ADVERTISEMENT

ಕೆಳಗೋಟೆ ಚನ್ನಕೇಶವ ಸ್ವಾಮಿಯ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 9:39 IST
Last Updated 2 ಫೆಬ್ರುವರಿ 2018, 9:39 IST

ಚಿತ್ರದುರ್ಗ: ಇಲ್ಲಿನ ಕೆಳಗೋಟೆಯ ಸಿ.ಕೆ.ಪುರದ ಚನ್ನಕೇಶವ ಸ್ವಾಮಿ ದೇಗುಲದಲ್ಲಿ ಬುಧವಾರ ಶ್ರೀದೇವಿ, ಭೂದೇವಿ ಸಹಿತ ಚನ್ನಕೇಶವ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಮಂಗಳವಾದ್ಯಗಳು ಮೊಳಗಿದವು. ದಾಸಯ್ಯಗಳು ಗಂಟೆ, ಜಾಗಟೆ, ಶಂಖಗಳನ್ನು ಮೊಳಗಿಸಿದರು.

ದೇಗುಲದಿಂದ ಪ್ರಾರಂಭವಾದ ಭವ್ಯ ಮೆರವಣಿಗೆ ಕೆಳಗೋಟೆ, ಕೆಎಸ್ಆರ್‌ಟಿಸಿ ಹಳೆ ಬಸ್ ಡಿಪೊ, ಅಂಬಾಭವಾನಿ ದೇಗುಲ ಮಾರ್ಗ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ನಂತರ ಪುನಾ ದೇಗುಲ ತಲುಪಿತು. ಈ ಸಂದರ್ಭದಲ್ಲಿ ಭಕ್ತರಿಗಾಗಿ ಪ್ರಸಾದ ವಿತರಿಸಲಾಯಿತು.

ಸಿ.ಕೆ.ಪುರ ಬಡಾವಣೆ, ಕೆಳಗೋಟೆ, ಆಕಾಶವಾಣಿ ಸುತ್ತಲಿನ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ಮೂರ್ತಿಯ ದರ್ಶನ ಪಡೆದರು. ಸಂಜೆ ಚನ್ನಕೇಶವ ಸ್ವಾಮಿಯ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಿತು. ತಾಲ್ಲೂಕು ಆಡಳಿತ ಸಿಬ್ಬಂದಿ, ಚನ್ನಕೇಶವ ಸ್ವಾಮಿ ದೇಗುಲದ ಸಂಚಾಲಕರು, ನಗರಸಭೆಯ ಸದಸ್ಯರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.