ADVERTISEMENT

ಅವ್ಯವಸ್ಥೆ ತಾಣವಾದ ಬಸ್ ನಿಲ್ದಾಣ

ನೀರಿಲ್ಲ, ಶೌಚಾಲಯವಿಲ್ಲ; ನರೇಗಲ್‌ನಲ್ಲಿ ಪ್ರಯಾಣಿಕರಿಗೆ ತಪ್ಪದ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 10:56 IST
Last Updated 9 ಮಾರ್ಚ್ 2017, 10:56 IST
ನರೇಗಲ್‌: ಪಟ್ಟಣದ ಬಸ್‌ ನಿಲ್ದಾಣದಲ್ಲಿ ಕುಡಿಯಲು ನೀರು, ಶೌಚಾಲಯ, ಸ್ವಚ್ಛತೆ ಕೊರತೆಯಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿದೆ.
 
ಸಮಸ್ಯೆಯ ಸುಳಿ: ಪ್ರತಿದಿನ ಈ ನಿಲ್ದಾಣಕ್ಕೆ ಸುಮಾರು 225 ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ. ಅಂದಾಜು ಹದಿ ನೈದರಿಂದ ಇಪ್ಪತ್ತು ಸಾವಿರ ಪ್ರಯಾಣಿ ಕರು ನಿತ್ಯ ಪ್ರಯಾಣಿಸುತ್ತಾರೆ. ಆದರೆ, ನಿಲ್ದಾಣದಲ್ಲಿ ಕನಿಷ್ಠ ಸೌಕರ್ಯಗಳಿಲ್ಲದೆ ಪರದಾಡಬೇಕಿದೆ. ದ್ವಿಚಕ್ರ ವಾಹನ, ಇತರ ಖಾಸಗಿ ವಾಹನಗಳನ್ನು ಬಸ್‌ ನಿಲ್ದಾಣದಲ್ಲೇ ನಿಲ್ಲಿಸಲಾಗುತ್ತದೆ. ಖಾಸಗಿ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ.  ವಿದ್ಯುತ್ ಕಡಿತಗೊಂಡರೆ ಬ್ಯಾಟರಿ ವ್ಯವಸ್ಥೆ ಇಲ್ಲ ಎಂಬುದು ಪ್ರಯಾಣಿಕರ ದೂರು. 
 
ಕುಡಿಯಲು ನೀರು ಇಲ್ಲ: ಬಸ್‌ ನಿಲ್ದಾಣ ದಲ್ಲಿನ ನೀರಿನ ಟ್ಯಾಂಕ್ ನೆಪಕ್ಕೆ ಮಾತ್ರ. ಬಿಸಿಲ ಬೇಗೆಯಲ್ಲಿ ಬಾಯಾರಿಕೆ ನೀಗಿಸಿ ಕೊಳ್ಳಲು ಪ್ರಯಾಣಿಕರು ಕುಡಿಯುವ ನೀರಿಗಾಗಿ ಅಲೆದಾಡಬೇಕಿದೆ. ಬಸ್‌ ನಿಲ್ದಾಣದಲ್ಲಿ ಕೊರೆಯಿಸಿರುವ ಕೊಳವೆ ಬಾವಿ ಕೇವಲ 65 ಫೂಟ್‌ ಆಳದಲ್ಲಿ ಸಿಹಿ ನೀರು ಬಿದ್ದಿದೆ.

ಆದರೆ, ಕಳೆದ 4 ತಿಂಗ ಳಿನಿಂದ ಬೊರ್‌ವೆಲ್ ಕೆಟ್ಟಿದ್ದು, ಸಬಂಧ ಪಟ್ಟ ಅಧಿಕಾರಿಗಳು ದುರಸ್ಥಿ ಕಾರ್ಯ ನಡೆಸಿಲ್ಲ. ಸ್ಥಳೀಯ ನಿಯಂತ್ರಣಾಧಿಕಾರಿ ವಿ.ಕೆ. ಕಮಲಾಪುರ ರಿಪೇರಿಗಾಗಿ ಹಲವು ಬಾರಿ ಮೇಲಾಧಿಕಾರಿಗಳಿಗೆ  ಪತ್ರ ಬರೆದಿ ದ್ದರು. ಅಧಿಕಾರಿಗಳು ಕಣ್ಣೆತ್ತಿ ನೋಡಿಲ್ಲ. ಇದರಿಂದ ಪ್ರಯಾಣಿಕರಿಗೆ ಮಾತ್ರವಲ್ಲದೆ, ಕ್ಯಾಂಟೀನ್‌ ಮತ್ತು ಶೌಚಾಲಯ ನಿರ್ವಹ ಣೆಗಾರರಿಗೆ ತೊಂದರೆಯಾಗಿದೆ. 
 
ಕಾಮಗಾರಿ ಮುಗಿದರೂ ಬಳಕೆಗೆ ಲಭ್ಯ ಇಲ್ಲದ ಶೌಚಾಲಯ: ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬಸ್‌ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾದ ಶೌಚಾ ಲಯ ಕಾಮಗಾರಿ ಮುಗಿದು 5 ತಿಂಗಳು ಗತಿಸಿದರೂ, ಇನ್ನು ಉದ್ಘಾಟನೆ ಭಾಗ್ಯ ಕಂಡಿಲ್ಲ. ಪರಿಣಾಮ ಪಕ್ಕದಲ್ಲಿರುವ ಬಯಲು  ಶೌಚಾಲಯವನ್ನೇ ಮಹಿಳೆ ಯರು ಬಳಸುತ್ತಿದ್ದಾರೆ.

‘ನೂತನ ಶೌಚಾಲಯ ನಿರ್ವಹಣೆಗೆ ವಾರ್ಷಿಕ ₹ 50 ಸಾವಿರಕ್ಕೆ ಟೆಂಡರ್ ಕರೆಯಲಾಗಿದ್ದು, ಹಣದ ವಿಚಾರವಾಗಿ ಯಾವೊಬ್ಬ ಗುತ್ತಿಗೆದಾರರು ಟೆಂಡರ್ ಹಾಕಿಲ್ಲ. ಈ ಹಿನ್ನಲೆಯಲ್ಲಿ ನೂತನ ಶೌಚಾಲಯ ಬಳಕೆ ಮಾಡುತ್ತಿಲ್ಲ ಎಂದು ಇಲ್ಲಿನ ಅಧಿಕಾರಿ ಗಳು ‘ಪ್ರಜಾವಾಣಿ’ಗೆ ತಿಳಿಸಿದರು. 
 
ಹಳೆಯ ಶೌಚಾಲಯ  ಅವೈಜ್ಞಾನಿಕ ವಾಗಿದ್ದು, ಮಹಿಳಾ ಶೌಚಾಲಯದ ಗೋಡೆ ಚಿಕ್ಕದಾಗಿದೆ. ಸುತ್ತಮುತ್ತಲಿನ ಅಂಗಡಿಗಳಿಗೆ ಇಲ್ಲಿನ ಅವಸ್ಥೆ ಕಾಣುತ್ತದೆ. ಅಲ್ಲದೆ, ಕೆಲ ವಾಹನಗಳ ಸವಾರರು ಇಲ್ಲಿಯೆ ಪಾರ್ಕಿಂಗ್ ಮಾಡುವುದರಿಂದ  ಮಹಿಳೆಯರಿಗೆ ಮುಜುಗರಕ್ಕೆ ಒಳಗಾಗಿ ಶೌಚ ಬಳಕೆ ಮಾಡುವುದನ್ನೇ ಬಿಟ್ಟಿ ದ್ದಾರೆ. ಸದ್ಯ ಇದು ಹಂದಿಗಳ ವಾಸಸ್ಥಾನ ವಾಗಿ ಮಾರ್ಪಟ್ಟಿದೆ.
ಚಂದ್ರು ಎಂ. ರಾಠೋಡ
 
* ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರು, ಸಮರ್ಪಕ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಕೊರತೆ ಇದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು
ರಾಮಣ್ಣ ಸಕ್ರೋಜಿ, ಮಾಜಿ ಸೈನಿಕ, ನರೇಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.