ADVERTISEMENT

ತ್ಯಾಜ್ಯ ಮುಕ್ತ ಕನಸು– ಜನರ ಸಹಕಾರವೂ ಅಗತ್ಯ: ಉಮೇಶ್

​ಪ್ರಜಾವಾಣಿ ವಾರ್ತೆ
Published 27 ಮೇ 2017, 6:32 IST
Last Updated 27 ಮೇ 2017, 6:32 IST

ಉಳ್ಳಾಲ: ತ್ಯಾಜ್ಯ ಮುಕ್ತ ಗ್ರಾಮದ ಕನಸು ನನಸಾಗಿಸಲು ಕೇವಲ ಜನಪ್ರತಿನಿ ಧಿಗಳಿಂದ ಹಾಗೂ ಅಧಿಕಾರಿಗಳಿಂದ ಸಾಧ್ಯವಿಲ್ಲ. ಇವರ ಜತೆಗೆ ಊರಿನ ನಾಗರಿಕರೆಲ್ಲರೂ ಒಂದಾಗಿ ತಮ್ಮ ಪರಿಸರ ತ್ಯಾಜ್ಯ ಮುಕ್ತ ಆಗಬೇಕೆಂದು ಸಂಕಲ್ಪ ಮಾಡಿದರೆ ಮಾತ್ರ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಉಪಕಾ ರ್ಯದರ್ಶಿ ಎನ್.ಅರ್.ಉಮೇಶ್ ಹೇಳಿದ್ದಾರೆ.

ಅವರು ಪ್ರಜ್ಞಾ ಸಲಹಾ ಕೇಂದ್ರ, ಜನ ಶಿಕ್ಷಣ ಟ್ರಸ್ಟ್, ದುರ್ಗಾ ವಾಹಿನಿ ಮಹಿಳಾ ಮಂಡಲ ಕುತ್ತಾರು ಮತ್ತು ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣ-ಸೌಹಾರ್ದ ಸಂಕಲ್ಪ ಕಾರ್ಯಕ್ರಮಕ್ಕೆ ಕುತ್ತಾರು ಮಹಿಳಾ ಮಂಡಲ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು. 

ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲ್ಲೂಕು ಪಂಚಾಯಿತಿ ಇಒ ಸುಧಾಕರ್, ಸದಸ್ಯೆ ವಿಲ್ಮಾ ಆಲ್ಫ್ರೆಡ್ ಡಿಸೋಜ,ಮುನ್ನೂರು ಪಂಚಾಯಿತಿ ಮಾಜಿ ಅಧ್ಯಕ್ಷ ಅಬ್ದುಲ್‌ ರಹಮಾನ್‌, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಶೀನ ಶೆಟ್ಟಿ, ಮುನ್ನೂರು ಪಿಡಿಒ ಸುಧೀರ್ ಉಪಸ್ಥಿತರಿದ್ದರು.

ADVERTISEMENT

ಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಅಧಿಕಾರಿ ವಿಲಿಯಂ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಸುನೀತಾ ನಾಯಕ್ ನಿರೂಪಿಸಿದರು. ಫಲಾನುಭವಿಗಳಿಗೆ  ಕಾಂಪೋಸ್ಟ್ ಗೊಬ್ಬರ ಮಾಡಲು ಪೈಪ್ ಅನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.