ADVERTISEMENT

10ರಂದು ರಥೋತ್ಸವ: ಜಾತ್ರೋತ್ಸವಕ್ಕೆ ಸಿದ್ಧತೆ

ಸುಳ್ಯ ಚೆನ್ನಕೇಶವ ದೇವಸ್ಥಾನ: ಅನ್ನ ಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 6:21 IST
Last Updated 2 ಜನವರಿ 2017, 6:21 IST

ಸುಳ್ಯ: ಸುಳ್ಯ ಚೆನ್ನಕೇಶವ ದೇವ ಸ್ಥಾನದ ವರ್ಷಾವಧಿ ಜಾತ್ರೋತ್ಸವ ಇದೇ 2ರಿಂದ 11ರವರೆಗೆ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರ ಕಾರ್ಯಕ್ರಮಗಳ ವಿವರ ನೀಡಿದರು. 7 ರಂದು ರಾತ್ರಿ ಉತ್ಸವ ಬಲಿ ಹೊರ ಡುವುದು. ಜ. 8ರಂದು ಬೆಳಿಗ್ಗೆ ಸಣ್ಣ ದರ್ಶನ ಬಲಿ, ನಡುಬೆಳಗು, ಬಟ್ಟಲು ಕಾಣಿಕೆ ನಡೆಯುವುದು. ರಾತ್ರಿ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ, ವಿವೇ ಕಾನಂದ ವೃತ್ತ ಹಳೆಗೇಟು, ಮಿಲಿಟರಿ ಗ್ರೌಂಡ್ ಕಟ್ಟೆ, ಅಮೃತಭವನ, ರಾಮ ಮಂದಿರ, ಜಟ್ಟಿಪಳ್ಳ ಕಟ್ಟೆ ಪೂಜೆಗಳು ನಡೆಯಲಿದೆ. 9 ರಂದು ಬೆಳಿಗ್ಗೆ ಅಜ್ಜಾವ ರದ ಶ್ರೀ ಶಂಕರ ಭಾರತೀ ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾ ಯಣ ನಡೆಯಲಿದೆ. ರಾತ್ರಿ ಮಿತ್ತೂರು ದೈವಗಳ ಭಂಡಾರ ಬರುವುದು, ಕಾನ ತ್ತಿಲ ದೈವಗಳ ಭಂಡಾರ ಬರುವುದು ನಂತರ ವಲಸಿರಿ ಉತ್ಸವ ನಡೆಯಲಿದೆ.

10ರಂದು ಬೆಳಿಗ್ಗೆ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ರಾತ್ರಿ ಕಲ್ಕುಡ ದೈವಗಳ ಭಂಡಾರ ಬಂದು ರಥೋತ್ಸವ ನಡೆಯಲಿರುವುದು. 11 ರಂದು ಬೆಳಿಗ್ಗೆ ಆರಾಟ ಬಾಗಿಲು ತೆರೆ ಯುವುದು. ಬೆಳಿಗ್ಗೆ ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ಭಾರ ದ್ವಾಜಾಶ್ರಮ ಅರಂಬೂರು ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಲಿದೆ.

ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆದು ರಾತ್ರಿ ಬಜಪ್ಪಿಲ ದೈವಗಳ ಭಂಡಾರ ಬರು ವುದು, ಉತ್ಸವ ಬಲಿ ಹೊರಟು ಪಟ್ಟಣ ಸವಾರಿ, ಆರಕ್ಷಕ ಠಾಣಾ ಕಟ್ಟೆಯಿಂದ ಗಾಂಧಿನಗರ, ಅರಣ್ಯ ಇಲಾಖೆ, ಕೇರ್ಪಳ, ತಾಲ್ಲೂಕು ಕಚೇರಿ, ಪಯಸ್ವಿನಿ ನದಿ ಬಳಿ ಕಟ್ಟೆ ಪೂಜೆಗಳು ನಡೆದು ಅವಭೃತ ಸ್ನಾನವಾಗಿ ಬಂದು ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜಾರೋಹಣ ನಡೆಯಲಿದೆ..12 ರಂದು ಮಧ್ಯಾಹ್ನ ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ.

2ರಿಂದ 9ರವರೆಗೆ ಪ್ರತಿದಿನ ಚೆನ್ನ ಕೇಶವ ದೇವಸ್ಥಾನ ಮತ್ತು ಶ್ರೀಚೆನ್ನ ಕೇಶವ ಯುವ ಸೇವಾ ಸಂಘ ಆಶ್ರಯ ದಲ್ಲಿ ಸಾಂಸ್ಕೃತಿಕೋತ್ಸವ ನಡೆಯಲಿದ್ದು, 2ರಂದು ಸಂಜೆ ಸಾಂಸ್ಕೃತಿಕ ಕಾರ್ಯ ಕ್ರಮದ ಉದ್ಘಾಟನೆಯನ್ನು ಎಒಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ನೆರವೇರಿ ಸಲಿದ್ದಾರೆ. ಉಪನ್ಯಾಸಕಿ ಹರಿಣಿ ಪುತ್ತೂ ರಾಯ ಧಾರ್ಮಿಕ ಉಪನ್ಯಾಸ ನೀಡಲಿ ದ್ದಾರೆ. ಬಳಿಕ ಕೆವಿಜಿ ಆಯುರ್ವೇದಿಕ್‌ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

2ರಂದು ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ವಿದ್ಯಾ ರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ. 3 ರಂದು ಸುಬ್ರಹ್ಮಣ್ಯದ ಯಜ್ಞೇಶ್ ಆಚಾರ್ಯ ಬಳಗದಿಂದ ಭಕ್ತಿ ಸಂಗೀತ. 4ರಂದು ದೇವಿದಾಸ್ ಕಾಪಿ ಕ್ಕಾಡ್‌ ಅವರ ‘ಬಂಗಾರ್’, 5ರಂದು ಮಂಜೇಶ್ವರದ ನಾಟ್ಯ ನಿಲಯಂನ ಬಾಲಕೃಷ್ಣ ಮಾಸ್ಟರ್ ಶಿಷ್ಯ ವೃಂದವ ರಿಂದ ನೃತ್ಯಾಭಿಷೇಕ, 6ರಂದು ಜದಗೀಶ ಆಚಾರ್ಯರಿಂದ ಭಕ್ತಿಭಾವ ರಸ ಸಂಜೆ, 7ರಂದು ಕರ್ಣಾರ್ಜುನ ತಾಳಮದ್ದಲೆ, 9ರಂದು ಧರ್ಮಸ್ಥಳ ಕ್ಷೇತ್ರ ಮಹಾತ್ಮ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.