ADVERTISEMENT

ಪಿಂಚಣಿ ವಂಚಿತ ಅಧ್ಯಾಪಕರ ಬದುಕು ಅತಂತ್ರ

ಬ್ರಹ್ಮಾವರ: ಜಿಲ್ಲಾ ಸಮಾವೇಶದಲ್ಲಿ ಗಣೇಶ ಶೆಟ್ಟಿಗಾರ್‌ ಕಳವಳ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 5:55 IST
Last Updated 27 ಮಾರ್ಚ್ 2017, 5:55 IST
ಪಿಂಚಣಿ ವಂಚಿತ ಅಧ್ಯಾಪಕರ ಬದುಕು ಅತಂತ್ರ
ಪಿಂಚಣಿ ವಂಚಿತ ಅಧ್ಯಾಪಕರ ಬದುಕು ಅತಂತ್ರ   
ಬ್ರಹ್ಮಾವರ: ಸರ್ಕಾರದಿಂದ ಶಿಕ್ಷಕರ ಮೇಲೆ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಯಾವುದೇ ಸೌಲಭ್ಯಗಳನ್ನು ನೀಡದೇ ವಂಚಿಸುತ್ತಿದೆ ಎಂದು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಶೆಟ್ಟಿಗಾರ್‌ ಹೇಳಿದರು.
 
ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಸಭಾ ಭವನ ದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಆಶ್ರಯದಲ್ಲಿ ಭಾನು ವಾರ ನಡೆದ ಪಿಂಚಣಿ ವಂಚಿತ ನೌಕರರ ಉಡುಪಿ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.
 
ಮಕ್ಕಳ ಭವಿಷ್ಯದ ಬಗ್ಗೆ ಯಾವಾಗಲೂ ಚಿಂತಿಸುವ ಅಧ್ಯಾಪಕರು ತಮ್ಮ ಭವಿಷ್ಯದ ಭದ್ರತೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರ 2006ರ ಜೂನ್‌ ನಂತರ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುತ್ತಿರುವ ಅಧ್ಯಾಪಕರಿಗೆ ಪಿಂಚಣಿ ನೀಡುತ್ತಿಲ್ಲ. ಕಾರ್ಮಿಕರಿಗೆ ಸಿಗುವ ಪಿಎಫ್‌, ಇಎಸ್‌ಐ ಸೌಲಭ್ಯ ಕೂಡಾ ದೊರಕುತ್ತಿಲ್ಲ.

ನಿವೃತ್ತಿಯ ಸಮಯದ ಲ್ಲಿಯೂ ಆ ತಿಂಗಳ ವೇತನದೊಂದಿಗೆ ಮನೆಗೆ ಹೋಗಬೇಕಾದ ಪರಿಸ್ಥಿತಿ ತಂದೊಡ್ಡಿದೆ. ಭವಿಷ್ಯಕ್ಕೆ ಯಾವುದೇ ಭದ್ರತೆಯನ್ನು ನೀಡದ ಸರ್ಕಾರದ ಈ ಕ್ರಮಕ್ಕೆ ಎಲ್ಲರೂ ಒಂದಾಗಿ ಹೋರಾಟ ನಡೆಸಿ ಈ ಸೌಲಭ್ಯಗಳನ್ನು ಪಡೆದುಕೊ ಳ್ಳಬೇಕಾಗಿದೆ ಎಂದರು.
 
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿ, ಸರ್ಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳ ಅಧ್ಯಾ ಪಕರಿಗೆ ಯಾವುದೇ ಸೇವಾ ಭದ್ರತೆ ನೀಡದೇ ನಿಕೃಷ್ಟವಾಗಿ ನೋಡಿಕೊ ಳ್ಳುತ್ತಿದೆ. ಅಧ್ಯಾಪಕರ ಇಡೀ ಕುಟುಂಬವನ್ನೇ ಅಂಧಕಾರದಲ್ಲಿ ಮುಳು ಗಿಸಿದ ಸರ್ಕಾರ ಈ ಕ್ರಮ ಖಂಡನೀಯ. ಎಲ್ಲರೂ ಒಟ್ಟಾಗಿ ಹೋರಾಟ ನಡೆಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ ಎಂದು ಹೇಳಿದರು.
 
ಸಮಾವೇಶದಲ್ಲಿ ಸಂಘದ ಕಿರಣ್ ಕುಮಾರ್ ಹೆಗ್ಡೆ, ಸರ್ಕಾರಿ ನೌಕರರ ಜಿಲ್ಲಾ ಸಂಚಾಲಕ ರವಿ ಎಸ್. ಶೆಟ್ಟಿ, ಕಾರ್ಯ ದರ್ಶಿ ರಾಮಚಂದ್ರ ಮತ್ತಿತರರು ಉಪ ಸ್ಥಿತರಿದ್ದರು. 
ಸಚಿನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಸನ್ನ ಕುಮಾರ್ ಶೆಟ್ಟಿ ವಂದಿ ಸಿದರು. ಪ್ರಕಾಶ್‌ ಮಾಕೋಡಿ ನಿರೂ ಪಿಸಿದರು. ನಂತರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
 
***
ರಾಜ್ಯದ 35ಸಾವಿರಕ್ಕೂ ಹೆಚ್ಚು ಅಧ್ಯಾಪಕರು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದು,  ಹೆಚ್ಚು ಕೇವಲ ತಿಂಗಳ ವೇತನ ಪಡೆದು ನಿವೃತ್ತಿ ಹೊಂದಿದ್ದಾರೆ.
ಸಚಿನ್ ಕುಮಾರ್‌, ಪಿಂಚಣಿ ವಂಚಿತ ಅಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.