ADVERTISEMENT

‘ಫಾಸ್ಟ್‌ಫುಡ್‌ಗೆ ಮಾರುಹೋಗದಿರಿ’

​ಪ್ರಜಾವಾಣಿ ವಾರ್ತೆ
Published 28 ಮೇ 2017, 7:15 IST
Last Updated 28 ಮೇ 2017, 7:15 IST

ಉಜಿರೆ: ಜಾಹೀರಾತಿನ ಅಬ್ಬರದಿಂದಾಗಿ ಮಕ್ಕಳು ಫಾಸ್ಟ್‌ಫುಡ್ ಹಾಗೂ ಶೇಖರಿ ಸಿರುವ ಆಹಾರಕ್ಕೆ ಮಾರುಹೋಗುತ್ತಿದ್ದು, ಮಹಿಳೆಯರು ಕೂಡ ಕೆಲಸದ ಒತ್ತಡ ದಿಂದ ತಕ್ಷಣ ಆಗುವ ಇಂತಹ ಆಹಾರ ವನ್ನೇ ಮಕ್ಕಳಿಗೆ ನೀಡುವುದರಿಂದ ಅವರ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿವೆ. ಆದ್ದರಿಂದ ಸಿರಿ ಧಾನ್ಯ ದಂತಹ ಖನಿಜಾಂಶಯುಕ್ತ ಆಹಾರ ವನ್ನು ನೀಡಲು ತಾಯಂದಿರು ಮುಂದಾ ಗಬೇಕು ಎಂದು ಧರ್ಮಸ್ಥಳದ ಹೇಮಾ ವತಿ ವಿ. ಹೆಗ್ಗಡೆ ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಸಿರಿ ಧಾನ್ಯಗಳ ಆಹಾರ ಮೇಳ ಹಾಗೂ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಇರುವಷ್ಟು ಆಹಾರದ ವೈವಿಧ್ಯತೆ ಬೇರೆ ಯಾವ ದೇಶದಲ್ಲೂ ಕಾಣಸಿಗದು. ಭಾರತದ ಪ್ರತಿಯೊಂದು ಪರಂಪರೆಯು ವಿಶೇಷವಾಗಿದ್ದು, ಇದು ಎಂದೂ ನಶಿಸಿ ಹೋಗುವಂತದ್ದು ಅಲ್ಲ. ಕಣ್ಮರೆಯ ಹಂತಕ್ಕೆ ತಲುಪಿದ್ದ ಸಿರಿ ಧಾನ್ಯಗಳು ಮತ್ತೆ ಊಟದ ಬಟ್ಟಲಿಗೆ ಬಂದಿವೆ.  ಪ್ರಸ್ತುತ ದಿನಗಳಲ್ಲಿ  ಸಿರಿ ಧಾನ್ಯಕ್ಕೆ ಮೌಲ್ಯ ಹೆಚ್ಚಾಗಿದ್ದು, ಕೃಷಿಕರು ಹಾಗೂ ಸರ್ಕಾರೇತರ ಸಂಸ್ಥೆಗಳು ಹಾಗೂ ಕೃಷಿ ಸಂಶೋಧನಾ ಕೇಂದ್ರಗಳು ಇದಕ್ಕೆ ಈಗ ಮಹತ್ವ ನೀಡುತ್ತಿವೆ ಎಂದರು.

ADVERTISEMENT

‘ಕೃಷಿ ಮಾಹಿತಿಯನ್ನು ಪ್ರತಿಯೊ ಬ್ಬರು ಪಡೆಯುವುದು ಬಹಳ ಅಗತ್ಯವಾ ಗಿದ್ದು, ಸಿರಿಧಾನ್ಯಗಳನ್ನು ಬೆಳೆಸಿ ಉಳಿ ಸುವ ಕಾರ್ಯ ಮಾಡುವುದರಿಂದ ಮುಂದಿನ ಪೀಳಿಗೆ ಸಿರಿ ಧಾನ್ಯಗಳನ್ನು ಮ್ಯೂಸಿಯಂನಲ್ಲಿ ನೋಡುವುದನ್ನು ತಪ್ಪಿಸಬಹುದು. ಇಂದು ಮನೆ ಮನೆಗ ಳಲ್ಲಿ ತರಕಾರಿಗಳನ್ನು ಬೆಳೆಸುವುದನ್ನು ಬಿಟ್ಟು ಗ್ರಾಮೀಣ ಪ್ರದೇಶದಲ್ಲಿಯೂ ಮಾರುಕಟ್ಟೆಯಿಂದ ತರಕಾರಿ ತರುವ ಸ್ಥಿತಿ ಬಂದಿರುವುದು ವಿಷಾದನೀಯ’ ಎಂದರು.

ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಮನೋರಮಾ ಭಟ್  ಪ್ರಸ್ತಾವಿಕವಾಗಿ ಮಾತನಾಡಿ, ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದಾದ್ಯಂತ ಸಣ್ಣ ಹಾಗೂ ಅತೀ ಸಣ್ಣ ರೈತರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ದಕ್ಷಿಣ ಕನ್ನಡ ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳನ್ನು ಹೊರತು ಪಡಿಸಿ ಅಲ್ಲಲ್ಲಿ ರೈತರು ಸಣ್ಣ ಪ್ರಮಾಣ ದಲ್ಲಿ ಸಿರಿ ಧಾನ್ಯಗಳನ್ನು ಬೆಳೆಯುತ್ತಿ ದ್ದಾರೆ’ ಎಂದರು. ಉಪನ್ಯಾಸಕ ಬಾಲಕೃಷ್ಣ  ಕಾರ್ಯಕ್ರಮ ನಿರೂಪಿಸಿದರು.  ಕೃಷಿ ವಿಭಾಗದ ನಿರ್ದೇಶಕ  ಮನೋಜ್ ಮೆನೆಜಸ್ ಧನ್ಯವಾದವಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.