ADVERTISEMENT

ಪೊಲೀಸ್, ಆರ್‌ಟಿಓ ಅಧಿಕಾರಿಗಳು ತರಾಟೆಗೆ

ಬಂಟ್ವಾಳ ತಾಲ್ಲೂಕು ಮಟ್ಟದ ಜನ ಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 9:20 IST
Last Updated 6 ಮಾರ್ಚ್ 2017, 9:20 IST
ವಿಟ್ಲ: ‘ಆರ್‌ಟಿಒ ಹಾಗೂ ಪೊಲೀಸರು ಖಾಸಗಿ ಬಸ್‌ನವರ ಜತೆ ಶಾಮೀಲಾಗಿದ್ದಾರೆ ಎಂಬ ಆರೋಪ ಇದೆ. ಆರ್‌ಟಿಓ ಅಧಿಕಾರಿಗಳು ಸರಿಯಾಗಿದ್ದರೆ ಈ ರೀತಿಯ ಆರೋಪಗಳು ಬರಲು ಸಾಧ್ಯವಿಲ್ಲ. ಸರ್ಕಾರಿ ಬಸ್‌ನ ಚಾಲಕರಿಗೆ ಖಾಸಗಿ ಬಸ್‌ನವರು ಹಲ್ಲೆ ನಡೆಸುತ್ತಾರೆ ಎಂಬ ದೂರು ಇದೆ.

ಇದು ಯಾರ ನಿರ್ಲಕ್ಷ್ಯ? ಎರಡು ಇಲಾಖೆಯ ವೈಫ ಲ್ಯಗಳು ಎದ್ದು ಕಾಣುತ್ತಿವೆ. ಮುಂದಿನ ಜನಸಂಪರ್ಕ ಸಭೆಗೆ ಯಾವುದೇ ಆರೋಪಗಳು ಬರಬಾರದು’ ಎಂದು ಶಾಸಕಿ ಶಕುಂತಳಾ ಶೆಟ್ಟಿ ಪೊಲೀಸ್ ಹಾಗೂ ಆರ್‌ಟಿಓ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 
 
 ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್‌ನ ಸತ್ಯಸಾಯಿ ವಿಹಾರ ಪ್ರಾರ್ಥನಾ ಮಂದಿರದಲ್ಲಿ ನಡೆದ ಬಂಟ್ವಾಳ ತಾಲ್ಲೂಕು ಮಟ್ಟದ ಜನ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
 ನಾಗರಿಕರು ಮಾತನಾಡಿ, ‘ನೋ ಪಾರ್ಕಿಂಗ್ ಸ್ಥಳವೆಂದು ಜಿಲ್ಲಾಧಿಕಾ ರಿಗಳು ಆದೇಶ ನೀಡಿದ್ದರೂ ಅದು ಪಾಲನೆಯಾಗುತ್ತಿಲ್ಲ. ನೋ ಪಾರ್ಕಿಂಗ್ ಸ್ಥಳದಲ್ಲಿ ಇದುವರೆಗೂ ನಾಮಫಲಕ ಹಾಕುವ ಕಾರ್ಯ ನಡೆದಿಲ್ಲ. ಹಿಂದಿ ನಿಂದಲೂ ಇದ್ದ ಗಡಿ ಭಾಗದ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕು. ಪರವಾನಗಿ ಇದ್ದೂ ಓಡಾಟ ಆರಂಭಿಸದ ಮಾರ್ಗದಲ್ಲಿ ತಕ್ಷಣ ಬಸ್ ಸೇವೆ ಕಲ್ಪಿಸಬೇಕು. ವಿಟ್ಲ ಪೇಟೆಯ ಮೆಸ್ಕಾಂ ವಿದ್ಯುತ್ ಕಂಬಗಳನ್ನು ತಕ್ಷಣ ತೆರವು ಗೊಳಿಸಬೇಕು’ ಎಂದು ಆಗ್ರಹಿಸಿದರು. 
 
ಪುತ್ತೂರು - ಅಡ್ಕಸ್ಥಳ ಗಡಿ ಬಸ್ ರಾತ್ರಿ 8.30ಕ್ಕೆ ಹೊರಡುವ ಮೂಲಕ ದೂರದಿಂದ ಬರುವ ಪ್ರಯಾಣಿಕರಿಗೆ ಬಹಳ ಪ್ರಯೋಜನವಾಗುತ್ತಿತ್ತು. ಆದರೆ ಯಾವುದೇ ಸೂಚನೆ ಇಲ್ಲದೆ ಬಸ್ ಸ್ಥಗಿತವಾಗಿ ಪ್ರಯಾಣಿಕರು ಕಷ್ಟ ಪಡುವಂತಾಗಿದೆ. ಅಳಿಕೆ ಭಾಗಕ್ಕೆ ರಾತ್ರಿ ಬರುತ್ತಿದ್ದ ಬಸ್ ಕೂಡ ಸ್ಥಗಿತವಾಗಿದೆ. ತಕ್ಷಣ ಬಸ್ ಸೇವೆ ಆರಂಭಿಸಬೇಕು’ ಎಂದು ಆಗ್ರಹಿಸಿದರು.
 
ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಚೆಕ್ ವಿತರಣೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯ ಪದ್ಮನಾಭ ನಾಯ್ಕ ಅಳಿಕೆ, ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್, ಸಾಲೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.