ADVERTISEMENT

ನ್ಯಾಯಬೆಲೆ ಅಂಗಡಿ ಲೈಸನ್ಸ್ ಅಮಾನತು

ಅಸಮರ್ಪಕ ಪಡಿತರ ವಿತರಣೆ: ಸಚಿವ ಯು.ಟಿ.ಖಾದರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 7:20 IST
Last Updated 25 ಮಾರ್ಚ್ 2017, 7:20 IST

ಮಂಗಳೂರು:  ಸಮರ್ಪಕ ಪಡಿತರ ವಿತ ರಣೆ ಮಾಡದ ನ್ಯಾಯಬೆಲೆ ಅಂಗಡಿ ವಿರುದ್ಧ ಬಿಪಿಎಲ್ ಕಾರ್ಡ್‌ದಾರ ಮಹಿ ಳೆಯೊಬ್ಬರು ನೇರವಾಗಿ ಆಹಾರ ಸಚಿವ ಯು.ಟಿ. ಖಾದರ್ ಅವರಿಗೆ ದೂರು ನೀಡಿದ್ದು, ಇದರ ಪರಿಣಾಮ ನ್ಯಾಯ ಬೆಲೆ ಅಂಗಡಿಯ ಪರವಾನಗಿಯನ್ನು ಶುಕ್ರವಾರ ಅಮಾನತು ಮಾಡಲಾಗಿದೆ.

ಮಂಗಳೂರಿನ ಶಕ್ತಿನಗರದಲ್ಲಿರುವ ನಾಗುರಿ ವ್ಯವಸಾಯ ಸಹಕಾರಿ ಸಂಘದ ಶಕ್ತಿನಗರ ಶಾಖೆಯ ನ್ಯಾಯಬೆಲೆ ಅಂಗ ಡಿಯ ಪರವಾನಗಿ ಅಮಾನತು ಮಾಡಲಾಗಿದೆ.

ಬಿಪಿಎಲ್ ಕಾರ್ಡ್‌ದಾರ ಮಹಿಳೆ ಯೊಬ್ಬರು ಗುರುವಾರ ಪಡಿತರ ಸಾಮಗ್ರಿ ಪಡೆಯಲು ಈ ನ್ಯಾಯಬೆಲೆ ಅಂಗಡಿಗೆ ಬಂದಿದ್ದರು. ಆದರೆ ಈ ತಿಂಗಳ ಅಕ್ಕಿ ಮುಗಿದಿದೆ ಎಂದು ತಿಳಿಸಿದ ಅಂಗಡಿ ಯವರು, ಮುಂದಿನ ತಿಂಗಳು ಬರು ವಂತೆ ಸೂಚಿಸಿದ್ದಾರೆ. ಇದೇ ರೀತಿ ಹಲವು ಬಿಪಿಎಲ್ ಕಾರ್ಡ್‌ದಾರರಿಗೂ ತಿಳಿಸಿದ್ದರು.

ಮಾಸಾಂತ್ಯದವರೆಗೂ ಪಡಿತರ ನೀಡಬೇಕೆಂಬ ಸರ್ಕಾರದ ಆದೇಶ ವಿದ್ದರೂ, ಅಗತ್ಯವಾದ ಅಕ್ಕಿ 22ನೇ ತಾರೀಖಿಗೆ ಖಾಲಿಯಾಗಿರುವ ಬಗ್ಗೆ ಮಹಿಳೆ ಪ್ರಶ್ನಿಸಿದ್ದಾರೆ. ಆದರೆ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಸರಿಯಾಗಿ ಉತ್ತರಿ ಸಲಿಲ್ಲ. ಈ ಹಿಂದಿನ ತಿಂಗಳಲ್ಲೂ ಇದೇ ರೀತಿ ವರ್ತಿಸಿದ್ದರು.

ಇದರಿಂದ ಅಸಮಾಧಾನಗೊಂಡ ಮಹಿಳೆ, ನೇರವಾಗಿ ಆಹಾರ ಸಚಿವ ಯು.ಟಿ. ಖಾದರ್ ಅವರ ಮೊಬೈಲ್‌ಗೆ ಕರೆ ಮಾಡಿ, ತನಗೆ ಹಾಗೂ ಇತರ ಬಡ ಕುಟುಂಬದವರಿಗೆ ನ್ಯಾಯಬೆಲೆ ಅಂಗಡಿ ಯು ಸಮರ್ಪಕ ಪಡಿತರ ನೀಡದಿರುವ ಬಗ್ಗೆ ದೂರು ನೀಡಿದ್ದರು.

ತಕ್ಷಣವೇ ಸ್ಪಂದಿಸಿದ ಸಚಿವ ಖಾದರ್, ಈ ಬಗ್ಗೆ ಕೂಡಲೇ ತನಿಖೆ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕ ಎ.ಟಿ. ಜಯಪ್ಪ ಅವರಿಗೆ ಸೂಚಿಸಿದ್ದರು.

ಶಕ್ತಿನಗರ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ ಆಹಾರ ಇಲಾಖೆ ನಿರೀಕ್ಷ ಕರು, ಅಲ್ಲಿದ್ದ ಇತರ ಕಾರ್ಡ್‌ದಾರರನ್ನು ವಿಚಾರಿಸಿದಾಗಲೂ, ಪಡಿತರ ಅಕ್ಕಿ ನೀಡ ದಿರುವುದು ತಿಳಿದು ಬಂದಿದೆ. ಬಿಪಿಎಲ್ ಕುಟುಂಬಗಳಿಗೆ ಸಮರ್ಪಕ ಅಕ್ಕಿ ಮತ್ತು ಪಡಿತರ ಸಾಮಗ್ರಿ ವಿತರಿಸದಿರುವ ಬಗ್ಗೆ ಆಹಾರ ಇಲಾಖೆ ಉಪನಿರ್ದೇಶಕ ಜಯಪ್ಪ, ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು.

ಪಡಿತರ ನೀಡದಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ನಾಗುರಿ ವ್ಯವಸಾಯ ಸಹಕಾರಿ ಸಂಘದ ಶಕ್ತಿನಗರ ಶಾಖೆಯ ನ್ಯಾಯಬೆಲೆ ಅಂಗ ಡಿಯ ಪರವಾನಗಿಯನ್ನು ತಕ್ಷಣದಿಂ ದಲೇ ಜಾರಿಗೆ ಬರುವಂತೆ ಅಮಾನತು ಪಡಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.