ADVERTISEMENT

ವಿವಿಧೆಡೆ ಕೌಶಲ ತರಬೇತಿ ನೋಂದಣಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 5:36 IST
Last Updated 16 ಮೇ 2017, 5:36 IST

ಚಿತ್ರದುರ್ಗ: ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ವೃತ್ತಿ ಕೌಶಲ್ಯ ತರಬೇತಿ ಶಿಬಿರ ಉದ್ಘಾಟನೆ ಸೋಮವಾರ ನಡೆಯಿತು. ಚಳ್ಳಕೆರೆ ಯುವಕ, ಯುವತಿಯರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೃತ್ತಿ ಕೌಶಲ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ತಾಲ್ಲೂಕು ಪಂಚಾಯ್ತಿ ಇಒ ಬಿ.ಎಲ್‌.ಈಶ್ವರ ಪ್ರಸಾದ್‌ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜಿ.ವೀರೇಶ್‌, ಉಪಾಧ್ಯಕ್ಷೆ ಸುವರ್ಣಮ್ಮ ವೀರೇಂದ್ರಪ್ಪ, ಎಪಿಎಂಸಿ ಅಧ್ಯಕ್ಷ ರೆಡ್ಡಿಹಳ್ಳಿ ಶಿವಣ್ಣ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಕಾಲುವೆಹಳ್ಳಿ ಶ್ರೀನಿವಾಸ್‌, ರಂಜಿತಾ, ತಹಶೀಲ್ದಾರ್‌ ಟಿ.ಸಿ. ಕಾಂತರಾಜ, ನಗರಸಭೆ ಪೌರಾಯುಕ್ತ ಜಿ.ಟಿ.ಹನುಮಂತರಾಜು, ಉಮಾ, ತಿಪ್ಪಕ್ಕ, ರಾಮರೆಡ್ಡಿ, ಗಿರಿಯಪ್ಪ, ಟಿ.ಭದ್ರಿ, ಮಂಜುನಾಥ್‌, ಸತೀಶ್‌, ಪಿಡಿಒ ಓಬಯ್ಯ, ಶಾರದಮ್ಮ ಇದ್ದರು.

ADVERTISEMENT

ಹೊಸದುರ್ಗ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರುದ್ಯೋಗ ಸಮಸ್ಯೆ ನಿವಾರಿಸಲು ಪೂರಕವಾದ ಕೌಶಲ ತರಬೇತಿ ನೀಡಲು ರಾಜ್ಯದಾದ್ಯಂತ ಕೌಶಲ ಅಭಿವೃದ್ಧಿ ಅಭಿಯಾನದ ನೋಂದಣಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಗ್ರಾಮ ಲೆಕ್ಕಿಗ, ಪಿಡಿಒ, ಕಂದಾಯ ಅಧಿಕಾರಿಗಳು ವ್ಯಾಪಕ ಪ್ರಚಾರ ಮಾಡಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೌಶಲ ಅಭಿವೃದ್ಧಿ ಅಭಿಯಾನದ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಹಶೀಲ್ದಾರ್‌ ಮಲ್ಲಿಕಾರ್ಜುನ್‌, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹಾಂತೇಶ್‌, ಸಮಾಜ ಕಲ್ಯಾಣ ಅಧಿಕಾರಿ ವಿ.ಬಡಿಗೇರ್‌ ಹಾಜರಿದ್ದರು.

ಮೊಳಕಾಲ್ಮುರು
ಸರ್ಕಾರ ನೀಡುವ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಸದುಪ ಯೋಗ ಮಾಡಿಕೊಳ್ಳುವ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳಲು ಯುವ ಜನಾಂಗ ಮುಂದಾಗಬೇಕು ಎಂದು ಶಾಸಕ ಎಸ್‌. ತಿಪ್ಪೇಸ್ವಾಮಿ ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ ಸಂಯುಕ್ತವಾಗಿ ಸೋಮವಾರ ‘ಕೌಶಲ ಮಿಷನ್‌ನಿಂದ ತರಬೇತಿಗಾಗಿ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಹಶೀಲ್ದಾರ್‌ ಕೊಟ್ರೇಶ್‌್ ಮಾಹಿತಿ ನೀಡಿದರು.  ಜಿಲ್ಲಾ ಪಂಚಾಯ್ತಿ ಸದಸ್ಯ ಮುಂಡ್ರಗಿ ನಾಗರಾಜ್‌್, ಜಿಲ್ಲಾ ಪಂಚಾಯ್ತಿ ಕೆಡಿಪಿ ಸದಸ್ಯ ಮೊಗಲಹಳ್ಳಿ ಜಯಣ್ಣ, ಮಾಜಿ ಸದಸ್ಯ ಮಾರನಾಯಕ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಬಸಮ್ಮ, ಸದಸ್ಯ ರಾದ ಲಕ್ಷ್ಮೀ, ರಮೇಶ್‌ಬಾಬು, ಇಒ ಚಂದ್ರಶೇಖರ್‌, ಜಗಳೂರಯ್ಯ, ಲೋಕೇಶ್‌ ಪಲ್ಲವಿ, ಅಧಿಕಾರಿಗಳು ಇದ್ದರು. ಲತೀಫ್‌ಸಾಬ್‌ ಸ್ವಾಗತಿಸಿದರು, ಶಾಂತವೀರಣ್ಣ ನಿರೂಪಿಸಿದರು.

ಹಿರಿಯೂರು
ಸ್ವಾತಂತ್ರ್ಯದ ಆರಂಭದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದವು. ಬೇಕಿದ್ದ ವಿದ್ಯಾವಂತರು ಇರಲಿಲ್ಲ. ಈಗ ವಿದ್ಯಾವಂತರ ಸಂಖ್ಯೆ ಸಾಕಷ್ಟಿದೆ. ಉದ್ಯೋಗಗಳು ಸಿಗುತ್ತಿಲ್ಲ. ನಿರುದ್ಯೋಗಿ ಯುವಕರನ್ನು ಕೌಶಲಾಭಿವೃದ್ಧಿ ಮೂಲಕ ಸ್ವಾವಲಂಬಿಗಳನ್ನಾಗಿಸುವ ಯೋಜನೆ ಯನ್ನು ಜಾರಿಗೆ ತರಲಾಗಿದೆ ಎಂದು ಶಾಸಕ ಡಿ. ಸುಧಾಕರ್ ಹೇಳಿದರು.
ನಗರದ ಗುರುಭವನದಲ್ಲಿ ಏರ್ಪಡಿಸಿದ್ದ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಶಶಿಕಲಾ ಸುರೇಶ್ಬಾಬು, ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಶಂಕರ ಮೂರ್ತಿ ಮಾತನಾಡಿದರು. ತಹಶೀ ಲ್ದಾರ್ ಜೆ.ಸಿ.ವೆಂಕಟೇಶಯ್ಯ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶ್ರೀಧರ್ ಬಾರಿಕೇರ್, ಸಮಾಜ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ, ನಗರಸಭೆ ಸದಸ್ಯ ಇ.ಮಂಜುನಾಥ್, ಪುರುಷೋತ್ತಮ, ರವಿಚಂದ್ರ, ಮಹಮ್ಮದ್ ಅಬ್ಬಾಸ್, ಪಿ.ಎಸ್.ಸಾದತ್ ಉಲ್ಲಾ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಚಂದ್ರಕಲಾ, ಕೆ. ಓಂಕಾರಪ್ಪ, ಅಪ್ಪಾಜಿ, ಖಾದಿರಮೇಶ್, ಕಂದಿಕೆರೆ ಸುರೇಶ್ ಬಾಬು, ಹನುಮಂತರಾಯಪ್ಪ, ಕರಿಯಪ್ಪ, ವಿನೋದ, ಕಲ್ಪನಾ, ಲಕ್ಷ್ಮೀದೇವಮ್ಮ ಉಪಸ್ಥಿತರಿದ್ದರು.

ಜನಪ್ರತಿನಿಧಿಗಳಿಲ್ಲ!
ಮೊಳಕಾಲ್ಮುರು: ಸೋಮವಾರ ನಡೆದ ಕೌಶಲ ತರಬೇತಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ 4 ಜಿಲ್ಲಾ ಪಂಚಾಯ್ತಿ ಸದಸ್ಯರ ಪೈಕಿ ಒಬ್ಬರು, 12 ತಾಲ್ಲೂಕು ಪಂಚಾಯ್ತಿ ಸದಸ್ಯರ ಪೈಕಿ 4 ಜನ ಅಷ್ಟೇ ಬಂದಿದ್ದರು. ಪಟ್ಟಣ ಪಂಚಾಯ್ತಿ 15 ಸದಸ್ಯರ ಪೈಕಿ ಯಾರೊಬ್ಬರೂ ಬಂದಿರಲಿಲ್ಲ.

16 ಗ್ರಾಮಪಂಚಾಯ್ತಿ ಪೈಕಿ ಹಿರೇಕೆರೆಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲೋಕೇಶ್‌್ ಮಾತ್ರ ಭಾಗವಹಿಸಿದ್ದರು. ಕಾರ್ಮಿಕ ಇಲಾಖೆ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೇ ವೇದಿಕೆಯಲ್ಲಿ ಕಾಣಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.