ADVERTISEMENT

ವೀರಭದ್ರೇಶ್ವರ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಮೇ 2017, 9:30 IST
Last Updated 13 ಮೇ 2017, 9:30 IST

ಬೆಳವಣಿಕಿ (ರೋಣ): ಗ್ರಾಮದಲ್ಲಿ ವೀರಭದ್ರೇಶ್ವರ ರಥೋತ್ಸವ ಅಂಗವಾಗಿ ಸಾಮೂಹಿಕ ವಿವಾಹ, ಕುಂಭ ಮೆರವಣಿಗೆ, ಧರ್ಮಸಭೆ, ತುಲಾಭಾರ, ಜಂಗಮ ವಟುಗಳಿಗೆ ಅಯ್ಯಾಚಾರ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

‘ಸಮಾಜಮುಖಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಧಾನ, ಧರ್ಮ, ಭಕ್ತಿ ಗುಣಗಳನ್ನು ಅಳವಡಿಸಿಕೊಂಡವರ ಬದುಕು ಸಾರ್ಥಕವಾಗುತ್ತದೆ’ ಎಂದು ತೋರಗಲ್ಲನ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಜಾತ್ರೆಯ ನೆಪದಲ್ಲಿ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಬೇಕು. ಧರ್ಮ ತತ್ವಗಳ ಹಿನ್ನೆಲೆಯಲ್ಲಿ ಜೀವನ ನಡೆಸಬೇಕು, ಸಮಾಜದ ಕಲ್ಯಾಣಕ್ಕೆ ಶ್ರಮಿಸಬೇಕು’ ಎಂದರು. ತೋಗುಣಶಿ ಕುಟುಂಬದವರಿಂದ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಅವರ 823ನೇ ತುಲಾಭಾರ ನಡೆಯಿತು. 

ADVERTISEMENT

ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಶಿವಾನಂದಮಠ ಶ್ರವಣಕುಮಾರ ಸ್ವಾಮೀಜಿ, ಮುದಿಯಪ್ಪಜ್ಜ ಹಿರೇಮಠ, ಶರಣಯ್ಯಜ್ಜ ಹಿರೇಮಠ, ಬಸವರಾಜ ಹಿರೇಮಠ, ಗಿರೀಶ ಹಿರೇಮಠ, ಪುಟ್ಟರಾಜ ಹಿರೇಮಠ, ಆನಂದ ಭೂಪಳಾಪೂರಮಠ, ಸೋಮಶೇಖರ ಚರೇದ ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.