ADVERTISEMENT

₹ 500 ಕೋಟಿ ಕಾಮಗಾರಿ ಅನುಷ್ಠಾನ: ಶಾಸಕ ಬಂಗೇರ

​ಪ್ರಜಾವಾಣಿ ವಾರ್ತೆ
Published 20 ಮೇ 2017, 4:56 IST
Last Updated 20 ಮೇ 2017, 4:56 IST

ಉಪ್ಪಿನಂಗಡಿ: 4 ವರ್ಷದ ಅವಧಿಯಲ್ಲಿ ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ₹ 500 ಕೋಟಿ ಹೆಚ್ಚು ಮೊತ್ತದ ಹಲವು ಕಾಮಗಾರಿಗಳು ಅನುಷ್ಠಾನವಾಗಿದೆ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಶುಕ್ರವಾರ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ₹ 2 ಕೋಟಿ ಅನುದಾನದಲ್ಲಿ ಕಣಿಯೂರು-ಪದ್ಮುಂಜ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ನನ್ನ ಅವಧಿಯಲ್ಲಿ ತಾಲ್ಲೂಕಿನ ಹಳ್ಳಿಹಳ್ಳಿಗೆ ರಸ್ತೆ, ಶಾಲೆ, ಆರೋಗ್ಯ ಕೇಂದ್ರ ಸೇರಿದಂತೆ  ಸೌಕರ್ಯಗಳನ್ನು ಕಲ್ಪಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.  ತಾಲ್ಲೂಕಿಗೆ 4 ಮೊರಾರ್ಜಿ ದೇಸಾಯಿ ವಸತಿ ಶಾಲೆ ತಂದಿದ್ದು, ರಾಜ್ಯ ದಲ್ಲಿಯೇ ನಾಲ್ಕು ಮೊರಾರ್ಜಿ ದೇಸಾಯಿ ವಸತಿ ಶಾಲೆ ಇರುವ ಪ್ರಥಮ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಬೆಳ್ತಂಗಡಿ ಪಾತ್ರವಾ ಗಿದೆ. ತಾಲ್ಲೂಕಿನ ಎಲ್ಲ 81 ಗ್ರಾಮಗಳ  ಮನೆಗಳು ವಿದ್ಯುತ್ ಹೊಂದಿವೆ.

ADVERTISEMENT

ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದೆ. 500 ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲನಿಗೆ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ಸರ್ಕಾರದಿಂದ ಸಿಗುವ ಸೌಕರ್ಯಗ ಳನ್ನು ಎಲ್ಲ ಗ್ರಾಮಗಳಿಗೆ ಕೊಡುವ ಕಾರ್ಯ ನಡೆದಿದೆ’ ಎಂದರು.

ಬೆಳ್ತಂಗಡಿ ಕ್ಷೇತ್ರಕ್ಕೆ ₹100 ಕೋಟಿ ವಿಶೇಷ ಅನುದಾನವನ್ನು ಒದಗಿಸುವು ದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದು, ಈ ಅನುದಾನ ಲಭ್ಯವಾದರೆ, ಇನ್ನುಳಿದ ಒಂದು ವರ್ಷದಲ್ಲಿ ಎಲ್ಲ ಗ್ರಾಮಗಳಿಗೆ ಇದನ್ನು ಹಂಚಿಕೆ ಮಾಡಲಾಗುವುದು. ಇದರಲ್ಲಿ ನಾಳ-ಪದ್ಮುಂಜ ರಸ್ತೆ ಅಭಿವೃದ್ಧಿಯನ್ನೂ ನಡೆಸಲಾಗುವುದು. ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸ ಬೇಕೆಂದು ಕಣಿಯೂರು ಜನತೆ ಬೇಡಿಕೆಯಾಗಿದೆ. ಶೀಘ್ರವೇ ಸರ್ವೆ ನಡೆಸಿ, ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಮಾತನಾಡಿ ಕಣಿಯೂರು ತನಕ ಈ ಮೊದಲು 5 ಕಿ.ಮೀ. ದೂರದ ಪದ್ಮುಂಜಕ್ಕೆ ಹೋಗಬೇಕಾದರೆ ಕಲ್ಲೇರಿ ಮೂಲಕವಾಗಿ ಸುತ್ತುಬಳಸಿ ತೆರಳಬೇ ಕಾಗಿತ್ತು. ಆದರೆ ಶಾಸಕ ಬಂಗೇರ ಅವರ ಕಾಳಜಿಯಿಂದ ಕಣಿಯೂರಿನಿಂದ ಪದ್ಮುಂಜಕ್ಕೆ ಸಂಪರ್ಕ ರಸ್ತೆ ದೊರೆತಿದೆ. ಇದು ಊರವರೇ ಮಾಡಿಕೊಂಡ ಪದ್ಮುಂಜ ಸಂಪರ್ಕ ರಸ್ತೆ ರಚನಾ ಸಮಿತಿ ಯ ಹೋರಾಟದ ಫಲಶ್ರುತಿಯಾಗಿದೆ ಎಂದರು.

ಪದ್ಮುಂಜ ಸಂಪರ್ಕ ರಸ್ತೆ ರಚನಾ ಸಮಿತಿ ಅಧ್ಯಕ್ಷ ಶಿವಶಂಕರ್ ನಾಯಕ್ ಮಾತನಾಡಿ, ಈ ಸಂಪರ್ಕ ರಸ್ತೆಯು ಸುಮಾರು 50 ವರ್ಷದ ಬೇಡಿಕೆಯಾ ಗಿತ್ತು. ಆದರೆ, ರಸ್ತೆ ನಿರ್ಮಾಣಕ್ಕೆ ಅಲ್ಲಿ ಖಾಸಗಿ ಜಾಗವಿರುವುದು ಅಡ್ಡಿಯಾ ಗಿತ್ತು. ಕೊನೆಗೆ ಊರವರೇ ಸೇರಿ ಕೊಂಡು ರಸ್ತೆ ರಚನಾ ಸಮಿತಿಯನ್ನು ರಚಿಸಿಕೊಂಡು ಹಣ ಸಂಗ್ರಹಿಸಿ ಇಲ್ಲಿನ ಇಬ್ಬರು ಖಾಸಗಿ ವ್ಯಕ್ತಿಗಳಿಂದ 15.50 ಲಕ್ಷ ರೂಪಾಯಿ ಕೊಟ್ಟು ರಸ್ತೆಗಾಗಿ ಜಾಗ ಖರೀದಿಸಿತು. ಇದೀಗ ಈ ರಸ್ತೆ ನಿರ್ಮಾಣಕ್ಕೆ ಶಾಸಕರು ಅನುದಾನ ಒದಗಿಸಿಕೊಟ್ಟಿದ್ದು, ನಮ್ಮ ಬಹು ವರ್ಷದ ಬೇಡಿಕೆ ಈಡೇರಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಣಿಯೂರು ಗ್ರಾ.ಪಂ. ಅಧ್ಯಕ್ಷ ಸುನೀಲ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿ ದ್ದರು. ಬೆಳ್ತಂಗಡಿ ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷೆ ದಿವ್ಯಜ್ಯೋತಿ, ಸದಸ್ಯರಾದ ಕೇಶವತಿ, ಅಮಿತಾ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಜಶ್ರೀ, ತಣ್ಣೀರು ಪಂಥ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ್, ನಿವೃತ ಪೊಲೀಸ್ ಅಧಿಕಾರಿ ಪೀತಾಂಬರ ಹೆರಾಜೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಾಯಿಲ್ತೋಡಿ ಈಶ್ವರ ಭಟ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಿರಂಜನ್ ಬಾವಂತ ಬೆಟ್ಟು, ಗ್ರಾ.ಪಂ. ಸದಸ್ಯ ಯಶೋಧರ ಶೆಟ್ಟಿ  ಇದ್ದರು. ಪುರಂದರ ಶೆಟ್ಟಿ ಸ್ವಾಗತಿಸಿ, ರಾಮಕೃಷ್ಣ ಪಿಂಡಿವನ ವಂದಿಸಿದರು. ಪ್ರೇಮನಾಥ, ನಾರಾ ಯಣ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.