ADVERTISEMENT

‘ಖಿನ್ನತೆಗೆ ಆಪ್ತ ಸಮಾಲೋಚನೆ ಪರಿಹಾರ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 5:40 IST
Last Updated 23 ಏಪ್ರಿಲ್ 2017, 5:40 IST

ಗದಗ: ಆಪ್ತ ಸಮಾಲೋಚನೆ ಮೂಲಕ ಖಿನ್ನತೆಯಿಂದ ಹೊರಬರಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ. ನಾಗರತ್ನಾ ಹೇಳಿದರು. ಇತ್ತೀಚೆಗೆ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಸಹಭಾಗಿತ್ವದಲ್ಲಿ ನಡೆದ ಮಾನ ಸಿಕ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲಸದ ಒತ್ತಡ, ಕೋಪ, ಬೇಸರ, ದುರಾಸೆ ಹಾಗೂ ಜೀವನ ಶೈಲಿಯಿಂದ ಖಿನ್ನತೆ ಆವರಿಸಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಖಿನ್ನತೆ ಯಿಂದ ಬಳಲುವವರನ್ನು ಸುತ್ತಲಿನ ಜನ, ಸ್ನೇಹಿತರು, ಸಂಬಂಧಿಕರು ಎಚ್ಚರಿಕೆ ಯಿಂದ ನೋಡಿಕೊಳ್ಳಬೇಕು, ತಕ್ಷಣವೇ ಮಾನಸಿಕ ವೈದ್ಯರ ಸಲಹೆ ಪಡೆಯಬೇಕು’ ಎಂದು ಹೇಳಿದರು.

‘ಮಕ್ಕಳು ಹೆಚ್ಚು ಅಂಕ ಗಳಿಸಲಿಲ್ಲ ಎಂದು ಪಾಲಕರು ಅವರ ಮೇಲೆ ಅನ ಗತ್ಯ ಒತ್ತಡ ಹೇರಬಾರದು. ಒತ್ತಡದಿಂದ ಮಕ್ಕಳು ಜೀವನದಲ್ಲಿ ಜುಗುಪ್ಸೆ ಹೊಂದಿ ಮಾನಸಿಕವಾಗಿ ದುರ್ಬಲರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಪಾಲಕರು ಮಕ್ಕಳನ್ನು ಎಚ್ಚರಿಕೆಯಿಂದ ಬೆಳೆಸಬೇಕು’ ಎಂದರು.‘ಒತ್ತಡ, ಮನಸ್ಸಿಗೆ ಅಹಿತಕರ ಎನಿ ಸುವ ಘಟನೆಗಳು, ನೋವು, ಮುಜು ಗುರ, ಆತಂಕಕ್ಕೆ ಒಳಗಾಗುವ ವ್ಯಕ್ತಿಗಳಿಗೆ ಖಿನ್ನತೆ ಕಾಡುತ್ತದೆ. ಕೈ ನಡುಕ, ತೊದ ಲುವಿಕೆ, ಉಸಿರಾಟ ಹೆಚ್ಚು ಕಡಿಮೆ ಆಗುವುದು ಖಿನ್ನತೆಯ ಲಕ್ಷಣಗಳಾಗಿವೆ.

ADVERTISEMENT

ಖಿನ್ನತೆ ಹೋಗಲಾಡಿಸಲು ಎಲ್ಲರೊಡನೆ ಬೆರೆಯುವುದು, ಮುಕ್ತವಾಗಿ ಚರ್ಚಿಸು ವುದು, ಮನಸ್ಸಿನಲ್ಲಿರುವುದನ್ನು ಆಪ್ತರ ಬಳಿ ಹಂಚಿಕೊಳ್ಳುವುದು ಮುಖ್ಯ. ಆಪ್ತಸಮಾಲೋಚಕರ ನೆರವು ಪಡೆದು ಖಿನ್ನತೆ ಯಿಂದ ಹೊರಬರಬಹುದು’ ಎಂದು ಮನೋವೈದ್ಯೆ ಡಾ.ವೈಶಾಲಿ ಹೆಗಡೆ ತಿಳಿಸಿದರು.ಎಂ.ಐ.ದೊಡ್ಡಮನಿ, ಪರಿಮಳಾ ಕುಲ ಕರ್ಣಿ, ಬಸವರಾಜ ಕುಕನೂರ ಕಾರ್ಯ ಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.