ADVERTISEMENT

‘ಸಿ ಫೋರ್ ಸಂಸ್ಥೆಯ ಸಮೀಕ್ಷೆ ನಿಜವಾಗಿದ್ದರೆ ಚುನಾವಣೆ ಎದುರಿಸಿ’

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 8:38 IST
Last Updated 23 ಆಗಸ್ಟ್ 2017, 8:38 IST

ಹಿರಿಯೂರು: ‘ಸಿ ಫೋರ್ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಕಾಂಗ್ರೆಸ್ ಪಕ್ಷ ನಡೆಸಿರುವ ಸಮೀಕ್ಷೆ ಅಲ್ಲ ಎನ್ನುವುದಾದರೆ ಚುನಾವಣೆ ಎದುರಿಸಿ’ ಎಂದು ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಸವಾಲು ಹಾಕಿದರು.

ನಗರದಲ್ಲಿ ಮಂಗಳವಾರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ತಾಲ್ಲೂಕು ಕಚೇರಿಗೆ ಬಂದಾಗ ಅವರು ಮಾತನಾಡಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದದ್ದು ಒಂದು ಆಕಸ್ಮಿಕ. ಸರ್ಕಾರ ತನ್ನ ದುರಾಡಳಿತದ ಮೂಲಕ ಜನರ ವಿಶ್ವಾಸ ಕಳೆದುಕೊಂಡಿದೆ. ಇದನ್ನರಿತ ಸಿದ್ದರಾಮಯ್ಯ ನಾಲ್ಕು ವರ್ಷಗಳ ಸುದೀರ್ಘ ನಿದ್ದೆಯಿಂದ ಎದ್ದು ಮತ್ತೊಮ್ಮೆ ಅಧಿಕಾರ ಪಡೆಯಲು ಪ್ರತಿಪಕ್ಷವಾದ ಬಿಜೆಪಿ ಮೇಲೆ ಗದಾಪ್ರಹಾರ ಮಾಡಲು ಹೊರಟಿದ್ದಾರೆ’ ಎಂದು ದೂರಿದರು.
ಪಕ್ಷದ ವಿಭಾಗೀಯ ಸಹ ಪ್ರಭಾರ ಜಿ.ಎಂ.ಸುರೇಶ್, ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಸಿದ್ದೇಶ್ ಯಾದವ್ ಮಾತನಾಡಿದರು.

ADVERTISEMENT

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುರಳಿ, ಮಂಡಲ ಅಧ್ಯಕ್ಷ ಕೆ.ದ್ಯಾಮಣ್ಣ, ಬಿ.ಆರ್.ಮಂಜುನಾಥ್, ಕಾಂತರಾಜ್, ಚಿತ್ತಯ್ಯ, ಯಶವಂತರಾಜ್, ಕೇಶವಮೂರ್ತಿ, ತಿಪ್ಪೇಸ್ವಾಮಿ, ಗಂಗಾಧರ್, ಬಿ.ಕೆ.ತಿಪ್ಪೇಸ್ವಾಮಿ, ನಟರಾಜ್, ಮಂಜುಳಾ, ಲಕ್ಷ್ಮಿದೇವಿ, ಅಸ್ಗರ್ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.