ADVERTISEMENT

‘ಕಂಬಳ, ನೇತ್ರಾವತಿ ನದಿ ಎರಡೂ ಉಳಿಯಬೇಕು’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:51 IST
Last Updated 8 ಫೆಬ್ರುವರಿ 2017, 6:51 IST

ಬಂಟ್ವಾಳ: ‘ಬಂಟ ಎಂದರೆ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿಯಾಗಿದ್ದು ಇಂ ಟರ್‌ನ್ಯಾಷನಲ್‌ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಕಾಳಜಿಯಂತೆ ಜಿಲ್ಲೆಯ ಜಾನಪದ ಕ್ರೀಡೆ ಕಂಬಳ ಮತ್ತು ಜೀವನದಿ ನೇತ್ರಾವತಿ ನದಿ ಉಳಿಸುವ ನಿಟ್ಟಿನಲ್ಲಿ ಕೂಡಾ ನಾವೆಲ್ಲರೂ ಒಟ್ಟಾಗಿ ಧ್ವನಿಗೂಡಿ ಸಬೇಕು’ ಎಂದು ಪುತ್ತೂರು ಶಾಸಕಿ ಟಿ.ಶಕುಂತಳಾ ಶೆಟ್ಟಿ ಹೇಳಿದರು.

ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀ ಪದ ಬಂಟ್ವಾಳದ ಬಂಟರ ಭವನದಲ್ಲಿ ಇಂಟರ್‌ನ್ಯಾಷನಲ್‌ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಮಂಗಳವಾರ ಏರ್ಪ ಡಿಸಿದ್ದ ಮೂರನೇ ವರ್ಷದ 'ಬಂಟ ಸಮಾಗಮ- 2017' ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ  ಅವರು ‘ಸದಾಶಯ’ ತ್ರೈಮಾಸಿಕ ವಿಶೇಷಾಂಕ ಬಿಡುಗಡೆ ಗೊಳಿಸಿ ಮಾತನಾಡಿ, ‘ನಾವು ಎಷ್ಟು ಎತ್ತ ರಕ್ಕೆ ಬೆಳೆದರೂ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ವಿವೇಕದಿಂದ ಕೆಲಸ ಮಾಡ ಬೇಕು’ ಎಂದರು. ಆರಂಭದಲ್ಲಿ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ‘ಬಂಟ ಸಮಾಗಮ- 2017’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿರಿಯ ಉದ್ಯಮಿ ಎ.ಜೆ. ಶೆಟ್ಟಿ, ಡಾ. ಭಾಸ್ಕರ ಶೆಟ್ಟಿ, ಡಾ. ಸರ್ವೋತ್ತಮ ಶೆಟ್ಟಿ ಅಬುಧಾಬಿ, ಪಾದೆ ಅಜಿತ್ ರೈ, ವಿಜ ಯನಾಥ ವಿಠಲ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ನಗ್ರಿ ರೋಹಿತ್ ಶೆಟ್ಟಿ, ಡಾ. ಎಂ. ಮೋಹನ ಆಳ್ವ ಮೂಡುಬಿದಿರೆ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿ ಗುತ್ತು ವಿವೇಕ್ ಶೆಟ್ಟಿ, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮತ್ತಿತರರು ಇದ್ದರು.

ಸಾಂಸ್ಕೃತಿಕ ವೈಭವ: ಬೋಳಂ ತೂರುಗುತ್ತು ಗಂಗಾಧರ ರೈ ವೇದಿಕೆ ಯಲ್ಲಿ ಮಿಸ್ಟರ್ ಬಂಟ್, ಮಿಸ್‌ ಬಂಟ್‌, ಬಂಟ್ಸ್ ಕಪಲ್ ಸ್ಪರ್ಧೆ ಸಹಿತ ಭೂತಾಳ ಪಾಂಡ್ಯ ವೈಭವ ತುಳು ರೂಪಕ, ಪಟ್ಲ ಸತೀಶ್ ಶೆಟ್ಟಿ ಹಿಮ್ಮೇಳದೊಂದಿಗೆ ರಕ್ಷಿತ್ ಶೆಟ್ಟಿ ಪಡ್ರೆ ನಿರ್ದೇಶಿಸಿದ ಡಾ. ವರ್ಷಾ ಶೆಟ್ಟಿ ಮತ್ತು ದೀಶಾ ಶೆಟ್ಟಿ ಅಭಿನಯದ ‘ನೆನಪಾದಳಾ ಶಕುಂತಳಾ’ ಯಕ್ಷ ನಾಟ್ಯ ಪ್ರದರ್ಶನ ನಡೆಯಿತು.

ಹಾಸ್ಯಲಹರಿ, ನೃತ್ಯ ಸಂಗೀತಗಳ ಸಿಂ ಚನ, ಬಂಟ ಪ್ರತಿಭೆಗಳ ಪ್ರದರ್ಶನ ಆಕ ರ್ಷಕವಾಗಿತ್ತು. ‘ಸದಾಶಯ’ ಸಂಪಾದಕ ಕದ್ರಿ ನವನೀತ್ ಶೆಟ್ಟಿ, ತೀರ್ಥಹಳ್ಳಿ ವಿಶ್ವ ನಾಥ ಶೆಟ್ಟಿ, ಯುವ ವಿಭಾಗ ಅಧ್ಯಕ್ಷ ದೇವಿಚರಣ್ ಶೆಟ್ಟಿ ಮಹಿಳಾ ವಿಭಾಗ ಅಧ್ಯಕ್ಷೆ ವಿಜಯಲಕ್ಷ್ಮೀ ಮತ್ತಿತರರು ಉಪ ಸ್ಥಿತರಿದ್ದರು.
ಮಾಜಿ ಸಚಿವ ಅಮರನಾಥ ಶೆಟ್ಟಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಪ್ರಾಸ್ತಾವಿಕ ಮಾತನಾಡಿದರು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.