ADVERTISEMENT

ಮನುಷ್ಯರಿಂದಲೇ ಅರಣ್ಯ ನಾಶ: ಸಚಿವ ರೈ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 10:22 IST
Last Updated 23 ಜುಲೈ 2017, 10:22 IST
ಬಂಟ್ವಾಳ ತಾಲ್ಲೂಕಿನ ನೆಟ್ಲ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ರಾಜ್ಯಮಟ್ಟದ ಅರಣ್ಯ ಸಂವರ್ಧನಾ ಅಭಿಯಾನ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ‘ದೇವರ ವನ’ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.
ಬಂಟ್ವಾಳ ತಾಲ್ಲೂಕಿನ ನೆಟ್ಲ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ರಾಜ್ಯಮಟ್ಟದ ಅರಣ್ಯ ಸಂವರ್ಧನಾ ಅಭಿಯಾನ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ‘ದೇವರ ವನ’ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.   

ಬಂಟ್ವಾಳ: ಪ್ರಕೃತಿಯಲ್ಲಿ ಬಹುಭಾಗ ಅರಣ್ಯ ಸಂಪತ್ತು ಮನುಷ್ಯರಿಂದಲೇ ನಾಶವಾಗುತ್ತಿದ್ದು, ಪ್ರಾಕೃತಿಕ ವಿಕೋಪಕ್ಕೆ ತಡೆ ಸೇರಿದಂತೆ ಹವಾಮಾನ ವೈಪರಿತ್ಯ ತಪ್ಪಿಸಲು ಮತ್ತೆ ಅರಣ್ಯ ಸಂವರ್ಧನೆ ಹಾಗೂ ಪುನರುತ್ಥಾನ ಅಗತ್ಯವಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.

ತಾಲ್ಲೂಕಿನ ನೆಟ್ಲ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯ ಮಟ್ಟದ ಅರಣ್ಯ ಸಂವರ್ಧನಾ ಅಭಿಯಾನ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ‘ದೇವರ ವನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದೇ ವೇಳೆ ಬೀಜದುಂಡೆ ವಿತರಣೆ ಮತ್ತು ಬಿಲ್ವಪತ್ರೆ ಗಿಡ ನೆಡುವ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಸತೀಶ್ ಬಾಬು ರೈ ಮಾತನಾಡಿದರು. 

ADVERTISEMENT

ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ನಿಟಿಲಾಕ್ಷ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗ ನ್ನಾಥ ಚೌಟ, ಗೋಳ್ತಮಜಲು  ಪಿಡಿಒ  ನಾರಾ ಯಣ ಇದ್ದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರು ಸ್ವಾಗತಿಸಿದರು. ಯೋಜನೆ ನಿರ್ದೇಶಕ ಕೆ. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಯೋಜನಾಧಿಕಾರಿ ಸುನೀತಾ ನಾಯಕ್ ವಂದಿಸಿದರು.

* * 

ಅರಣ್ಯ ಸಂರಕ್ಷಣಾ ಕಾಯ್ದೆಯ ಭೀತಿಯಿಂದ ಒಂದಷ್ಟು ಹೆಕ್ಟೇರ್‌ ಪ್ರದೇಶದಲ್ಲಿ ಕಾಡು ಮತ್ತು ವನ್ಯ ಪ್ರಾಣಿ ಮತ್ತಿತರ ಜೀವಿಗಳು ನಾಶವಾಗದೆ ಉಳಿದಿವೆ.
ಬಿ. ರಮಾನಾಥ ರೈ
ಅರಣ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.