ADVERTISEMENT

ರೈತರಿಗೆ 1.97ಕೋಟಿ ಕೃಷಿ ಸಾಲ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 9:36 IST
Last Updated 9 ಸೆಪ್ಟೆಂಬರ್ 2017, 9:36 IST

ಬಸವಾಪಟ್ಟಣ: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಿಂದ ಪ್ರಸಕ್ತ ವರ್ಷ 402 ಮಂದಿ ರೈತರಿಗೆ ₹ 1.97 ಕೋಟಿ ಕೃಷಿ ಸಾಲ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಜಿ.ಹಾಲನಗೌಡ ಹೇಳಿದರು. ಗುರುವಾರ ಸಂಘದ ಆವರಣದಲ್ಲಿ ನಡೆದ ಸರ್ವ ಸದಸ್ಯರ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂಘದಲ್ಲಿ ಈಗ 2,085 ಸದಸ್ಯರಿದ್ದು, ₹ 27.43 ಲಕ್ಷ ಳ ಷೇರುಹಣ ಸಂಗ್ರಹವಾಗಿದೆ. ಸರ್ಕಾರದ ಆದೇಶದಂತೆ ರೈತರ ಕೃಷಿ ಸಾಲದಲ್ಲಿ ₹ 1.45 ಕೋಟಿ ಸಾಲವನ್ನು ಮನ್ನಾ ಮಾಡಲಾಗಿದ್ದು, ಈ ಹಣವನ್ನು ಶೀಘ್ರ ಸರ್ಕಾರ ಸಹಕಾರ ಸಂಘಕ್ಕೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ಕುಬೇರನಾಯ್ಕ ಮಾತನಾಡಿ, ‘ ಸಂಘದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಉಗ್ರಾಣಕ್ಕೆ ಹಣವನ್ನು ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಸ್‌.ಲೋಕಪ್ಪ, ಬಿ.ಜಿ.ರುದ್ರೇಶ್‌, ಪಿ.ನೂರ್‌ಅಹಮದ್‌, ಎಚ್‌.ಟಿ.ಶಶಿಕಲಾ ,ಸೈಯದ್‌ ಜಾಕೀರ್‌ ಹಾಜರಿದ್ದರು. ಟಿ.ಲಕ್ಷ್ಮೀಪತಿ ಸ್ವಾಗತಿಸಿದರು. ಕೆ.ಎಂ.ಕರಿಬಸಯ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.