ADVERTISEMENT

ನೀರು: ಪೂರೈಕೆಗಿಂತ ಸೋರಿಕೆಯೇ ಹೆಚ್ಚು!

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:46 IST
Last Updated 21 ಜುಲೈ 2017, 6:46 IST

ಗದಗ: ನಗರದಲ್ಲಿ ಬೇಸಿಗೆಯಲ್ಲಿ 40 ರಿಂದ 45 ದಿನಗಳಿಗೊಮ್ಮೆ ಪೂರೈಕೆ ಯಾಗುತ್ತಿದ್ದ ಕುಡಿಯುವ ನೀರು ಈಗ ಸರಾಸರಿ ವಾರಕ್ಕೊಮ್ಮೆ ಪೂರೈಕೆಯಾಗು ತ್ತಿದೆ. ತುಂಗಭದ್ರಾ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಮ್ಮಿಗೆ ಬ್ಯಾರೇಜ್‌ಗೆ ಸಾಕಷ್ಟು ನೀರು ಹರಿದು ಬರುತ್ತಿದೆ. ಹೀಗಾಗಿ, ಜಿಲ್ಲಾ ಕೇಂದ್ರದ ನೀರಿನ ಬವಣೆ ಸ್ವಲ್ಪ ಮಟ್ಟಿಗೆ ತಗ್ಗಿದೆ.

ಆದರೆ, ನಗರದಲ್ಲಿ 24x7 ಕುಡಿಯುವ ನೀರಿನ ಯೋಜನೆಯ ಪೈಪ್‌ ಲೈನ್‌ ಅಳವಡಿಸಿರುವ ಪ್ರದೇಶಗಳಲ್ಲಿ ಈಗ ಒಳಚರಂಡಿ ಯೋಜನೆ ಕಾಮಗಾರಿಗಾಗಿ ರಸ್ತೆ ಅಗೆಯಲಾಗುತ್ತಿದೆ. ಯುಜಿಡಿ ಗುತ್ತಿಗೆದಾರರು ರಸ್ತೆ ಮಧ್ಯಭಾಗದಲ್ಲಿ ಮ್ಯಾನ್‌ಹೋಲ್‌ ನಿರ್ಮಿಸುತ್ತಿದ್ದು, ಇದಕ್ಕೆ ಅಡ್ಡ ಬರುವ ನೀರು ಪೂರೈಕೆಯ ಪೈಪ್‌ ಲೈನ್‌ ಸಂಪರ್ಕ ತಪ್ಪಿಸುತ್ತಿದ್ದಾರೆ. ಕೆಲವೆಡೆ ಈ ಪೈಪ್‌ಲೈನ್‌ ಕತ್ತರಿಸಿ ಎರಡೂ ಬದಿ ಗಳಲ್ಲಿ ಎಂಡಿಂಗ್‌ ಕ್ಯಾಪ್‌ ಹಾಕಲಾಗಿದೆ.

ಆದರೆ, ಇದನ್ನು ಸಮರ್ಪಕವಾಗಿ ಮಾಡದ ಕಾರಣ, ಕುಡಿಯುವ ನೀರು ಪೂರೈಕೆಯಾದಾಗ ಸೋರಿಕೆಯಾಗುತ್ತಿದೆ. ಹೀಗಾಗಿ, ನಗರಸಭೆ ನೀರು ಪೂರೈಸಿದರೂ ಕೆಲವು ಬಡಾವಣೆಯ ನಿವಾಸಿಗಳಿಗೆ ಕುಡಿಯುವ ನೀರಿನ ಭಾಗ್ಯ ಲಭಿಸುತ್ತಿಲ್ಲ.

ADVERTISEMENT

ಸದ್ಯ ಆನಂದ ನಗರ, ಹುಡ್ಕೋ ಕಾಲನಿ, ಕೆ.ಸಿ ಪಾರ್ಕ ಮತ್ತು ಪಿ & ಟಿ ಕ್ವಾಟರ್ಸ್ ಪ್ರದೇಶಗಳ 11 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಪ್ರಾಯೋಗಿಕವಾಗಿ 24x7 ನೀರು ಪೂರೈಕೆ ಮಾಡಲಾಗುತ್ತಿದೆ. ಹೆಸರಿಗೆ ನಿರಂತರ ನೀರು ಪೂರೈಕೆ ಯಾದರೂ, ಎರಡು ಮೂರು ದಿನಗಳಿ ಗೊಮ್ಮೆ ಅರ್ಥಗಂಟೆಗಳ ಕಾಲ ಮಾತ್ರ ನೀರು ಪೂರೈಸಲಾಗುತ್ತಿದೆ.

ಆದರೆ, ಈಗ ಒಳಚರಂಡಿ ಯೋಜನೆ ಕಾಮಗಾರಿಯಿಂದ ಪೂರೈಕೆಯಾಗುವ ನೀರಿನಲ್ಲಿ ಅರ್ಧದಷ್ಟು  ಹರಿದು ಚರಂಡಿ ಸೇರು ತ್ತಿದೆ. ವಿವೇಕಾನಂದ ಬಡಾವಣೆ ಪ್ರದೇಶದಲ್ಲಿ ಯುಜಿಡಿ ಕಾಮಗಾರಿ ನಡೆಯು ತ್ತಿದ್ದು, ಹಲವೆಡೆ 24x7 ನೀರು ಪೂರೈಕೆ ಪೈಪ್‌ ಸೋರಿಕೆಯಾಗುತ್ತಿದೆ.

ಕೆಸರು ಗದ್ದೆ: ‘ರಸ್ತೆಯ ಮಧ್ಯಭಾಗವನ್ನು ಅಗೆದು ಯುಜಿಡಿ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ಅಗೆದ ರಸ್ತೆಯ ಹೊಂಡ ವನ್ನು ಸರಿಯಾಗಿ ಮುಚ್ಚದ ಕಾರಣ ಮಳೆಯಾದಾಗ ನೀರು ನಿಂತು ವಾಹನ ಚಾಲಕರು ಪರದಾಡುವಂತಾಗಿದೆ. ಓಡಾಡಲು ರಸ್ತೆಯೇ ಇಲ್ಲವಂತಾಗಿದೆ. ಮ್ಯಾನ್‌ ಹೋಲ್‌ ನಿರ್ಮಿಸಿದ ಸ್ಥಳಗಳಲ್ಲಿ ಗುಂಡಿ ಗಳು ಬಿದ್ದಿವೆ. ಚೇಂಬರ್‌ ಮಟ್ಟಕ್ಕೆ ಮಣ್ಣು ಹಾಕಿ ಮಟ್ಟ ಮಾಡದೆ ಹಾಗೆಯೇ ಬಿಟ್ಟಿ ರುವುದರಿಂದ ತೀವ್ರ ತೊಂದರೆ ಅನು ಭವಿಸುವಂತಾಗಿದೆ’ ಎಂದು ವಿವೇಕಾ ನಂದ ಬಡಾವಣೆಯ ನಿವಾಸಿ ಶ್ರೀನಿವಾಸ ಕರಿ  ದೂರಿದರು.

‘ನಗರದಲ್ಲಿ ಒಂದಲ್ಲ ಒಂದು ಕಾಮ ಗಾರಿಗಳ ಹೆಸರಿನಲ್ಲಿ ರಸ್ತೆ ಅಗೆಯುತ್ತಲೇ ಇರುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಗುತ್ತಿಗೆ ದಾರರು ತಮ್ಮ ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಮನೆಯಿಂದ ಹೊರಗೆ ಕಾಲಿಡಲು ಆಗುತ್ತಿಲ್ಲ. ನಗರಾಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಬಡಾವಣೆ ನಿವಾಸಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.