ADVERTISEMENT

ಹಠಯೋಗಿ ವೀರಪ್ಪಜ್ಜನವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 6:14 IST
Last Updated 30 ಜನವರಿ 2015, 6:14 IST

ನರೇಗಲ್: ಇಲ್ಲಗೆ ಸಮೀಪದ ಕೋಡಿಕೂಪ್ಪದ ಹಠಯೋಗಿ ವೀರಪ್ಪಜ್ಜನವರ ಜಾತ್ರಾ ಮಹೋತ್ಸವದ ಅಂಗ­ವಾಗಿ ಗುರುವಾರ ಬೆಳಿಗ್ಗೆ 7ಕ್ಕೆ ಗದ್ದುಗೆಗೆ ಅಭಿ­ಷೇಕ ಹಾಗೂ ಪೂಜಾ ವಿಧಿವಿಧಾನಗಳು ಜರುಗಿದವು.

ಹಾಲಕೆರೆ ಅನ್ನದಾನೇಶ್ವರ ಮಠದ ಡಾ. ಅಭಿನವ ಅನ್ನದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾ­ರ್ಯ ಸ್ವಾಮೀಜಿ ಸಮ್ಮುಖದಲ್ಲಿ ನೂತನ ತೆರಿಗೆ ಮಹಾಪೂಜೆ ನೆರವೇರಿಸಲಾಯಿತು.

ಹುಚ್ಚಿರೇಶ್ವರ ರಥೋತ್ಸವವವು ಸಂಭ್ರಮದಿಂದ ನೆರವೇರಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಸಿದರು. ರಥೋತ್ಸವ ಸಾಗಿಬರುವ ದಾರಿಯಲ್ಲಿ ಜಾನಪದ ಮೇಳಗಳಾದ  ಭಜನೆ, ಡೂಳ್ಳುವಾಧ್ಯ,ಕಹಳೆ ಸೇರಿದಂತೆ ವಿವಿಧ ವಾದ್ಯಗಳು ಜಾತ್ರೆಯಲ್ಲಿ ಆಕರ್ಷಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.