಮಲ್ಲಾಡಿ ಹಳ್ಳಿಯ ಅನಾಥ ಸೇವಾಶ್ರಮದ ಸೂರ್‌ದಾಸ್‌ಜೀ ರಂಗಮಂಟಪದಲ್ಲಿ ಜ.12ರಿಂದ 14ರವರೆಗೆ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವ ನಡೆಯಲಿದೆ.

ಸನ್ಯಾಸಿಯಾಗಿ ಬಂದು ಜೋಳಿಗೆ ಹಿಡಿದು, ಭಿಕ್ಷೆ ಬೇಡಿ ಅನಾಥ ಸೇವಾಶ್ರಮ ಕಟ್ಟಿ ಬೆಳೆಸಿದ ರಾಘವೇಂದ್ರ ಸ್ವಾಮೀಜಿ ಅವರು ತನ್ನನ್ನು ಹೆಮ್ಮೆಯಿಂದ ತಿರುಕ ಎಂದೇ ಕರೆದುಕೊಂಡರು. ಆಶ್ರಮದಲ್ಲಿ ಯೋಗ, ಆಯುರ್ವೇದ, ಧ್ಯಾನ, ರಂಗಭೂಮಿ ಚಟುವಟಿಕೆಗಳನ್ನು ಆರಂಭಿಸಿದ ಸ್ವಾಮೀಜಿ, ಸಾವಿರಾರು ಜನರಿಗೆ ಗುರುವಾಗಿ ಸೇವೆ ಸಲ್ಲಿಸಿದ್ದಾರೆ. ರಾಘವೇಂದ್ರ ಸ್ವಾಮೀಜಿ ಅವರ ಶಿಷ್ಯ ಸೂರ್‌ದಾಸ್‌  ಸ್ವಾಮೀಜಿ ಕೂಡ ಶ್ರಮದ ಬೆಳವಣಿಗೆಗೆ ಶ್ರಮಿಸಿದ್ದಾರೆ.

ಈ ಇಬ್ಬರು ಸ್ವಾಮೀಜಿಗಳ ನೆನಪಿಗಾಗಿ  ಶ್ರೀಗಳ ಪುಣ್ಯಾರಾಧನೆ ಹಾಗೂ ನಾಟಕೋತ್ಸವ ನಡೆಸಲಾಗುತ್ತದೆ. ಜ.12ರಂದು ಅನಾಥಸೇವಾಶ್ರಮದ ಅಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಶ್ರಮದ ವಿಶೇಷಾ ಧಿಕಾರಿ ಪ್ರೊ.ಟಿ.ಎಚ್. ಕೃಷ್ಣಮೂರ್ತಿ, ಪತ್ರಕರ್ತ ಗುಡಿಹಳ್ಳಿ ನಾಗರಾಜ್, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ಜಿಲ್ಲಾ ಪಂಚಾಯ್ತಿ ಸದಸ್ಯ ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಜಾತ ಧನಂಜಯ ನಾಯ್ಕ, ಸನ್ ಎಂಜಿನಿಯರಿಂಗ್ ಪ್ರಾಜೆಕ್ಟ್ ಮಾಲೀಕ ಎಚ್.ಸಿ.ಪ್ರಭಾಕರ್ ಭಾಗವಹಿಸುವರು. ಸಂಸದ ಬಿ.ಎನ್. ಚಂದ್ರಪ್ಪ ಅಧ್ಯಕ್ಷತೆ ವಹಿಸುವರು.

ಸಂಜೆ 7ಕ್ಕೆ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ರಚನೆಯ, ‘ಪರಮ ಪ್ರಸಾದಿ ಮಾದಾರ ಚೆನ್ನಯ್ಯ’ ನಾಟಕ ವನ್ನು ಜಮುರಾ ಕಲಾ ತಂಡದವರು ಅಭಿನಯಿಸುವರು. 13ರಂದು  ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಜಿ.ಶರಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಸರೋಜಾ ಕುಬೇರಪ್ಪ, ಅನಾಥ ಸೇವಾಶ್ರಮದ ವಿಶ್ವಸ್ಥ ಎಸ್.ಡಿ.ನಟರಾಜ್ ಭಾಗವಹಿ ಸುವರು. ಶಿಕ್ಷಣ ತಜ್ಞ ಮತ್ತು ಅನಾಥ ಸೇವಾಶ್ರಮದ ವಿಶ್ವಸ್ತರಾದ ಪ್ರೊ. ಕೆ.ಇ. ರಾಧಾಕೃಷ್ಣ ಅಧ್ಯಕ್ಷತೆ ವಹಿಸುವರು.

ಸಂಜೆ 4.30ಕ್ಕೆ ಪಂಡಿತ್ ತುಕಾರಾಂ ರಂಗ ದೋಳ್ ನೇತೃತ್ವದಲ್ಲಿ  ಶಿವ ಮೊಗ್ಗದ ಮಧುರ ಗಾನ ತಂಡ ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಡುವರು.
ಸಂಜೆ 7ಕ್ಕೆ ಬೆಳಗೆರೆ ಕೃಷ್ಣಶಾಸ್ತ್ರಿ ರಚನೆ, ಗಣೇಶಯ್ಯ ನಿರ್ದೇ ಶನದ ‘ಹಳ್ಳಿ ಚಿತ್ರ’ ನಾಟಕವನ್ನು  ಜಮುರಾ ಕಲಾ ತಂಡದವರು ಅಭಿನಯಿಸುವರು.

14ರಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಸಾಹಿತಿ ಪ್ರೊ.ಸಿ.ಶಿವಲಿಂಗಪ್ಪ,  ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾರದಾ ಶಿವಾನಂದ ಭಾಗವಹಿಸುವರು.

ಕವಿ ಚಂದ್ರಶೇಖರ್ ತಾಳ್ಯ ಅಧ್ಯಕ್ಷತೆ ವಹಿಸುವರು. ಸಂಜೆ 6.30ಕ್ಕೆ ಕುವೆಂಪು ರಚನೆ, ಸುರೇಶ್ ಕೇಸಾಪುರ ಸಂಗೀತ ನಿರ್ದೇಶನ ಮಾಡಿರುವ ವೈ.ಡಿ. ಬಾದಾಮಿ ಮತ್ತು ಮಂಜುಳಾ ನಿರ್ದೇಶನದ ‘ಜಲಗಾರ’  ಸಂಜೆ 8ಕ್ಕೆ ಬೇಂದ್ರೆ ರಚನೆ, ನಿರ್ದೇಶನದ ‘ಜಾತ್ರೆ’ ನಾಟಕಗಳನ್ನು ತಿರುಕರಂಗ ಸಾಂಸ್ಕೃತಿಕ ವೇದಿಕೆ ತಂಡದ ಅಭಿನಯಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.