ADVERTISEMENT

‘ಹಿರೇವಡ್ಡಟ್ಟಿ ಕೆರೆಗೆ ನೀರು ಪೂರೈಕೆ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 10:52 IST
Last Updated 10 ಜುಲೈ 2017, 10:52 IST

ಡಂಬಳ:‘ಸಿಂಗಟಾಲೂರ ಏತನೀರಾವರಿ ಯೋಜನೆಯ ಮೂಲಕ  ತುಂಗಭದ್ರಾ ನದಿಯಿಂದ ಹಿರೇವಡ್ಡಟ್ಟಿ ಕೆರೆಗೆ ನೀರು ಭರ್ತಿಮಾಡಲಾಗಿದ್ದು, ರೈತರ ಜಮೀನು ಗಳಿಗೆ ನೀರು ಪೂರೈಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ರೋಣ ಕ್ಷೇತ್ರದ ಶಾಸಕ ಜಿ.ಎಸ್‌.ಪಾಟೀಲ ಹೇಳಿದರು.

ಹೋಬಳಿ ವ್ಯಾಪ್ತಿಯ ಹಿರೇವಡ್ಡಟ್ಟಿ ಗ್ರಾಮದ ಕೆರೆ ಹಾಗೂ ಬ್ಯಾರೇಜ್‌ ವಿಕ್ಷಣೆ ಮಾಡಿ ಮಾತನಾಡಿದ ಅವರು, ‘26 ಎಕರೆ ವಿಸ್ತಿರ್ಣವಾಗಿರುವ ಕೆರೆ ತುಂಬಿ ದ್ದರಿಂದ ರೈತರ ನೂರಾರು ಎಕರೆ ಜಮೀನು ನೀರಾವರಿ ಪ್ರದೇಶವಾಗಲಿದೆ. ರೈತರು ಭಯಪಡಬೇಕಿಲ್ಲ’ ಎಂದರು. 

ಗ್ರಾಮದ ರೈತರಾದ ಮಲ್ಲಣ್ಣ ಕೊಂಚ ಗೇರಿ, ಶಂಕ್ರಪ್ಪ ಯಳವತ್ತಿ, ಉಮೇಶ ಅಂಕದ ‘ನಿರುಪಯುಕ್ತವಾಗಿ ನೀರು ಹರಿಯದಂತೆ ಹಾಗೂ ಎಲ್ಲಾ ರೈತರಿಗೂ ಉಪಯುಕ್ತವಾಗುವ ರೀತಿಯಲ್ಲಿ ಸಣ್ಣ ಕಾಲುವೆ ನಿರ್ಮಿಸಬೇಕು’  ಎಂದರು.

ADVERTISEMENT

ವಕೀಲ ವಿ.ಆರ್. ಗುಡಿಸಾಗರ, ಪ್ರಮುಖರಾದ ಗೋಣಿಬಸಪ್ಪ ಕೊರ್ರ ಹಳ್ಳಿ, ಜಯಣ್ಣ ನಾಡಗೌಡ್ರ, ವೆಂಕಟೇಶ ಬಳ್ಳಾರಿ, ಲೋಕೇಶ ನಂದಿಕೋಲ, ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್‌ ಎಂ.ಡಿ.ತೊಗುಣಿಸಿ, ತಾಲ್ಲೂಕು ಪಂಚಾ ಯಿತಿ ಇಒ ಸಿ.ಆರ್.ಮುಂಡರಗಿ ಹಾಗೂ ಗಣೇಶ ಸಿಂಗ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.