ADVERTISEMENT

ಏಕತೆ, ಪರಿಸರ ಸಂರಕ್ಷಣೆಗೆ ಸೈಕಲ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 9:49 IST
Last Updated 23 ಜುಲೈ 2017, 9:49 IST

ಸಕಲೇಶಪುರ: ಏಕತೆ, ಸ್ವಚ್ಛತೆ, ಪರಿಸರ ಸಂರಕ್ಷಣೆ, ಪೌಷ್ಟಿಕ ಆಹಾರ ಬಳಕೆ ಜಾಗೃತಿ ಕುರಿತು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್ ನೇತೃತ್ವದಲ್ಲಿ ಬೀದರ್‌ನಿಂದ ಬೆಂಗಳೂರುವರೆಗೆ 1,750 ಕಿ.ಮೀ. ಸಾಗುತ್ತಿರುವ ಸೈಕಲ್‌ ಜಾಥಾ ಶನಿವಾರ ಪಟ್ಟಣಕ್ಕೆ ಬಂದಾಗ ಅದ್ಧೂರಿ ಸ್ವಾಗತ ಹಾಗೂ ಬೀಳ್ಕೊಡಲಾಯಿತು.

ಡಿವೈಎಸ್‌ಪಿ ಜಗದೀಶ್‌, ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ವೆಂಕಟೇಶ್, ಹಾಸನ  ಪಿಎಸ್‌ಎಸ್‌ಗಳಾದ ಕೃಷ್ಣ, ಶರತ್‌ ಹಾಗೂ ವಿದ್ಯಾರ್ಥಿಗಳು ಸ್ವಾಗತಿಸಿದರು.
ಜಾಥಾ 28ಕ್ಕೆ ಬೆಂಗಳೂರು ತಲುಪಲಿದೆ. 26 ಜಿಲ್ಲೆಗಳ ಮಾರ್ಗದಲ್ಲಿ ಸಾಗುತ್ತಿದ್ದು ಈಗಾಗಲೇ ಕೆಲವೆಡೆ ಗಿಡಗಳನ್ನು ನೆಡಲಾಗಿದೆ. ಸ್ವಚ್ಛತೆ ಮತ್ತು ಸಾಕ್ಷರತೆ  ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ ಎಂದು ಭಾಸ್ಕರ್‌ರಾವ್‌ ಸುದ್ದಿಗಾರರಿಗೆ ಹೇಳಿದರು.

ಸಾಕಷ್ಟು ಸಂಘ ಸಂಸ್ಥೆಗಳು ಅಲ್ಲಲ್ಲಿ ತಮ್ಮ ಜಾಥಾಕ್ಕೆ ಸಾಥ್‌ ನೀಡಿದ್ದಾರೆ. ಸೈಕಲ್‌ ತುಳಿಯುವುದು ಒಂದು ಸಾಹಸ, ಪೊಲೀಸ್‌ ಇಲಾಖೆಗೆ ಇಂತಹ ಒಂದು ಸಾಹಸ ತರಬೇತಿ ಅಗತ್ಯವಿದೆ. ‘ನಮಗೆ ಶಕ್ತಿ ಬಂದರೆ ತಾನೇ ನಾವು ಬೇರೆಯವರಿಗೆ ರಕ್ಷಣೆ ನೀಡುವುದಕ್ಕೆ ಸಾಧ್ಯ’ ಈ ಹಿನ್ನೆಲೆಯಲ್ಲಿ  ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ADVERTISEMENT

ಎಡಿಜಿಪಿ ಭಾಸ್ಕರ್‌ ರಾವ್‌ ಅವರನ್ನು ನಿವೃತ್ತ ತಹಶೀಲ್ದಾರ್‌ ಅಣ್ಣೇಗೌಡ ಸನ್ಮಾನಿಸಿದರು. ಕಮಾಂಟೆಂಟ್‌ ಜನಾರ್ಧನ್‌, ಕೆಎಸ್‌ಆರ್‌ಪಿ ಹಾಸನ ವಿಭಾಗದ ಕಮಾಂಡೆಂಟ್‌ ಕೃಷ್ಣಪ್ಪ  ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.