ADVERTISEMENT

‘ಸುಖ ಮಾತ್ರ ಬಯಸದಿರಿ; ಕಷ್ಟಕ್ಕೂ ಸ್ಪಂದಿಸಿ’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:30 IST
Last Updated 21 ಏಪ್ರಿಲ್ 2017, 6:30 IST

ಮುಡಿಪು: ‘ಬದುಕಿನಲ್ಲಿ ಸುಖ, ಕಷ್ಟ, ನಷ್ಟಗಳು ಸಾಮಾನ್ಯ. ಆದರೆ ಅವೆಲ್ಲ ವನ್ನು ಬಂಡೆಗಲ್ಲಿನಂತೆ ಗಟ್ಟಿಯಾಗಿ ಎದು ರಿಸಿ ಮುನ್ನಡೆಯುವುದೇ ಜೀವನ. ಬದುಕಿನಲ್ಲಿ ಯಾವತ್ತೂ ಸುಖವನ್ನು ಮಾತ್ರ ಬಯಸದಿರಿ. ವಿದ್ಯಾವಂತರಾಗು ವುದರೊಂದಿಗೆ ಉತ್ತಮ ಜೀವನ ಕಂಡು ಕೊಳ್ಳಿರಿ. ಪರರ ದುಃಖಗಳಿಗೂ ಸ್ಪಂದಿಸಿ ಮುನ್ನಡೆಯಿರಿ’ ಎಂದು ಯಕ್ಷಗಾನದ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲ್ ಅವರು ಕಿವಿಮಾತು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ನಡೆದ ಮೂರು ದಿನಗಳ ಅಂತರ ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಸಮಾ ರೋಪ ಸಮಾರಂಭದಲ್ಲಿ ಗುರುವಾರ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.‘ಇಂದು ವಿದ್ಯಾರ್ಥಿಗಳಿಗೆ ಕಲಿಯಲು ಸಾಕಷ್ಟು ಅವಕಾಶಗಳಿವೆ. ಹೆತ್ತವರ ಪ್ರೋತ್ಸಾಹ ಸರ್ಕಾರದ ಅನುದಾನವೂ ಸಿಗುತ್ತದೆ. ಆದರೆ ತಾನು ಬಡ ಕುಟುಂಬ ದಲ್ಲಿ ಹುಟ್ಟಿದ್ದು ನಾಲ್ಕನೇ ತರಗತಿ ಮಾತ್ರ ಕಲಿಯಲು ಸಾಧ್ಯವಾಯಿತು. ಆ ಸಂದರ್ಭ ಟೀಚರ್ ಕೊಟ್ಟ ಚಡ್ಡಿ ತೊಟ್ಟು ಶಾಲೆಗೆ ಹೋಗುತ್ತಿದ್ದೆ. ಹಿಂದಿನ ಭಾಗ ಹರಿದರೂ ಕೈಇಟ್ಟುಕೊಂಡು ಹೋಗುತ್ತಿದ್ದೆ.

 ಜೀವನ ಸಾಗಿಸಲು ಕಷ್ಟ ಆದಾಗ ಎಂಟನೇ ವಯಸ್ಸಿನಲ್ಲಿ ತಂದೆ ಹೋಟೆಲ್ ಕೆಲಸಕ್ಕೆ ಸೇರಿಸಿದರು. ಮನುಷ್ಯನಿಗೆ ಎಷ್ಟೇ ಸಂಪತ್ತು ಇದ್ದರೂ ಸಮಯ ಬಂ ದಾಗ ಸಾಯಲೇ ಬೇಕು. ಐಷಾರಾಮಿ ಮನೆ, ಬಂಗಲೆ, ಹಣ, ಚಿನ್ನಾಭರಣ ಶೇಖರಿಸಿಡಲು ಏನೂ ಇರುವುದಿಲ್ಲ. ನಮ್ಮ ಹೆಣಕ್ಕೆ ಸುತ್ತುವ ಬಿಳಿ ಬಟ್ಟೆಯಲ್ಲಿ ಹಣ ಸಂಗ್ರಹಿಸಿಡಲು ಜೇಬು ಇರುವು ದಿಲ್ಲ. ಲೋಕವನ್ನೇ ಗೆದ್ದ ಅಲೆಗ್ಸಾಂಡರ್ ಅವರೂ ಇದನ್ನು ಬರೆದಿಟ್ಟು ಜನರಿಗೆ ಮನವರಿಕೆ ಮಾಡಿದ್ದರು. ಇದನ್ನಾದರೂ ನೆನಪಿಟ್ಟುಕೊಂಡು ಯಾರೂ ಸುಖದ ಹಿಂದೆ ಬೀಳದೆ ಜೀವನದ ಎಲ್ಲ ಮಗ್ಗುಲುಗಳನ್ನು ಅರಿತು ಮುನ್ನಡೆ ಯಬೇಕು’ ಎಂದರು.

ADVERTISEMENT

‘ಅವಕಾಶ ಇದ್ದರೆ ಬಡ ಮಕ್ಕಳ ಶಿಕ್ಷ ಣಕ್ಕೆ ನೆರವಾಗಿ. ತಾನು ದುಡಿದು ಸಿಕ್ಕಿದ ಹೆಚ್ಚುವರಿ ಸಂಭಾವನೆಯಲ್ಲಿ ಅನಾಥಾ ಶ್ರಮದ ಮಕ್ಕಳಿಗೆ ಊಟ ನೀಡುತ್ತಿದ್ದೇನೆ. ತಂದೆ-ತಾಯಿಯನ್ನು ಸಾಕುವ ಭಾಗ್ಯ ಇಲ್ಲದ ನಾನು ಇಬ್ಬರು ವೃದ್ಧರನ್ನು ಸಾಕು ತ್ತಿದ್ದೇನೆ. ನಾಲ್ಕು ಮಕ್ಕಳಿಗೆ ಸ್ಕಾಲರ್‌ಶಿಪ್‌ ನೀಡುತ್ತಿದ್ದೇನೆ. ಇಂದು ನನಗೆ ಊಟ ವಿದೆ, ಅಭಿಮಾನಿಗಳು ಕೊಟ್ಟ ಸಾಕಷ್ಟು ಬಟ್ಟೆಗಳಿವೆ. ಆದರೆ ಬಟ್ಟೆ ತೊಡಲು ಅವ ಕಾಶ ಸಿಗುತ್ತಿಲ್ಲ. ಕೆಲಸ ಒತ್ತಡದಿಂದ ನೀರು ಸೇವನೆಯೇ ಹೆಚ್ಚಾಗಿದ್ದು ಆರೋ ಗ್ಯವೂ ಹದಗೆಡಲು ಕಾರಣವಾಗುತ್ತಿದೆ’ ಎಂದರು.

ಸೀತಾರಾಮ ಕುಮಾರ್ ಅವರನ್ನು ಮಂಗಳೂರು ವಿವಿ ವತಿಯಿಂದ ಸನ್ಮಾನಿ ಸಲಾಯಿತು. ವಿವಿ ಕುಲಸಚಿವ ಪ್ರೊ. ಕೆ.ಎಂ.ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗ ನಿರ್ದೇಶಕ ಪ್ರೊ. ಬಾರ್ಕೂರು ಉದಯ ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಪದಾಧಿಕಾರಿಗಳಾದ ಸುನೀಲ್ ಕೆ.ಎಂ ವರದಿ ಓದಿದರು. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ  ಕಾರ್ಯಕ್ರಮ ನಿರ್ವಹಿಸಿದರು. ಸಾಂ ಸ್ಕೃತಿಕ ಸ್ಪರ್ಧೆಯಲ್ಲಿ ಸಸ್ಯಶಾಸ್ತ್ರ ವಿಭಾಗದ ಸಮಗ್ರ ಪ್ರಶಸ್ತಿ ಪಡೆದರೆ, ಇಂಡಸ್ಟ್ರಿಯಲ್ ಕೆಮೆಸ್ಟ್ರಿ ಮತ್ತು ಬಯೋಕೆಮಿಸ್ಟ್ರಿ ದ್ವಿತೀಯ ಹಾಗೂ ಫಿಸಿಕ್ಸ್ ವಿಭಾಗದ ತೃತೀಯ ಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.