ADVERTISEMENT

ಸಿಮೆಂಟ್‌ ವಿದ್ಯುತ್‌ ಕಂಬ ಅಳವಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 5:54 IST
Last Updated 30 ಜನವರಿ 2017, 5:54 IST
ಸಿಮೆಂಟ್‌ ವಿದ್ಯುತ್‌ ಕಂಬ ಅಳವಡಿಸಲು ಒತ್ತಾಯ
ಸಿಮೆಂಟ್‌ ವಿದ್ಯುತ್‌ ಕಂಬ ಅಳವಡಿಸಲು ಒತ್ತಾಯ   

ಗದಗ: ಬೆಟಗೇರಿಯಲ್ಲಿರುವ ಕಬ್ಬಿಣದ ವಿದ್ಯುತ್‌ ಕಂಬಗಳನ್ನು ತೆಗೆದುಹಾಕಿ, ಸಿಮೆಂಟ್‌ ಕಂಬಗಳನ್ನು ಅಳವಡಿ ಸುವಂತೆ ಒತ್ತಾಯಿಸಿ ಬೆಟಗೇರಿ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಗಣೇಶ ಸಿಂಗ್‌ ಬ್ಯಾಳಿ ನೇತೃತ್ವದಲ್ಲಿ ಮುಖಂಡರು, ಸದಸ್ಯರು ಹೆಸ್ಕಾಂ ಬೆಟಗೇರಿಯ ಶಾಖಾಧಿಕಾರಿ ಕಣವಿ ಅವರಿಗೆ ಮನವಿ ಸಲ್ಲಿಸಿದರು.

ಕೋರ್ಟ್್ ಕೆಳ ಸೇತುವೆಯಿಂದ ಬೆಟಗೇರಿ ಪೊಲೀಸ್‌ ಠಾಣೆಯವರೆಗೆ 30, ಟೆಂಗಿನಕಾಯಿ ಬಜಾರದಿಂದ ಕುರಟ್ಟಿಪೇಟೆಯವರೆಗೆ 15 ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಕಬ್ಬಿಣದ ಕಂಬಗಳ ಮೇಲೆ ಜೇಡರ ಬಲೆಯಂತೆ ವಿದ್ಯುತ್ ವೈರ್‌ಗಳನ್ನು ಜೋಡಿಸಲಾಗಿದೆ. ಆಕಸ್ಮಿಕವಾಗಿ ಕಬ್ಬಿಣದ ಕಂಬಗಳಿಗೆ ವೈರ್‌ಗಳು ತಗಲಿ ಸಾವು, ನೋವು ಸಂಭವಿಸಬಹುದು. ಆದ್ದರಿಂದ ಕಬ್ಬಿಣದ ಕಂಬಗಳು ಬದಲಾಯಿಸಿ, ಸಿಮೆಂಟ್‌ನ ಕಂಬಗಳ ಅಳವಡಿಸಬೇಕು ಎಂದು ಆಗ್ರಹಿಸಿದರು.

ಜನರ ಹಾಗೂ ಜಾನುವಾರು ಪ್ರಾಣಾಪಾಯಕ್ಕೆ ಸಿಲುಕಬಾರದು ಎನ್ನುವ ಕಾರಣಕ್ಕೆ ಈ ಕಂಬಗಳು ಬದಲಾಯಿ ಸಬೇಕು. ಒಂದು ತಿಂಗಳೊಳಗೆ ಸಿಮೆಂಟ್‌ ಕಂಬಗಳನ್ನು ಅಳವಡಿಸದಿದ್ದರೆ, ಹೋ ರಾಟ ಮಾಡಲಾಗುವುದು ಎಂದರು.

ಪ್ರಕ್ರಿಯೆ ನೀಡಿದ ಬೆಟಗೇರಿಯ ಶಾಖಾಧಿಕಾರಿ ಕಣವಿ ಅವರು, ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಶೀಘ್ರವೇ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾ ಗುವುದು ಎಂದು ಭರವಸೆ ನೀಡಿದರು.

ಕೃಷ್ಣಾ ರಾಯಭಾಗಿ, ಸಿಂದಗಿ ಚಾಚಾ, ವಿಷ್ಣು ಕಲಾಲ, ಏಕನಾಥ ಚೋಳಿನ, ಈರಣ್ಣ ಪಟ್ಟಣಶೆಟ್ಟಿ, ಕೆ.ಆರ್.ಮೇರವಾಡೆ, ವೀರಣ್ಣ ಜ್ಯೋತಿ, ಪ್ರೇಮನಾಥ ಭರದ್ವಾಡ, ನಾಮದೇವ ಜಗದಾಳೆ, ಲಕ್ಷ್ಮಣ ವಾಲ್ಮೀಕಿ, ರಾಮಣ್ಣ ಗಡಗಿ, ಮನ್ಸೂಖಲಾಲ ಪುಣೇಕರ, ಜಂಬಣ್ಣ ಹುಡೇದ, ವೀರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.