ADVERTISEMENT

ಗದ್ದಲದ ನಡುವೆ ಮಿಗತೆ ಬಜೆಟ್ ಮಂಡನೆ

ಪುತ್ತೂರು: ವಿರೋಧ ಪಕ್ಷ ಬಿಜೆಪಿ ಆಕ್ಷೇಪ; ತೀವ್ರವಾದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 9:33 IST
Last Updated 10 ಮಾರ್ಚ್ 2017, 9:33 IST
ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ಗುರುವಾರ ವಿರೋಧ ಪಕ್ಷದ ಪ್ರತಿಭಟನೆ ನಡುವೆಯೂ ನಗರಸಭೆ ಬಜೆಟ್ ಮಂಡಿಸಿದರು.
ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ಗುರುವಾರ ವಿರೋಧ ಪಕ್ಷದ ಪ್ರತಿಭಟನೆ ನಡುವೆಯೂ ನಗರಸಭೆ ಬಜೆಟ್ ಮಂಡಿಸಿದರು.   

ಪುತ್ತೂರು; ನಗರಸಭೆಯಲ್ಲಿ ಬಹುಮತ ಇದ್ದರೂ ವಿರೋಧ ಪಕ್ಷದ ಸ್ಥಾನದಲ್ಲಿ ಇರುವ ಬಿಜೆಪಿ ಸದಸ್ಯರ  ಪ್ರತಿಭಟನೆ ನಡುವೆಯೂ ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ₹ 36,22 ಕೋಟಿ ಆದಾಯ ನಿರೀಕ್ಷೆ ಹಾಗೂ ₹ 35,60 ಕೋಟಿ ಖರ್ಚು ವೆಚ್ಚ ಗಳನ್ನೊಳಗೊಂಡ ₹ 61. 98 ಲಕ್ಷದ 2017-18ನೇ ಸಾಲಿನ ಮಿಗತೆ ಬಜೆಟ್‌ ಗುರುವಾರ ಮಂಡಿಸಿದರು.

ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಅವರ ಅಧ್ಯಕ್ಷತೆ ಯಲ್ಲಿ ಗುರುವಾರ ನಗರಸಭೆಯ ಸಾಮಾ ನ್ಯ ಸಭೆ ನಡೆಯಿತು. ನಗರಸಭೆ ಆಯು ಕ್ತರು ಸಭೆಯ ಕಲಾಪ ಶುರು ಮಾಡು ತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಸದಸ್ಯ ವಿನಯ್‌ ಭಂ ಡಾರಿ ಅವರು ಹಿಂದಿನ ಸಭೆ ನಡಾವ ಳಿಗಳು ಎಲ್ಲಿ ಎಂದು ಪ್ರಶ್ನಿಸಿದರು. ಸಾಮಾನ್ಯ ಸಭೆ ಕರೆದು ಬಜೆಟ್‌ಗೆ ಸಂ ಬಂಧಿಸಿದ ಕೇವಲ ಒಂದು ವಿಷಯ ಮಾತ್ರ ಚರ್ಚೆಗೆ ಮಂಡನೆ ಮಾಡಿರು ವುದು ಸರಿಯಲ್ಲ. ಇದಕ್ಕೆ ವಿರೋಧವಿದೆ ಎಂದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ರಾಜೇಶ್ ಬನ್ನೂರು, ಜೀವಂಧರ್ ಜೈನ್, ರಾಮಣ್ಣ ಗೌಡ ಅಲಂಗ ಅವರು ನಗರಸಭೆ ಸಾಮಾನ್ಯ ಸಭೆ ನಡೆಯದೆ 4 ತಿಂಗಳಾಯಿತು. ಹಿಂದೆ ನಡೆದಿರುವ ಸಾಮಾನ್ಯ ಸಭೆ ಹಾಗೂ ವಿಶೇಷ ಸಭೆ ನಡಾವಳಿ ಚರ್ಚಿಸಿ ಅನುಮೋದನೆ ಪಡೆ ಯುವುದು ಕಾನೂನಿನ  ನಿಯಮ.  ಇದನ್ನು ಲೆಕ್ಕಿಸದೇ ಸಭೆ ಕರೆದಿರುವುದಕ್ಕೆ  15 ಸದಸ್ಯರ ಆಕ್ಷೇಪವಿದೆ ಎಂದು ಘೋಷಣೆ ಕೂಗಿದರು.

ಸಾಮಾನ್ಯ ಸಭೆಯಲ್ಲಿ ಹಿಂದೇ ನಡೆದ ನಡಾವಳಿ ಲಗತ್ತಿಸಿ ನೀಡುವಂತೆ ಅಧ್ಯಕ್ಷರಿಗೆ ತಿಳಿಸಿದ್ದೆ ಎಂದು ನಗರ ಸಭೆಯ ಆಯುಕ್ತೆ ರೂಪಾ ಶೆಟ್ಟಿ ಹೇಳಿದರು.
ಆಡಳಿತ ಪಕ್ಷದ ಸದಸ್ಯ ಎಚ್.ಮಹ ಮ್ಮದ್ ಆಲಿ ನೀಡಿದ ಉತ್ತರವು ವಿರೋಧ ಪಕ್ಷದ ಸದಸ್ಯರಲ್ಲಿ ಆಕ್ರೋಶ ಉಂಟು ಮಾಡಿತು.

ಉಪಾಧ್ಯಕ್ಷ ವಿಶ್ವ ನಾಥ ಗೌಡ ಸೇರಿದಂತೆ 15 ಮಂದಿ ಬಿಜೆಪಿ ಸದಸ್ಯರು ಸದನದ ಬಾವಿಯೊಳ ಗಿಳಿದು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ದರು. ಜಿಲ್ಲಾಧಿಕಾರಿ ಬರುವಂತೆ ಪಟ್ಟು ಹಿಡಿದರು. ವಾಗ್ವಾದ, ಆರೋಪಗಳ ನಡುವೆ ಅಧ್ಯಕ್ಷೆ ಜಯಂತಿ ಬಲ್ನಾಡು ಬಜೆಟ್‌ ಮಂ ಡಿಸಿ ಎಲ್ಲರಿಗೂ ಧನ್ಯವಾದ ಹೇಳಿದರು.

ಸದಸ್ಯರ ಆರೋಪ:  ಹಿಂದಿನ ಸಭೆ ನಡಾವಳಿಗೆ ಆದ್ಯತೆ ನೀಡದೆ ಬಜೆಟ್ ಮಂಡನೆ ಮಾಡಿರುವುದು ಆಡಳಿತ ಪಕ್ಷದ ಏಕಪಕ್ಷೀಯ ತೀರ್ಮಾನ. ಕಳೆದ ಸಭೆಯಲ್ಲಿ ವಾರದ ಸಂತೆ ವಿಚಾರದಲ್ಲಿ ಕೈಗೊಳ್ಳಲಾದ ನಿರ್ಣಯಗಳಿಗೆ ಸಭೆಯಲ್ಲಿ ಬೆಲೆ ಇಲ್ಲದಾಗಿದೆ. ಸ್ಥಾಯಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಿ ದ್ದರೂ ಸ್ಥಾಯಿ ಸಮಿತಿ ರಚನೆ ಮಾಡಲಾ ಗಿಲ್ಲ. ಸ್ಥಾಯಿ ಸಮಿತಿ ಅಸ್ತಿತ್ವವೇ ಇಲ್ಲ. ಹೈಕೋರ್ಟಿಗೆ ಇಬ್ಬರು ವಕೀಲರನ್ನು ನೇಮಕ ಮಾಡಿರುವುದಕ್ಕೂ ಆಕ್ಷೇಪ ಸಲ್ಲಿಸಲಾಗಿತ್ತು ಎಂದು ಬಿಜೆಪಿ ಸದಸ್ಯ ರಾಜೇಶ್ ಬನ್ನೂರು ಆರೋಪಿಸಿದರು.

₹ 61.98 ಲಕ್ಷ ಮಿಗತೆ ಬಜೆಟ್
ಆರಂಭಿಕ ಶುಲ್ಕ ₹ 5.83 ಕೋಟಿ, 2017-18ನೇ ಸಾಲಿನಲ್ಲಿ ನಗರಸಭೆ ನಿರೀಕ್ಷಿಸಲಾದ ಸ್ವಂತ ಆದಾಯ ₹ 10,31 ಕೋಟಿ ವೇತನ ಅನುದಾನ, ವಿದ್ಯುತ್ ಅನುದಾನ ಸೇರಿ ಒಟ್ಟು ನಿರೀಕ್ಷಿತ ಅನುದಾನ ₹ 6,60 ಕೋಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರೀಕ್ಷಿತ ಅನುದಾನ ₹ 9. 45 ಕೋಟಿ ಇತರ ಹೊಂದಾಣಿಕೆ ಮೊತ್ತ ₹ 4,01 ಕೋಟಿ ಸೇರಿದಂತೆ ಒಟ್ಟು ₹ 36. 22 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ವಿವಿಧ ಯೋಜನೆಗಳಿಗೆ ಹಾಗೂ ಅಗತ್ಯಕ್ಕೆ ₹ 35.60 ಕೋಟಿ ಹಂಚಿಕೆ ಮಾಡಲಾಗಿದ್ದು, ಇದು ₹ 61.98 ಲಕ್ಷದ ಮಿಗತೆ ಬಜೆಟ್ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.